ಅಂತಾರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಸಮಾವೇಶ

0
46

ಮೂಡಲಗಿ: ಬೆಂಗಳೂರು ನಗರದ ರಿಯಾಲ್ಟೊ ಹೋಟೆಲ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಮತ್ತು ಪಾಲಕ, ಪೋಷಕರ ಸಮಾಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕ.ರಾ.ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ) ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಮತ್ತು ಪಾಲಕರ ಸಮಾಗಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ವಿವಿಧ ರಾಷ್ಟ್ರಗಳಿಂದ ಮತ್ತು ವಿವಿಧ ರಾಜ್ಯಗಳಿಂದ ಉಪ್ಪಾರ ಸಮಾಜದ ಹಲವಾರು ವಧು ಮತ್ತು ವರರು ಆಗಮಿಸುತ್ತಿದ್ದಾರೆ. ಉಪ್ಪಾರ ಸಮಾಜದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಪೋಲಿಸ್ ಇಲಾಖೆ, ಸರ್ಕಾರಿ ಹಾಗೂ ಅರೆ ಸರ್ಕಾರಿ ವಿವಿಧ ಇಲಾಖೆಗಳ ನೌಕರ ವರ್ಗ, ಪ್ರಗತಿಪರ ರೈತಾಪಿ ವರ್ಗ, ನ್ಯಾಯವಾದಿಗಳು, ಖಾಸಗಿ ನೌಕರರು ಮತ್ತು ವ್ಯಾಪಾರಿ ವರ್ಗಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪ್ಪಾರ ವಧು-ವರರು ಈ ಸಮಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಉಪ್ಪಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀರಾಲ ರಾಮುಲು ಸಗರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬೆಂಗಳೂರು ನಗರವು ವ್ಯವಸ್ಥಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದರ್ಜೆಯ ಹೋಟೆಲ್ ಮತ್ತು ವಸತಿ ನಿಲಯವನ್ನು ಹೊಂದಿರುತ್ತದೆ. ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಲು ರೈಲ್ವೆ ಮತ್ತು ವಿಮಾನ ಸೌಕರ್ಯಗಳನ್ನು ಹೊಂದಿರುತ್ತದೆ. ಆದ ಕಾರಣ ಉಪ್ಪಾರ ವಧು-ವರರು ಮತ್ತು ಪಾಲಕರು ಮುಂಚಿತವಾಗಿ ತಮ್ಮ ಪ್ರಯಾಣದ ಟಿಕೆಟ್ ಲಾಡ್ಜ್ ಗಳನ್ನು ಬುಕ್ ಮಾಡಿಕೊಳ್ಳಲು ತಿಳಿಸುತ್ತಿದ್ದೇವೆ. ಸಮಾಜ ಬಾಂಧವರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ.ಎಸ್.ಮೈಲಾರ ವಿನಂತಿಸಿಕೊಂಡಿದ್ದಾರೆ . ಹೆಚ್ಚಿನ ಮಾಹಿತಿಗಾಗಿ ೯೯೪೫೬೭೭೭೦೧, ೯೪೪೯೮೮೬೧೫೦, ೯೪೪೮೨೨೫೦೪೬

LEAVE A REPLY

Please enter your comment!
Please enter your name here