spot_img
spot_img

ಗಡಿಯಲ್ಲಿ ನುಡಿ ಕಟ್ಟಿ ಕನ್ನಡದ ತೇರು ಎಳೆದ ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕ ನಿಪ್ಪಾಣಿ (ಕೆಎಸ್ ಆರ್ ಟಿ ಸಿ)

Must Read

- Advertisement -

ಭಾರತದ ಒಂದು ಭಾಗ ಕನಾ೯ಟಕ. ಸುತ್ತಲಿನ ತೆಲುಗು ತಮಿಳು ಮಲಯಾಳ,ಮರಾಠಿ ಪ್ರಭಾವವನ್ನು ದೂರದ ಆದಿಲ್ ಶಾಹಿ ಮತ್ತು ಬ್ರಿಟಿಷರ ದಾಳಿಯನ್ನು ಜೀಣಿ೯ಸಿಕೊಂಡು ಕನ್ನಡವನ್ನು ಎತ್ತಿ ಹಿಡಿದವರು ಇಲ್ಲಿಯ ಜನ.ಇಂತಹ ಪ್ರದೇಶದ ಗಡಿನಾಡು ನಿಪ್ಪಾಣಿಯಲ್ಲಿ ಕನ್ನಡದ ಹಿತಕಾಯ್ದು ಕನ್ನಡ ಕಟ್ಟಿದ ಸಂಸ್ಥೆಗಳಲ್ಲಿ ಕೆಎಸ್ಸಾರ್ಟಿಸಿ ಪ್ರಮುಖ ಪಾತ್ರ ವಹಿಸುತ್ತದೆ.ಸದಾ ಕನ್ನಡವನ್ನೇ ಉಸಿರಾಗಿ ಕಾಯಕ ಮಾಡಿದ ನಿಗಮ.

ನಿಪ್ಪಾಣಿಯ ಕನ್ನಡದ ಇತಿಹಾಸವನ್ನು ಕೆದಕುತ್ತಾ ಹೋದರೆ ಮಹತ್ವದ ಮಾಹಿತಿ ಲಭಿಸುತ್ತದೆ.

ಏಕೀಕರಣ ಚಳವಳಿಗಳು ನಡೆದಾಗ ನಿಪ್ಪಾಣಿಯ ಬೆರಳೆಣಿಕೆ ವ್ಯಕ್ತಿಗಳು ಕನ್ನಡಕ್ಕಾಗಿ ಹೋರಾಟ ಮಾಡುತಿದ್ದರು.ತುಂಬಾ ಮರಾಠಿ ಅಬ್ಬರದ ನಡುವೆ ಕನ್ನಡ ಮರೆಯಾಗಿತ್ತು.ಸ್ವಾತಂತ್ರ್ಯ ನಂತರದ ಕನಾ೯ಟಕದಲ್ಲಿ ಕನ್ನಡನಾಡು ನುಡಿಗಾಗಿ ಬಹಳ ಹೋರಾಟಗಳು ನಡೆದಿವೆ.

- Advertisement -

ಇಂತಹ ಸಂದಭ೯ದಲ್ಲಿ ಅಂದಿನ ಮರಾಠಿಮಯ ನಿಪ್ಪಾಣಿ ನಗರದಲ್ಲಿ ಕನ್ನಡದ ದೀಕ್ಷೆ ತೊಟ್ಟು ೧೯೫೧ ರಂದು ಕೆ ಎಸ್ ಆರ್ ಟಿ ಸಿ ಸಾರಿಗೆ ಸಂಸ್ಥೆ ಸ್ಥಾಪನೆಯಾಯಿತು.ಗಂಭೀರ ಪರಿಸ್ಥಿತಿಯಲ್ಲಿ ಕಾಯಕ ಪ್ರಾರಂಭಿಸಿದ ಸಂಸ್ಥೆ ಸದ್ದಿಲ್ಲದೇ ಎಲೆ ಮರೆ ಕಾಯಿಯಂತೆ ಘನ ಕಾಯಕ ಪ್ರಾರಂಭಿಸಿತು.

ರಾಮಮಂದಿರದ ಮುಂಭಾಗದ ಆವರಣದಲ್ಲಿ ಚೊಚ್ಚಲ ಕಛೇರಿ ತೆಗೆದು ೦೮ ರಿಂದ ೧೦ ಹಪ್ಟನ್ ಗಳೊಂದಿಗೆ ಜನಸೇವೆ ಪ್ರಾರಂಭಿಸಿತು.ಮುಂದೆ ೧೯೫೦ ರಲ್ಲಿ ಹೊಸ ಬಸ್ಸು ನಿಲ್ದಾಣ ಸ್ಥಾಪನೆಗೊಂಡು ಕನ್ನಡ ರಾಜ್ಯೋತ್ಸವ ನಿಮಿತ್ತ ಭುವನೇಶ್ವರಿ ಪೂಜೆ ನೆರೆವೇರಿಸಹತ್ತಿತು.ಅಂದು ಕನ್ನಡನಾಡಿನಲ್ಲಿ ಏಕೀಕರಣ ಚಳವಳಿ ನಡೆದು ಕರುನಾಡು ಏಕೀಕರಣಗೊಂಡ ಕ್ಷಣ.ಆದರೂ ಗಡಿಯಲ್ಲಿ ಮರಾಠಿ ಅಬ್ಬರ. ನಿಪ್ಪಾಣಿಯ ಆಯ್ದ ಕನ್ನಡಿಗರ ಜೊತೆಗೂಡಿ ಕನ್ನಡದ ಕೈಂಕಯ೯ ತೊಟ್ಟು ಈ ಸಂಸ್ಥೆ ಇಂದಿನವರೆಗೂ ಯಶಸ್ವಿ ಕನ್ನಡ ಸೇವೆ ಮಾಡುತ್ತಿದೆ.

ಇಂದು ಅಂತರ್ ರಾಜ್ಯಗಳಿಗೆ ಕನ್ನಡ ನಾಮಫಲಕಗಳನ್ನು ಹೊತ್ತ ಕನ್ನಡದ ತೇರು ಸದಾ ಸಂಚರಿಸಿ ಕನ್ನಡ ನುಡಿ ನಗಾರಿ ಬಾರಿಸುತಿದೆ.ಇಂತಹ ನಿಪ್ಪಾಣಿ ಘಟಕದ ಕನ್ನಡದ ಹಿಂದಿನ ಕಾಯಕ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕನ್ನಡಕ್ಕೆ ನೆಲೆ ಇಲ್ಲದ ಸಮಯದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡದ ಅಸ್ತಿತ್ವ ಕಾಯ್ದಿದೆ.

- Advertisement -

ಅಂದು ೦೮ ಹಪ್ಟನದೊಂದಿಗೆ ಪ್ರಾರಂಭಗೊಂಡ ಘಟಕ ಇಂದು ೮೮ ಬಸ್ಸುಗಳನ್ನು ಒಳಗೊಂಡು ಕೆಲಸ ಮಾಡುತ್ತಿದೆ.ಇಲ್ಲಿವರೆಗೆ ಸುಮಾರು ೪೦ ಕ್ಕಿಂತ ಅಧಿಕ ಘಟಕ ವ್ಯವಸ್ಥಾಪಕರು ಸೇವೆ ಸಲ್ಲಿಸಿ ಕನ್ನಡ ಬೆಳೆಸಲು ಕೈಜೋಡಿಸಿದ್ದಾರೆ.೩೭೬ ಜನ ಕಾಮಿ೯ಕರು ಕೆಲಸ ಮಾಡುತ್ತಿದ್ದಾರೆ.೧೯೯೦ ನವೆಂಬರ್ ೧ ರಂದು ನಿಪ್ಪಾಣಿ ನಗರದಲ್ಲಿ ಕನ್ನಡ ಧ್ವಜಾರೋಹಣ ನೇರೆವೆರಿಸಲೂ ಪ್ರಾರಂಭಿಸಿ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಹೊತ್ತ ಸಿಂಗಾರಗೊಂಡ ಬಸ್ಸು ಮರೆವಣಿಗೆಯಲ್ಲಿ ಪಾಲ್ಗೊಳ್ಳಲು ಪ್ರಾರಂಭವಾಯಿತುು.

ಅಂದಿನಿಂದ ಇಂದಿನವರೆಗೂ ಸೇವೆ ನಿರಂತರವಾಗಿ ನಡೆಸುತ್ತಾ ಬಂದಿದೆ.೧೯೯೨ ರಲ್ಲಿ ಈ ಘಟಕದಲ್ಲಿ ಗಣೇಶ ಮಂದಿರ ಸ್ಥಾಪಿಸಿ ಕಾಮಿ೯ಕರು ಮತ್ತು ಮುಧೋಳ ಮಹಾಲಿಂಗಪೂರದ ಕೆಲವು ಕಲಾವಿದರು ಕೂಡಿ ಗಣೇಶ ಉತ್ಸವದ ನಿಮಿತ್ಯ ಕನ್ನಡ ನಾಟಕಗಳನ್ನು ಮಾಡಿ ಅಂದೇ ಕನ್ನಡದ ಡಿಂಡಿಮ ಬಾರಿಸಿದ್ದಾರೆ.

ಕನ್ನಡದ ಶರಣರ ಸಂತರ ಜಯಂತಿಯನ್ನು ಈ ಘಟಕ ಅದ್ದೂರಿಯಾಗಿ ನಡೆಸಿ ಕನ್ನಡ ಸಂಸ್ಕೃತಿ ಉಳಿಸುತ್ತಾ ನಡೆದಿದೆ.ಹಲವಾರು ಸಾಹಿತಿಗಳನ್ನು ಚಿಂಚಣಿ ಆಡಿ ಪೂಜ್ಯರನ್ನು ಕರೆಯಿಸಿ ಕನ್ನಡದ ಕಾಯ೯ಕ್ರಮಗಳನ್ನು ಮಾಡಿದೆ.ಇಲ್ಲಿರುವ ಕನ್ನಡದ ಕ್ರೀಯಾ ಸಮಿತಿಯು ಕನ್ನಡದ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ
ಅಂದಿನ ಸಂಕಷ್ಟದ ಸ್ಥಿತಿಯಲ್ಲಿಯೂ ಹಲವಾರು ಕಾಮಿ೯ಕರು ಕನ್ನಡಕ್ಕಾಗಿ ದುಡಿದಿದ್ದಾರೆ ನಂಜಯ್ಯ ಕೊಟ್ಟುರಮಠ,ಯಲ್ಲಪ್ಪ ಗುಡಗೇರಿ,ಕರೆನ್ನವರ,ಎಂ ಬಳನಾಯಿಕ,ಎಸ್ ಚೌಡಕಿ, ಅಶೋಕ ಪಾಟೀಲ,ಪಿ.ಜಿ ಸಣದಿ,ಗಣೇಶ ಮೋಪಗಾರ, ಮಹಾದೇವ ಮಗದುಮ್ಮ ಮುಂತಾದವರು ಕನ್ನಡದ ಸೇನಾನಿಗಳಾಗಿ ಘಟಕದಲ್ಲಿ ಕಾಯ೯ನಿವ೯ಹಿಸಿದ್ದಾರೆ.

ಬಹಳಷ್ಠು ಕಹಿ ಅನುಭವಗಳನ್ನು ಅನುಭವಿಸಿದ್ದಾರೆ ಆದರೂ ಛಲಬೀಡದೇ ಕನ್ನಡದ ಸಸಿ ನೆಟ್ಟಿದ್ದಾರೆ.ಅದು ಇಂದು ಹೆಮ್ಮರವಾಗಿ ಕನ್ನಡದ ಮಕ್ಕಳಿಗೆ ನೆರಳು ನೀಡುತಿದೆ.

ಅಪ್ಪಟ ಕನ್ನಡಿಗ ಚಿಕ್ಕೋಡಿ ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಶ್ರೀ ಗಣೇಶ ಮೋಪಗಾರ ಅವರು ಕನ್ನಡ ಗಾಯನವನ್ನು ಹಾಡುತ್ತಾ ಡಾ ರಾಜಕುಮಾರ ವೇಷಧಾರಿಯಾಗಿ ನಿಪ್ಪಾಣಿಯಲ್ಲಿ ಜರುಗಿದ ಜಿಲ್ಲಾ ಕನ್ನಡ ಸಮ್ಮೇಳನದಲ್ಲಿ ಭಾಗಿಯಾಗಿದ್ದೂ ವಿಶೇಷವೆನಿಸಿದೆ.

ರಾಣಿ ಚನ್ನಮ್ಮ ಇತರೆ ಕನ್ನಡ ಮಹೀಮರ ವೇಷ ಧರಿಸಿ ಕುದುರೆಗಳನ್ನು ಒಳಗೊಂಡ ಮೆರವಣಿಗೆ ಮಾಡಿ ಈ ಘಟಕ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದೂ ಇತಿಹಾಸದಲ್ಲಿ ದಾಖಲಾಗಿದೆ.

ಇಂತಹ ಘಟಕಕ್ಕೆ ಗರಿ ಎಂಬಂತೆ ೨೦೧೭ ರಂದು ಅಂದಿನ ಶಾಸಕರೂ ಇಂದಿನ ಸಚಿವರಾದ ಸೌ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ಭವ್ಯವಾದ ೯.೫ ಕೋಟಿ ವೆಚ್ಚದ ಸುಸಜ್ಜಿತ ಬಸ್ಸು ನಿಲ್ದಾಣ ನಿಮಾ೯ಣವಾಗಿದ್ದೂ ಕನ್ನಡದ ನಾಮಫಲಕಗಳನ್ನು ಒಳಗೊಂಡು ಕನ್ನಡಿಗರನ್ನು ಕೈಬೀಸಿ ಕರೆಯುತಿದೆ.

ಇದರ ಮೇಲೆ ಕನ್ನಡ ಧ್ವಜ ರಾರಾಜಿಸುತಿದ್ದೂ ನೋಡುಗರ ಕಣ್ಣು ಮನೋಹರಗೊಳಿಸುತಿದೆ.ಇಂದಿನ ವ್ಯವಸ್ಥಾಪಕರಾದ ಶ್ರೀ ಮಂಜುನಾಥ ಹಡಪದರು ಅಪ್ಪಟ ಕನ್ನಡಿಗರಾಗಿದ್ದೂ ಕನ್ನಡ ನುಡಿ ಸೇವೆ ಮಾಡುತಿದ್ದಾರೆ.ಚಿಕ್ಕೋಡಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಅಧಿಕಾರಿಗಳು ಕನ್ನಡದ ಕಾಯಕಕ್ಕೆ ಬೆನ್ನಿಗೆ ನಿಂತಿದ್ದಾರೆ.ಇಂತಹ ಕನ್ನಡ ನಿಗಮದ ಕಾಯಕ ನಿಜಕ್ಕೂ ಶ್ಲಾಘನೀಯ.ಘಟಕದ ಆವರಣದಲ್ಲಿ ಕನ್ನಡದ ಕಲರವ ಆಗುವಲ್ಲಿ ಸದಾ ಶ್ರಮಿಸುತಿದೆ.

“ಕೈಮುಗಿದು ಏರು ಇದು ಕನ್ನಡದ ತೇರು” ಎನ್ನುವ ವಾಣಿಯಂತೆ ಸದಾ ಕನ್ನಡದ ಕೈಂಕಯ೯ತೊಟ್ಟು ಗಡಿಯಲ್ಲಿ ಕನ್ನಡದ ನುಡಿ ಹಿಡಿದು ಸಾಗುವ ಈ ಘಟಕದ ವಾಹನಗಳು ಕನ್ನಡದ ಪ್ರಗತಿಗೆ ನಾಂದಿಹಾಡಿವೆ.ಇಂದು ನಿಪ್ಪಾಣಿ ಕನ್ನಡಮಯವಾಗಿದೆ ಎಂದರೆ ನಿಪ್ಪಾಣಿ ಸಾರಿಗೆ ಘಟಕವೂ ಅದಕ್ಕೆ ಕಾರಣ.ಈ ಘಟಕದ ಕನ್ನಡದ ಸೇವೆಗೆ ನನ್ನ ಪ್ರಣಾಮಗಳು.ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಈ ಸಾರಿಗೆ ಘಟಕದ ಕಾಯಕವನ್ನು ಭಕ್ತಿಯಿಂದ ಸ್ಮರಿಸೋಣ

ಮಾಹಿತಿ

  • ಶ್ರೀ ಮಂಜುನಾಥ ಹಡಪದ
  • ಶ್ರೀ ಪಿ.ಜಿ ಸನದಿ
  • ಶ್ರೀ ಗಣೇಶ ಮೋಪಗಾರ
  • ಶ್ರೀ ಶಿವಾನಂದ ಪುರಾಣಿಕಮಠ
  • ಶ್ರೀ ಮಾರುತಿ ಕೊಣ್ಣುರಿ

ಲೇಖನ

  • ಪ್ರೊ ಮಿಥುನ ಅಂಕಲಿ
    ಖಡಕಲಾಟ

ಸಹಯೋಗ

  • ಕನ್ನಡ ಸಾಹಿತ್ಯ ಪರಿಷತ್ತು
  • ಶರಣ ಸಾಹಿತ್ಯ ಪರಿಷತ್ತು
  • ಗಡಿನಾಡು ಕನ್ನಡ ಬಳಗ
  • ನಿಪ್ಪಾಣಿ
- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group