ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ೧೦ ಸಾವಿರ ರನ್ ಗಳಿಸಿದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ್ತಿಯಾಗಿ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೊರಹೊಮ್ಮಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನದ ಮೂರನೇ ಪಂದ್ಯದಲ್ಲಿ ಪ್ರವಾಸಿ ತಂಡದ ಎಸೆತಗಾರ ಅನ್ನೆ ಬಾಷ್ ಅವರ ಎಸೆತಕ್ಕೆ ಬೌಂಡರಿ ಬಾರಿಸುವ ಮೂಲಕ ಈ ಗರಿಯನ್ನು ಮಿಥಾಲಿ ಮುಡಿಗೇರಿಸಿಕೊಂಡರು.
ಈ ಪಂದ್ಯ ಮಿಥಾಲಿಯವರ ೨೧೨ ನೇ ಪಂದ್ಯವಾಗಿದೆ. ಈ ವರೆಗೆ ಮಿಥಾಲಿ ೧೦ ಟೆಸ್ಟ್ ಪಂದ್ಯ ಗಳನ್ನು ಆಡಿದ್ದು ೬೬೩ ರನ್ ಗಳಿಸಿದ್ದಾರೆ. ೨೧೪ ಅವರ ಗರಿಷ್ಠ ಮೊತ್ತವಾಗಿದೆ. ಟಿ- ೨೯ ಪಂದ್ಯಗಳಲ್ಲಿ ಮಿಥಾಲಿ ರಾಜ್ ೮೯ ಪಂದ್ಯಗಳಿಂದ ೨೩೬೪ ರನ್ ದಾಖಲಿಸಿದ್ದಾರೆ. ಏಕದಿನ ಪಂದ್ಯ ವಿಭಾಗದಲ್ಲಿ ಒಟ್ಟು ೬೯೭೪ ರನ್ನ ಗಳಿಸಿದ್ದು ಅದರಲ್ಲಿ ೫೪ ಅರ್ಧ ಶತಕಗಳಿವೆ.
ಇದೀಗ ಒಟ್ಟು ೧೦ ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿರುವ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ವಾಗಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ಆಟಗಾರ್ತಿಗಿಂತ ಕೇವಲ ೨೦೬ ರನ್ ಹಿಂದೆ ಇದ್ದಾರೆ.