ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

Must Read

ಸ್ನೇಹ ಎಂದೇ ನೀ

ಸ್ನೇಹ ದಾಟಿ ಪ್ರೇಮವೆಂದೇ ನಾ
ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ
ನನ್ನ ಭಾವ ತರಂಗದ ಮಾತೆಂದು
ಮೌನಿಯಾದೆ ನಾ……

ಯಾರದೋ ಶಾಪಕ್ಕೆ ಮರೆತು
ಹೊರಟೆಯಾ ನನ್ನ
ನಿನ್ ಎದುರಲೇ ನಿಂತು ನಿನ್ನವನೆಂದು
ನೆನಪಿಸುತಿಹೇ ನಾ ! ಕ್ರೋಧದಿ ತೋರುವ
ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ

ನೀ ಮರೆತು ಮರೆಯಾದರು ಈ
ಹೃದಯ ನಿನ್ನದೆಂದು ಮೌನಿಯಾಗಿಹೆ ನಾ
ದುಃಖದ ಕಡಲಲಿ ಕೊನೆಯಾಯಿತು
ನನ್ನ ಪ್ರೀತಿಯ ಪಯಣ

ಪ್ರೀತಿ ಹುಟ್ಟಿತೆಂದು
ಹೇಳಲಾರದೆ ನಿಂದೆ ನೀ
ಕೊಳಲ ನಾದಕೆ ಮೈ ಮರೆತು
ಸಖನ ರಾಸಲೀಲೆಯೊಳು ಮುಳುಗಿಹೆ ನೀ

ಪ್ರೀತಿಗೆ ಮೋಹವೆಂದ ನಾ
ಅವಳ ಮನಸ ಸೂರೆಗೊಳಿಸಿದವ ನಾ
ನಾನವಳ ಮನದೊಡೆಯನಾದರೇನು
ರಾಧೆ ನನ್ನವಳಲ್ಲ

ಆನಂದ ಬಬಲಿ, ನಾಗನೂರ
ಜಿಲ್ಲಾ – ಬೆಳಗಾವಿ

Latest News

ಜಲಜೀವನ ಮಿಶನ್ ಸಫಲಗೊಳಿಸಲು ಶಾಸಕ ಮನಗೂಳಿ ಕರೆ

ಸಿಂದಗಿ; ಜಲಜೀವನ ಮಿಶನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಕಷ್ಠು ಹಣ ವ್ಯಯ ಮಾಡಿದೆ ಆದರೆ...

More Articles Like This

error: Content is protected !!
Join WhatsApp Group