ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.
ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು ಮೊಬೈಲ್ ಓಪನ ಮಾಡಿ ವ್ಯಾಟ್ಸಾಪ ಮೆಸ್ಸೇಜುಗಳನ್ನು ಒಂದೊಂದೇ ಓದತೊಡಗಿದಳು.
ಕೊನೆಯಲ್ಲಿ ಅಪರಿಚಿತ ನಂಬರೊಂದು ಅವಳ ಮೊಬೈಲಿಗೆ ಅಪ್ಲೋಡ ಆಗಿತ್ತು.ಅವಳು ಅದನ್ನು ನೋಡುತ್ತಿದ್ದಂತೆ ಕುತುಹಲದ ಕುಲುಮೆಯಾದಳು ಅವಳು ಅದನ್ನೇ ನೋಡುತ್ತಾ ನೋಡುತ್ತಾ ‘ ಆಂ …..’ ಯಾರಿರಬಹುದು ….? ಇವರು….? ತನ್ನ ಕತೆ ಕವನ ಅಷ್ಟು ಪ್ರಸಿದ್ದವಾಗಿ ಬಿಟ್ಟೆವೇ……! ?”ಒಂದು ಕ್ಷಣ ಪುಳಕಗೊಂಡಳು. “ಯಾರೋ ಮೆಚ್ಚಿ ಮೆಸ್ಸೆಜ ಮಾಡಿದ್ದಾರೆ ನನ್ನ ಅಭಿಮಾನಿಗಳು” ಎಂದು ಬೀಗಿದಳು.
ಎನು ಬರೆದಿರಬಹುದು ಕಾತರಿಸಿ ಟೆಕ್ಸ ಓಪನ್ ಮಾಡಿದಳು.
ಅಲ್ಲಿ ಏನೂ ಇರಲಿಲ್ಲ ಮಟ ಮಟ ಮಧ್ಯಾನ. ಅವಳು ಒದ್ದಾಡಿದಳು ಯಾರಿವರು….? ಏನೂ ಇಲ್ಲ……!!
ಅವಳು ಕುತುಹಲ ತಡೆಯದೇ ಯಾರೆಂಬುದನ್ನು ತಿಳಿದುಕೊಳ್ಳಲು
” Who…..? ” ಎಂದಳು.
” I Ameenuddeen ” ಉತ್ತರ ಬಂತು.
ಅವಳು ಹೆಸರನ್ನು ಓದಿ ಕಂಪಿಸಿದಳು
ಕೈ ಕಾಲು ನಡುಗತೊಡಗಿದವು.
ಮೈಯಲ್ಲಿಯ ಶಕ್ತಿ ಒಂದುಗೂಡಿಸಿಕೊಂಡು ಆರಿದ ಗಂಟಲಿಗೆ ಉಗುಳು ನುಂಗುತ್ತಾ…
“Who……”? ಎಂದು ಕೇಳಿದಳು.
I don’t know English
“Urdu speek ” ಅದು ಒತ್ತಾಯಿಸಿತು. ಅವಳು ಮತ್ತೆ
” What is the matter …? ” ಗದರಿದಳು ಹುಚ್ಚಿಯಂತೆ.
” I Ameenuddeen…..
” Your name …..?”ಎಂದಿತು.
ಇವಳಿಗೆ ಏನೂ ತಿಳಿತದಂತಾಯಿತು.
ನನ್ನ ಹೆಸರು ಇವಗ್ಯಾಕ …..? ನನ್ನ ಹೆಸರಿಗೆ ಈತನದೇನು ಸಂಭಂದ…….? ಇದೆ. ಅವಳು ಹುಸಿ ನಗೆ ನಕ್ಕಳು .ಆ ರಾತ್ರಿಯಲ್ಲಿ ಅವನ ಅಕ್ಷರಗಳು ಅಸಂಬದ್ದವಾಗಿ ಕಂಡವು. ಅವಳು “ಥೂ ….”ಎನ್ನುತ್ತಾ ಸರಿಯಾದ ಬಡಿಗೆ ಹಿಡಿದಳು.
” I am SP”
” SP……? ” ಪ್ರಸ್ನಿಸಿತು.
ಅವಳು “Yes” ಎಂದು ದೃಡೀಕರಿಸಿದಳು.
“Your name…?.” ಮತ್ತೆ ಬಡಬಡಿಸಿತು.
ಅವಳು ಮೈ ಮೇಲೆ ಹಿಡಿತ ತಪ್ಪಿದಳು
ಶಬ್ದಕ್ಕೆ ಪುಟಿವ ಹಾವ ಕಂಡು.
ಅವಳು ಆಕ್ರಂದಿಸುತ್ತಾ ಕುರ್ಚಿಯ ಮೇಲೆ ಉಸ್ಸೆಂದು ಕುಳಿತಳು. ವಿದ್ಯುತ್ ಉರಿಯುತ್ತಿತ್ತು.ಗಂಡ ಆನಂದ ಹಾಸಿಗೆಯಲ್ಲಿ ನಿದ್ರಿಸುತ್ತಿದ್ದವ ಮಗ್ಗುಲನ್ನು ಬದಲಿಸಿ ತನ್ನ ಕೈಯನ್ನು ಅವಿರತಳ ಮೇಲೆ ಚೆಲ್ಲಿದ. ಆದರೆ ಅವಿರತ ಳಿಲ್ಲದ ಆ ಕೈ ನೆಲಕ್ಕೆ ಅಪ್ಪಳಿಸಿ ನೋವಾಯಿತು. ನಿದ್ದೆಯಲ್ಲಿದ್ದ ಕಣ್ಣು ತೆರೆದು ನೋಡಿದ
ಅವಿರತಳು ಕುರ್ಚಿಯಲ್ಲಿ ಒರಗಿದ್ದಳು.
ಈತ ಹಾಸಿಗೆಯಿಂದ ಎದ್ದು ಹೋದ ಮೊಬೈಲ್ ಟೆಕ್ಸಿನಲ್ಲಿ ಬೆಳಕು ಇನ್ನೂ ಹೊಳೆಯುತ್ತಿತ್ತು. ಆತ ಮೊಬೈಲ ಎತ್ತಿ ಟೆಕ್ಸಗಳನ್ನು ಓದತೊಡಗಿದ. ಆನಂದನಿಗೆ ಕೋಪ ಉಕ್ಕಿ ಬಂತು. ಸರಿ ಹೇಳತೇನಿ ಹೆಸರು ಸ್ವಲ್ಪು ಇರು ಎಂದು ಅಪ್ಲೋಡ ನಂಬರಿಗೆ ಕಾಲ ಮಾಡಿದ.
” Hallo, …..” ಕೂಗಿದ.ಆ ಹೆಣ್ಣು ದನಿ ಕೇಳಿದ ಅಮೀನುದ್ದೀನ ಹುಚ್ಚಾದನೋ……!?
” Hallo, ….Hallo……..ನಾ…..ಅಮೀನುದ್ದೀನ…” ಬಡಬಡಿಸಿದ.
” ರೀ……ಏನು ಅಂದರೆ….. ನಿಮಗೆ ನನ್ನ ಹೆಸರು ಬೇಕು ತಾನೆ…….?” ಆನಂದನ ಮಾತಿನಲ್ಲಿ ನಾಚಿಕೆ ತುಂಬಿತ್ತು.
” ಆಂ……Plz…..” ಅತ್ತಿಂದ ದನಿ.
“ಏನು ಅಂದ್ರೆ …..ಹೇಳ್ಳಾ…….
, ಏನು ಅಂದ್ರೆ…….ಹೇಳ್ಳಾ……..
” ಆನಂದ ವೈಯಾರದಲ್ಲಿದ್ದ.
” ಹೆಸರೇ ಇಷ್ಟು ತಡವಾದರೆ ಮುಂದ ಹೆಂಗ ಗತಿ
……ಅಯ್ಯೋ…..ದೇವರೇ…..!!” ಅಮೀನುದ್ದೀನ ಚಡಪಡಿಸುತ್ತಲ್ಲಿದ್ದ.
” ಸೈ ……ನಾಜ….” ವೈಯಾರದಿಂದ ಹೇಳಿದ.
ಮತ್ತೇನು ಬೇಕು ರೀ……..ನಾನೀಗಲೇ ರೆಡಿ……” ಆನಂದ ಸಂಭಾಷಣೆಯಲ್ಲಿ ಮಗ್ನನಾಗಿದ್ದ.
” ನಾ…..ನಾಳೆ ಹೇಳುವೆ. ಇಂದು ಇಷ್ಟೇ ಸಾಕು….” ಅಮೀನುದ್ದೀನ ಕುರಿಗೆಬಲೆ ಹಾಕಿದ ತೃಪ್ತಿಯಲ್ಲಿದ್ದ.
“. ಛೀ …ಹೋಗಿಯಪ್ಪ ನಿಮ್ಮ ದನಿ ಎಷ್ಟು ಸಿಹಿಯಾಗಿದೆ. ನಾನೊಮ್ಮೆ……!” ಪ್ರತಿ ಬಲೆ ಬೀಸಿದ.
” ಹೌದಾ…….!? ಈಗ ಸಾಧ್ಯಾನಾ….!? ಅಯ್ಯೋ…ಅಲ್ಲಾ ಅದೆಷ್ಟು ಬೇಗ ಪ್ರತ್ಯಕ್ಷನಾಗಿ ಬಿಟ್ಟಿಯೋ ತಂದೆ. ನಿನ್ನ ಮಹಿಮೆ ಅಪಾರವಾದದ್ದೋ…..!!ನಿನಗೆ ಅಲ್ಲಾಬ್ಬಕ್ಕ ಬೆಳ್ಳಿ ಕುದುರಿ ಮಾಡಿಸಿ ಕೊಡತೇನೋ ” ಅತ್ತ ಚಡಪಡುಸಿತು ದನಿ.
” place …..! “ಹೇಳಿ
ಆನಂದ ಮುನ್ನುಗ್ಗಿದ.
” ಸರಕಾರಿ ದವಾಖಾನೆ ಸರ್ಕಲ್ಲ ……ಆಗಬಹುದಾ……?” ಅಮೀನುದ್ದೀನನ ಪ್ರಶ್ನೆ.
” ಭಯಬೇಡ …..ಒಂದು ನಿಮಿಷದಲ್ಲಿ.
ಆನಂದ ಮುಖಕೆ ಮುಚ್ಚಿದ ಬುರ್ಖಾ ತೆರೆದಾಗ ಅಮೀನುದ್ದೀನನ ಕೈ ಆತನ ಕಾಲಕೆಳಗೆ ಒದ್ದಾಡುತ್ತಿತ್ತು.
” ಸಾಕಲ್ಲವೇ….ಹೆಸರು…..” ಆನಂದ ನಿರಾಳನಾಗಿದ್ದ.
ಯಮುನಾ.ಕಂಬಾರ
ರಾಮದುರ್ಗ