spot_img
spot_img

ಪುಸ್ತಕ ಪರಿಚಯ

Must Read

- Advertisement -

ಪುಸ್ತಕದ ಹೆಸರು : ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು

ಲೇಖಕರು : ಪ್ರಭಾಕರ ಬಿಳ್ಳೂರ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಬೆಂಗಳೂರು 10
ಪುಟಗಳು : 112 ಬೆಲೆ 120
ಪ್ರಥಮ ಮುದ್ರಣ 2020
ಮುದ್ರಕರು : ಲಕ್ಷ್ಮೀ ಮುದ್ರಣಾಲಯ ಬೆಂಗಳೂರು18

ಈ ಕವನ ಸಂಕಲನಕ್ಕೆ ಜ್ಞಾನಯೋಗಿ ಪ.ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಿಜಯಪುರ ಶುಭಾಶೀರ್ವಾದ ಮಾಡಿದ್ದಾರೆ ವರ್ತಮಾನಕ್ಕೆ ಸಾಕ್ಷಿಯಾಗುವುದೆಂದರೆ ವರ್ತಮಾನವನ್ನು ಕಣ್ಣಾರೆ ಕಾಣುವುದು. ಅಲ್ಲಿರುವ ಲೋಪದೋಷಗಳನ್ನು ಸರಿಗೊಳಿಸುವುದು. ಅಲ್ಲಿ ಬರಬಹುದಾದ ನೋವು ನಲಿವುಗಳನ್ನು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯುವುದು.

- Advertisement -

ಕಲ್ಲು ಮುಳ್ಳುಗಳ ಹಾದಿ ಕತ್ತಲೆಯ ಕಾಡುಪಥ ಹೆಜ್ಜೆ ಹೆಜ್ಜೆಗೂ ಕಷ್ಟಗಳು ಮುತ್ತಿದಾಗ ಮಿತ್ರರೆಲ್ಲರೂ ಕೈ ಎತ್ತಿದಾಗ ದೃತಿಗೆಡದಿರು ಗೆಲವು ನಿನ್ನದೇ! ಪ್ರವಾಹದ ವಿರುದ್ಧ ಮೀನು ಈಜುವುದಿಲ್ಲವೇ ಕಡುಗತ್ತಲೆಯನ್ನು ಪುಟ್ಟ ದೀಪ ಎದುರಿಸುವುದಲ್ಲವೆ? ಸಣ್ಣ ಇರುವೆಗೂ ಅನ್ಯಾಯವಾದರೆ ಕಚ್ಚಿ ಪ್ರತಿಭಟಿಸುವುದಿಲ್ಲವೇ? ದೃತಿಗೆಡದಿರು ಗೆಲವು ನಿನ್ನದೇ ಬಂದಾಗಿ ಚೆಂದಾಗಿ ಇರುವ ಬಾಳೇ ಬಂಗಾರ ಇಲ್ಲದಿರೆ ಅಂಗಾರ ! ಖೋಡಿ ನೀ ಕೂಡಿ ಬಾಳು ಅಲ್ಲಿದೆನೋಡು ಕೈಲಾಸ ಇಂಥ ಹಲವಾರು ಸ್ವಾನುಭವದ ನುಡಿಗಳಿಂದ ಇಲ್ಲಿಯ ಕವನಗಳು ಆಕರ್ಷಕ.

ಶ್ರೀ ಎ.ಎಸ್. ಪಾಟೀಲ ಕಾಗವಾಡ ಇವರು ಸದ್ಭಾವ (ಒಳ್ಳೆಯ ವಿಚಾರ) ಬರೆದಿದ್ದು ಬದುಕಿನ ಏರಿಳಿತಗಳಿಗೆ ಸಿಲುಕದೆ ಅನುಭವಗಳನ್ನು ಪಡೆದು ಬರಹ ಸಾಹಿತ್ಯದಲ್ಲಿ ರಸಾಯನಗೊಳಿಸಿದರು.

ಇವರ ಆರ್ಥಿಕ ಪರಿಸ್ಥಿತಿಯಿಂದ ಇವರ ಕೃತಿಗಳು ಬೆಳಕಿಗೆ ಬರಲಿಲ್ಲ. ಇವರ ಮಗನಾದ ದೀಪಕ ಬಿಳ್ಳೂರ ತಂದೆಯವರ ಆಸೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಳಿನ ಗೋಳನ್ನು ಕಂಡು ಅನುಭವಗಳನ್ನು ಕಹಿ ಸಿಹಿಗಳನ್ನು ಕವನಗಳಲ್ಲಿ ಬಿಚ್ಚಿಟಿದ್ದಾರೆ.

- Advertisement -

ದೀಪಕ ಬಿಳ್ಳೂರ ಅವರು ತಂದೆಯ ಕವನಗಳನ್ನು ಐದು ದಶಕಗಳ ನಂತರ ಈಗ ಅವರ ಮತ್ತೊಂದು ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳು ಎಂಬ ಕೃತಿಯನ್ನು ಪ್ರಕಟಿಸಲು ತುಂಬ ಸಂತಸ ಎಂದಿದ್ದಾರೆ. ಈ ಕವನ ಸಂಕಲನ ದಲ್ಲಿ 53 ಕವಿತೆಗಳು ಇವೆ.

ಹುಟ್ಟು ಸಾವೆಂಬ
ನಿಯತಿ ಚಕ್ರಗಳೆರಡು
ಬಾಳ ಬಟ್ಟೆಯ ಬದಿಯ
ನಿತ್ಯ ಕಾಯತಿರುವುದು

ಇಂದು ನಿನ್ನೆಯೇ ಅಲ್ಲ
ನಾಳೆ ಬುತ್ತಿಯ ತುತ್ತು
ಎಷ್ಟು ದೂರದಾ ಹೊತ್ತು
ತಾವು ನಿರಂತರ ಸಾಗಲೇಬೇಕು
ಹುಟ್ಟಿದವರಿಗೆ ಸಾವು ನಿಶ್ಚಿತ ಅದು ಬರುವ ವರೆಗೆ ಕಾಯಬೇಕು ತಾವಾಗಿಯೇ ಹೊಗಬಾರದು ಎಂದಿದ್ದಾರೆ.

ಒಳ್ಳೆಯದಕ್ಕಿಂತ ಕೆಟ್ಟದ್ದು ಬಹುಬೇಗ ಬೆಳೆಯುತ್ತದೆ ಬಂಧು ಅಷ್ಟೇ ಬೇಗ ನಾಶವಾಗುತ್ತದೆ.  ಬೆಳಗುವ ಸೂರ್ಯನಿಗೆ ನೀವು ಮಣ್ಣು ಎರಚಿದರೆ ಅದು ತಿರುಗಿ ನಿಮ್ಮ ಕಣ್ಣಲ್ಲೇ ಬೀಳುವುದು ಕೆಟ್ಟದ್ದು ಬೇಗ ಬೆಳೆದು ಬೇಗ ನಾಶವಾಗುವುದು, ಒಳ್ಳೆಯದು ಶಾಶ್ವತವಾಗಿ ಉಳಿಯುತ್ತದೆ ಎಂದಿದ್ದಾರೆ.

ಇದೆ ಶಾಸನ ಕವನದಲ್ಲಿ ಸಂಕಟ ಬಂದಾಗ,ಶಾಂತನಾಗಿ ಚಿಂತಿಸು ತುಸು ಶಿವವನ್ನು ಮೌನದಿ ನೆನೆದು ಧ್ಯಾನಾಸಕ್ತನಾಗು  ಸಿಡಿಲು, ಗುಡುಗು ಅರ್ಭಟ ಇರದು ನಿರಂತರ ಬಿರುಗಾಳಿ ನಂತರ ಬೀಸುವ ತಂಗಾಳಿಗಾಗಿ ಕಾಯು ಎಲ್ಲವೂ ಕ್ಷೇಮ ಕೋಪ ಬಂದಾಗ ಯಾವುದೇ ಭಾಷೆ ಕೋಡಬೇಡ ಸ್ವಲ್ಪ ಶಾಂತವಾಗಿ ವಿಚಾರಮಾಡು ದೇವರನ್ನು ನೆನೆ ಸಿಡಿಲು ಗುಡುಗಗಳು ನಿರಂತರ ಇರಲಾರದು ಬಿರುಗಾಳಿ ನಿರಂತರ ಇರದು ತಂಗಾಳಿ ಒಂದೇ ಬರುವುದು ಕಾಯು ಎಲ್ಲವೂ ಕ್ಷೇಮ ಎಂದಿದ್ದಾರೆ.

ಬೆವರು ಕವನದಲ್ಲಿ ದುಡಿದು ತಿನ್ನು ಇನ್ನೊಬ್ಬರ ಎದೆ ಬಗೆದು ತಿನ್ನಬೇಡ, ಸತ್ಯದಿಂದ ಗಳಿಸಿದ ಗಂಜಿ ಅಮೃತ, ಅಮೃತವೆಂದು ತಿಳಿದು ಸುಳ್ಳಿನ ಗಳಿಕೆ ವಿಷವು ಬೇವರು ಹರಿಸಿ ದುಡಿದ ಹಣ ಊಟ ರುಚಿ ಆಸಲ್ಯದಿಂದ ಗಳಿಸಿದ ಹಣ ಊಟ ವಿಷವೇ ಸರಿ ಎಂದಿದ್ದಾರೆ.

ಸದಿಚ್ಚೆಯನ್ನು ಡಾ, ಮಹಾಂತೇಶ ಉಕ್ಕಲಿ ಕಸಾಪ ಅಧ್ಯಕ್ಷರು, ಅಥಣಿ ಅವರು ಬರೆದಿದ್ದು ಅನೇಕತೆಯಲಿ ಏಕತೆ ಕಂಡುಕೊಂಡು ನಾವೆಲ್ಲರೂ ಒಂದೇ ಒಂದು ಆಕೃತಿ ಎಂದು ಭಾವಿಸುವವರು ಇಂತಹ ಅವರ ಒಟ್ಟು ಗೀತೆಗಳಲ್ಲಿ ಜೀವನ ಉತ್ಸಾಹ ಸೆಡಗು ಬೆಡಗು ಮನಸ್ಸು ಸೆರೆ ಹಿಡಿಯುತ್ತವೆ ಎಂದಿದ್ದಾರೆ.

ಡಾ ಎಂ.ಬಿ. ಹೂಗಾರ ಅವರು ಅವರ ಕವನಗಳು ವರ್ತಮಾನದ ತಲ್ಲಣಗಳನ್ನು ಬಳಗೊಂಡಿದ್ದು ಸುಂದರ ಬದುಕು ಕಟ್ಟಿ ಕೊಡುವ ಹಂಬಲವನ್ನು ಹೊಂದಿವೆ ಎಂದಿದ್ದಾರೆ.

ಬಿ. ಸೋಮಲಿಂಗ ಪಾಟೀಲರು ಸತ್ಯ, ಧರ್ಮ, ನ್ಯಾಯ ನೀತಿ, ನಿಷ್ಠೆ, ಸಂಸ್ಕೃತಿ, ಪ್ರಕೃತಿ, ನಿಸರ್ಗ ನೆಲ, ಭೂಮಿ, ಇವುಗಳ ಸುತ್ತಮುತ್ತ ಕವಿತೆಗಳು ಓಡಾಡುತ್ತವೆ ಕತ್ತಲೆಯಲ್ಲಿ ದೀಪ ಹಚ್ಚುವುದನ್ನು ಕಲಿಸುತ್ತವೆ ಎಂದಿದ್ದಾರೆ.

ಪ್ರಭಾಕರ ಶೆಟ್ಟಿ ಅವರು ಎಷ್ಟೊಂದು ಅರ್ಥಗರ್ಭಿತವಾದ ಕವನ ಸಂಕಲನ ಓದುತ್ತಾ ಹೋದರೆ ಜ್ಞಾನ ಭಂಡಾರ ಹೆಚ್ಚುತ್ತದೆ ನಾವಿಕ, ನಂಬಿಕ, ನಹಿಮ ಸುಖ ಜೀವನ ಬಹು ಸುಂದರವಾಗಿ ಮೂಡಿ ಬಂದಿವೆ ಅವರ ಮಗ ದೀಪಕ ಬಿಳ್ಳೂರ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ಇರುವ ಇನ್ನು ಇವರ ನಾಟಕ, ಕವನಗಳು ದೀಪಕ ಅವರು ಪ್ರಕಟಿಸಲಿ ಎಲ್ಲ ಓದುಗರು ಈ ಕವನ ಸಂಕಲನ ವಾಚಕರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಆಶಿಸುವೆನು.
ದೀಪಕ ಅವರ ಚರವಾಣಿ: 8861081817

ಶ್ರೀ ಎಂ.ವೈ. ಮೆಣಸಿನಕಾಯಿ ಬೆಳಗಾವಿ.
ಮೊ: 9449209570

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group