ಬದುಕು ಕಲಿಸಿದ ಪಾಠ

Must Read

ಹಸಿದ ಹೊಟ್ಟೆ ಮತ್ತು ಖಾಲಿ ಜೇಬು ಇವೆರಡೂ ಜಗತ್ತಿನಲ್ಲಿ ಯಾವ ವಿಶ್ವ ವಿದ್ಯಾಲಯವೂ ಕಲಿಸದ ಪಾಠವನ್ನು ಕಲಿಸುತ್ತವೆ.ಇವು ಎಲ್ಲೋ ಓದಿ, ಕೇಳಿ, ನೋಡಿದರೆ ಸಿಗುವ ಅನುಭವಗಳಲ್ಲ, ವಾಸ್ತವದಲ್ಲಿ ಅವುಗಳನ್ನು ಅನುಭವಿಸಿದವರಿಗೇ ಗೊತ್ತು ಅವೆರಡರ ಗತ್ತು ಏನು ಅಂತ.

ಅಂದಹಾಗೆ ನಾನು ಈಗ ನಿಮಗೆ ಹೇಳ ಹೊರಟಿರುವುದು ಅಂತಹುದೇ ಒಂದು ನೊಂದು, ಬೆಂದು ಇಡೀ ಮನುಕುಲವೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ದಿಟ್ಟೆಯೋರ್ವಳ ಜೀವನದ ಯಶೋಗಾಥೆ.

ಅವಳು ಹುಟ್ಟಿ ಬೆಳೆದದ್ದು ಬಡತನದಲ್ಲಿ ಓದಬೇಕೆಂಬ ಒಲವಿದ್ದರೂ ಮುಂದೆ ಓದಿಸುವ ಬಲವಿರಲಿಲ್ಲ ನನ್ನ ಹಣೆಬರಹ ಇಷ್ಟೇ ಎಂದುಕೊಂಡು ಓದಿಗೆ ಗುಡ್ ಬೈ ಹೇಳಿ ತಾಳಿಗೆ ಕೊರಳೊಡ್ಡಿದಳು.ಗಂಡನದು ಕಲ್ಲು ಕಟಿದು ಒಳ್ಳುಕಲ್ಲು,ಬೀಸೋಕಲ್ಲು ತಯಾರಿಸಿ ಬೀದಿ ಬೀದಿಗಳಲ್ಲಿ ಅಲೆದು ಮಾರುವ ಕಾಯಕ.

ಬಾಳಬಂಡಿ ಎಂದಮೇಲೆ ಎರಡೂ ಚಕ್ರಗಳು ಸಮನಾಗಿ ತಾನೇ ಓಡಬೇಕು.ದಿನ ಬೆಳಗಾಗುವುದರೊಳಗೆ ತಲೆಯ ಮೇಲೆ ಮೂರು ನಾಲ್ಕು ಕಲ್ಲು ಹೊತ್ತು ಓಣಿ ಓಣಿ ಅಲೆದರೂ,ಮಿಕ್ಸಿಯ ಜಮಾನಾದಲ್ಲಿ ಕಲ್ಲು ಕೇಳುವರಾರು. ದಿನಗಳು ಉರುಳಿದಂತೆ ತಲೆಯ ಮೇಲಿನ ಕಲ್ಲುಗಳು ಭಾರದ ಜೊತೆಗೆ ಸಂಸಾರ ಭಾರವೂ ಹೆಚ್ಚಾಗಿ ಎರಡು ಹೋಗಿ ನಾಲ್ಕು ಆಯಿತು.ಜೀವನ ನಿರ್ವಹಣೆಗಾಗಿ ಪತಿ ಪತ್ನಿ ಪಟ್ಟ ಶ್ರಮ ವ್ಯರ್ಥ ವಾಗುತ್ತ ಸಾಗಿತು.

ಏನಾದರೂ ಮಾಡಿ ನನ್ನ ಕುಟುಂಬದ ನಿರ್ವಹಣೆ ಮಾಡಲೇಬೇಕು ಎಂದು ಯೋಚಿಸುತ್ತಿರುವಾಗ ಆ ದಿಟ್ಟೆಗೆ ಹೊಳೆದದ್ದು ತಾನು ಚಿಕ್ಕವಳಿದ್ದಾಗ ಓದಿ ಏನಾದರೂ ಸಾಧಿಸಬೇಕೆಂದಿದ್ದ ಛಲ ಆದರೆ ಅಂದು ಪರಿಸ್ಥಿತಿ ಅದಕ್ಕೆ ಅವಕಾಶ ನೀಡಿರಲಿಲ್ಲ, ಈಗ ನನ್ನ ಗಂಡ ನನ್ನೊಂದಿಗೆ ಇದ್ದಾರೆ ಅವರ ಮುಂದೆ ಈ ವಿಚಾರ ಹೇಳಿ ನೋಡೋಣ ಎಂದು ವಿಷಯ ಪ್ರಸ್ತಾಪಿಸಿದಳು.ಹೇಗಾದರೂ ಮಾಡಿ ಬಾಳ ಬಂಡಿ ಸಾಗಿದರೆ ಸಾಕು ಎಂದು ಕೊಂಡಿದ್ದ ಆತ ತನ್ನ ಪತ್ನಿಯ ಗುರಿ ಸಾಧನೆಗೆ ಬೆನ್ನೆಲುಬಾಗಿ ನಿಂತ. ಬಾಹ್ಯ ವಿಶ್ವ ವಿದ್ಯಾಲಯ ಒಂದರಿಂದ ಪದವಿ ಪಡೆದುಕೊಂಡು ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದಳು ಓದುವ ಪ್ರತಿ ಕ್ಷಣ ಕ್ಷಣವೂ ತಾನು ಹೇಗಾದರೂ ಮಾಡಿ ತನ್ನ ಸಂಸಾರ ಸುಗಮವಾಗಿ ಸಾಗಿಸಲೇ ಬೇಕೆಂಬ ಅದಮ್ಯ ಛಲದಿಂದ ಓದಿ ಕೊನೆಗೆ ಪ್ರಯತ್ನಕ್ಕೆ ತಕ್ಕ ಫಲ ಎಂಬಂತೆ ರಾಜ್ಯ ಆಡಳಿತ ಸೇವೆ ಪರೀಕ್ಷೆ ಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ ಗೊಂಡು Police ಇಲಾಖೆಯಲ್ಲಿ Deputy Superintendent of Police (DYSP) ಆಗಿ ಜೀವನದಲ್ಲಿ ಕಷ್ಟಪಟ್ಟು ಗುರಿಯ.ಮಾರ್ಗದಲ್ಲಿ ಛಲಬಿಡದೇ ಮುಂದೆ ಸಾಗಿದರೆ ಅಸಾಧ್ಯ ಎಂಬವುದು ಯಾವುದೂ ಇಲ್ಲ ಎಂದು ಸಮಾಜಕ್ಕೆ ತೋರಿಸಿಕೊಟ್ಟಳು ಆ ಕಲ್ಲು ಹೊರುತ್ತಿದ್ದ ದಿಟ್ಟೆ.

ಅಂದಹಾಗೆ ನಾನು ಇಲ್ಲಿಯವರೆಗೆ ಬರೆದದ್ದು ಯಾರೋ ಮಹಿಳೆಯನ್ನು ಊಹಿಸಿ ಕೊಂಡು ಸೃಷ್ಟಿಸಿ ಬರೆದ ಕಾಗಕ್ಕ,ಗುಬ್ಬಕ್ಕನ ಕಥೆಯಲ್ಲ.ಇದು ನಮ್ಮ ನೆರೆಯ ಮಹಾರಾಷ್ಟದ ಭಂಡಾರಾ ಜಿಲ್ಲೆಯಲ್ಲಿ ಊರಿಂದ ಊರಿಗೆ ಅಲೆದು ಅಲ್ಲೋ ಇಲ್ಲೋ ಬಿಡಾರ ಹೂಡಿ ಬೀದಿ ಬೀದಿಗಳಲ್ಲಿ ಕಲ್ಲಿನ ವಸ್ತುಗಳನ್ನು ಮಾರುತ್ತಿದ್ದ ಶ್ರೀಮತಿ ಪದ್ಮಶೀಲಾ ರಮೇಶ ತಿರುಪಡೆ ಎಂಬ ಛಲದಂಕ ಮಲ್ಲೆಯ ಜೀವನದ ಯಶೋಗಾಥೆ.ಇಂದು ನಾಸಿಕ ಜಿಲ್ಲೆಯ ಉಪವಿಭಾಗ ಒಂದರಲ್ಲಿ Dysp ಈ ಪದ್ಮಶೀಲಾ.

ಜೀವನದಲ್ಲಿ ಸಾಧಿಸುವ ಛಲ ಇರಬೇಕು ಇದರೊಂದಿಗೆ ಪರಿಸ್ಥಿತಿಯ ಅರಿವಿರಬೇಕು ಅಂದಾಗ ಮಾತ್ರ ಇಂತಹ ಅನೇಕ ಪದ್ಮಶೀಲಾರು ರೂಪಗೊಳ್ಳುತ್ತಾರೆ,ಇಂದು ನಮ್ಮ ಮಕ್ಕಳಿಗೆ ಅವರ ಶಿಕ್ಷಣಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತವೆ,ನಾವು ತಂದೆತಾಯಿ ಜೀವನ ನಿರ್ವಹಣೆಗೆ ಪಡುತ್ತಿರುವ ಕಷ್ಟ ಬವಣೆಗಳನ್ನು ಅವರಿಂದ ಮರೆಮಾಚುತ್ತೇವೆ.ಹೀಗಾಗಿ ಅವರಿಗೆ ಶ್ರಮದ ಅರಿವು ಇರುವುದಿಲ್ಲ, ಫೀಸು ತುಂಬಲು ಹಣ ಎಲ್ಲಿಂದ ಬಂತು,ಹೇಗೆ ಬಂತು ಎಂಬುದು ಅವರಿಗೆ ಅರಿವಾಗಬೇಕು ಅಂದಾಗ ಮಾತ್ರ ಇಂತಹ ಪದ್ಮಶೀಲಾ ರೂಪಗೊಳ್ಳಲು ಸಾಧ್ಯ.🌹🙏

ಮಹೇಶ ಮಗದುಮ್

2 COMMENTS

  1. ಲೇಖನ ಬರಹಗಳನ್ನು ಬಳಸಿ ಕೊಳ್ಳುವ ಮುಂಚೆ ಲೇಖಕರ ಗಮನಕ್ಕೆ ತರಬೇಕಲ್ಲ.atleast ಅವರ ಹೆಸರನ್ನಾದರೂ ಬರೆಯಬೇಕಲ್ಲ

    • ಮಹೇಶ ಅವರೇ, ಲೇಖನ ಬಳಸುವಾಗ ನಿಮ್ಮ ಹೆಸರು ಇತ್ತು. ಆದರೆ ಕಣ್ತಪ್ಪಿನಿಂದ ವೆಬ್ ಸೈಟ್ ಗೆ ಹಾಕುವಾಗ ಬಂದಿಲ್ಲ. ಅದಕ್ಕಾಗಿ ವಿಷಾದಿಸುತ್ತೇವೆ.ಕ್ಷಮೆ ಇರಲಿ. ಹಾಗೆಯೇ ನಮ್ಮ ಪತ್ರಿಕೆಗೆ ನಿಮ್ಮ ಹಾರೈಕೆ ಇರಲಿ. ನಿಮ್ಮಿಂದ ಇಂಥ ಲೇಖನಗಳು, ಕಥೆ ಕವನಗಳನ್ನು ಸ್ವಾಗತಿಸುತ್ತೇವೆ. 9448863309 ಈ ನಂಬರಿಗೆ ವಾಟ್ಸಪ್ ಮಾಡಿರಿ. ಧನ್ಯವಾದಗಳು – ಸಂಪಾದಕರು

Comments are closed.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group