ಯುವಕರು ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯ ತಿಳಿಯಲೇಬೇಕು

Must Read

ಹಿಂದಿ ಶಿಕ್ಷಕರ ಸಂಘದಿಂದ ಪುಸ್ತಕ ವಿತರಣೆ

ಮೂಡಲಗಿ – ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಬಗ್ಗೆ ಅವಶ್ಯವಾಗಿ ತಿಳಿದಿರಬೇಕು. ಅವರಿಗಾಗಿಯೇ ಬರೆಯಲಾದ ಪುಸ್ತಕ ” ಎಚ್ಚತ್ತ ಭಾರತ ” ರಚನೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಎಮ್.ಪಿ.ಗೀದಿ ಹೇಳಿದರು.

ಕಳೆದ ಸೆ. 5 ರಂದು ‘ ಶಿಕ್ಷಕರ ದಿನಾಚರಣೆ ‘ ಯ ನಿಮಿತ್ತ ಬೆಳಗಾವಿ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡಲಗಿ ಇವರ ಆಶ್ರಯದಲ್ಲಿ ಗುಡ್ಲಮಡ್ಡಿ ಈರಣ್ಣನ ಗುಡಿಯಲ್ಲಿ ಜರುಗಿದ ಸಮಾರಂಭದಲ್ಲಿ ಪುಸ್ತಕ ವಿತರಣೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೆಹಲಿಯ ರಾಮಕೃಷ್ಣ ಮಿಶನ್ ಪ್ರಕಟಿಸಿರುವ ಮೂಲ ಇಂಗ್ಲೀಷ್ ಭಾಷೆಯ ಸಂಕಲನ ” Awakened India ” ಎಂಬ ಪುಸ್ತಕದ ಕನ್ನಡ ಅನುವಾದ ” ಎಚ್ಚತ್ತ ಭಾರತ ” ಎಂಬ ಪುಸ್ತಕವನ್ನು ಮೈಸೂರಿನ ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಪ್ರಕಾಶಿಸಿದ್ದು, ಅದನ್ನು ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದವರು ಯುವಕರಿಗಾಗಿ ಹಂಚುವ ಕೆಲಸ ಮಾಡಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group