spot_img
spot_img

ಕನ್ನಡ ಕವಿ ಕಾವ್ಯ ಪರಿಚಯ: ವಿನಾಯಕ ಕೃಷ್ಣ ಗೋಕಾಕ್

Must Read

spot_img

ವಿನಾಯಕ ಕೃಷ್ಣ ಗೋಕಾಕ್

💠 ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.

💠 ಜನನ: 9-ಆಗಸ್ಟ್ -1909

💠 ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿ

💠 ಕಾವ್ಯನಾಮ: “ವಿನಾಯಕ” (ನವ್ಯತೆಗೆ ಬುನಾದಿ ಹಾಕಿದವರು)

💠ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

💠ನಿಧನ : 28 ಏಪ್ರಿಲ್ 1992 (ವಯಸ್ಸು 82)

ಸಾಹಿತ್ಯಿಕ ಜೀವನ

📌 ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ),
ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ),
ಸಮುದ್ರ ಗೀತೆಗಳು, ಅಭ್ಯುದಯ, ವಿನಾಯಕರ ಸುನೀತಗಳು, ನವ್ಯ ಕವಿತೆಗಳು, ಉಗಮ, ಚಿಂತನ, ಬಾಳದೇಗುಲದಲ್ಲಿ, ದ್ವಾವಾಪೃಥಿವೀ, ಉರ್ಣನಭ, ಇಂದಲ್ಲ ನಾಳೆ (ಚಂಪು), ಭಾರತಸಿಂಧುರಶ್ಮಿ, ಹಿಗ್ಗು,
ನವ್ಯ ಗೀತೆಗಳು (ಹೊಸ ಛಂದೋ ಮಾರ್ಗಗಳು)

🔹 ಕಾದಂಬರಿಗಳು : ಇಜ್ಜೋಡು, ಸಮರಸವೇ ಜೀವನ, ದಲಿತ ಸಮುದ್ರಯಾನ, ಚೆಲುವಿನ- ನಿಲುವು, ಜೀವನ ಪಾಠಗಳು.

🔶 ಅನುವಾದ : ನೂತನ ಯುಗದ ಪ್ರವಾದಿ

▪️ ನಾಟಕಗಳು: ಜನನಾಯಕ,ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ, ಶ್ರೀಮಂತ.

◾️ ವಿಮರ್ಶಾ ಗ್ರಂಥಗಳು : ಸಾಹಿತ್ಯದಲ್ಲಿ ಪ್ರಗತಿ, ನವ್ಯತೆ ಹಾಗು ಕಾವ್ಯಜೀವನ, ವಿಶ್ವಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ, ಕವಿ-ಕಾವ್ಯ, ಸೌಂದರ್ಯಮೀಮಾಂಸೆ, ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗಶೀಲತೆ, ಇಂದಿನ ಕನ್ನಡ ಕಾವ್ಯದ ಗೊತ್ತು – ಗುರಿಗಳು.

◼️ ಪ್ರವಾಸ ಕಥನಗಳು: ಸಮುದ್ರದೀಚೆಯಿಂದ, ಸಮುದ್ರದಾಚೆಯಿಂದ.

⬛️ ಸಂಪಾದನೆ : ವಿಮರ್ಶಾ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ.

🔳 ಇತರೆ ಕವಿತೆಗಳು: ಅರ್ಪಣಾ ದೃಷ್ಟಿ, ಇಂದಿನ ಕರ್ನಾಟಕ, ಸಪ್ತಸಿಂಧು ದರ್ಶನ, ಸಪ್ತ ರಶ್ಮಿ, ಋಗ್ವೇದದಲ್ಲಿ ಕ್ರಾಂತದೃಷ್ಟಿ.

🔷 ಇಂಗ್ಲಿಷ್ ಕಾವ್ಯಗಳು: ನರಹರಿ, ಪ್ರಾಫೆಟ್ ಆಫ್ ನ್ಯೂ ಇಂಡಿಯಾ, ಇನ್ ಲೈಫ್ ಟೆಂಪಲ್ ಕವನಸಂಕಲನಗಳು, ದಿ ಸಾಂಗ್ ಆಫ್ ಲೈಫ್.

ಪ್ರಶಸ್ತಿಗಳು

🏵 ಜ್ಞಾನಪೀಠ ಪ್ರಶಸ್ತಿ –1990
(ಭಾರತಸಿಂಧುರಶ್ಮಿ )

🏵 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ–1960 (ದ್ವಾವಾಪೃಥಿವಿ)

🏵 ಪದ್ಮಶ್ರೀ ಪ್ರಶಸ್ತಿ –1961

ವಿಶೇಷ ಅಂಶ

❇️ 1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!