spot_img
spot_img

ಅನಾಚಾರ ಸದಾಚಾರಗಳ ಹುಡುಕಾಟ

Must Read

- Advertisement -

ಅಂಗ ಸಂಗಿಯಾದವಂಗೆ ಲಿಂಗ ಸುಖವಿಲ್ಲ
ಲಿಂಗ ಸುಖಿಯಾದವಂಗೆ ಅಂಗ ಸುಖವಿಲ್ಲ
ಅಂಗ ಸಂಗವೆಂಬುದು ಅನಾಚಾರ
ಲಿಂಗ ಸಂಗವೆಂಬುದು ಸದಾಚಾರ
ಇದು ಕಾರಣ ಅಂಗ ಸಂಗವ ಬಿಟ್ಟು ಲಿಂಗ ಸಂಗಿಯಾಗಿರಬೇಕು.
ಕೂಡಲ ಚೆನ್ನ ಸಂಗಮದೇವನಲ್ಲಿ.
ಚೆನ್ನ ಬಸವಣ್ಣ

ಅಂಗ ಸಂಗಿಯಾದವಂಗೆ ಲಿಂಗ ಸುಖವಿಲ್ಲ


ಅಂಗ ಸುಖ ಎಂದರೆ ಶರೀರ ಸುಖವು. ಅದು ಪಂಚೇಂದ್ರಿಗಳ ಮೂಲಕ ವ್ಯಕ್ತಿಗತವಾಗಿ ತೃಪ್ತವಾಗುವ ವಿಧಾನವಾಗಿದೆ. ಅಂಗ ಸಂಗಿಯು ತನ್ನ ಬಟ್ಟೆ ಬರಿಯ ಉಡುಗೆ ತೊಡುಗೆ ಆಹಾರ ಸುಖದ ಲೆಕ್ಕಾಚಾರದಲ್ಲಿರುತ್ತಾನೆ. ತನ್ನ ಅಂಗದ ನಿಜ ಉದ್ದೇಶವನ್ನು ಸಂಪೂರ್ಣ ಕಡೆಗಣಿಸಿ ಸ್ವಾರ್ಥ ಮತ್ತು ಕೇವಲ ವ್ಯಕ್ತಿ ಕೇಂದ್ರಿತ ಸುಖಕ್ಕಾಗಿ ಹಪಹಪಿಸುವವನು ಆತ್ಮ ಸುಖವನ್ನು ಲಿಂಗ ಭೋಗವನ್ನು ಸಮಷ್ಟಿಯ ಭಾವವನ್ನು ಅದರ ಮಧುರ ಸಂಬಂಧಗಳನ್ನು ಸವಿಯಲು ಸಾಧ್ಯವಿಲ್ಲ.

- Advertisement -

ಲಿಂಗ ಸುಖಿಯಾದವಂಗೆ ಅಂಗ ಸುಖವಿಲ್ಲ


ಮನದೊಳಗೆ ಮನೆಯಮಾಡಿ ಶರೀರದಲ್ಲಿಯೇ ಮಹಾದೇವನನ್ನು ಕಾಣುವ ಲಿಂಗ ತತ್ವ ಹೊಂದಿದ ಲಿಂಗ ಸಂಬಂಧಿಗಳಿಗೆ ತಾವು ಅಂಗ ಸುಖವನ್ನು ಬಯಸುವದಿಲ್ಲ.

ಸಮಾಜ ಮುಖಿಯಾದವನು ಸದಾ ಸಮಷ್ಟಿಯ ಅಭಿವೃದ್ಧಿ ಜಂಗಮ ಸೇವೆಯೇ ತನ್ನ ಪರಮ ಗುರಿಯೆಂದು ನಂಬಿದವನಿಗೆ ತನ್ನ ಉಡುಗೆ ತೊಡುಗೆ ಹಸಿವು ವ್ಯಕ್ತಿಗತ ಆಮಿಷಗಳು ಆಶೆಗಳು ಇರುವದಿಲ್ಲ. ವ್ಯಕ್ತಿ ಸುಖವನ್ನು ಮೀರಿದವನು ಮಾತ್ರ ಲಿಂಗ ಸುಖವನ್ನು ಅರಿಯಬಲ್ಲನು.

- Advertisement -

ಅಂಗದ ನಿಜ ಮರ್ಮವ ತಿಳಿಯುವುದು ಅದರ ಸಾರ್ಥಕತೆಯನ್ನು ಸಮಾಜ ಸುಖದಲ್ಲಿ ಕಾಣುವುದು ಲಿಂಗ ಸುಖವು. ಅದನ್ನು ಮರೆತು ಕೇವಲ ವ್ಯಕ್ತಿ ತನ್ನ ವ್ಯಕ್ತಿಗತ ಸುಖಕ್ಕಾಗಿ ತಡಪಡಿಸಿ ಶಬ್ದ ಸ್ಪರ್ಶ ರೂಪ ರಸ ಗಂಧ ಸಾವಿಗಾಗಿ ಪಂಚೇಂದ್ರಿಗಳ ದಾಸನಾಗಿ ಅನುಭವಿಸುವುದು ಭವಿಯ ಸೀಮಿತ ವ್ಯರ್ಥ ಬದುಕು.

ಅಂಗ ಸಂಗವೆಂಬುದು ಅನಾಚಾರ


ವ್ಯಕ್ತಿ ಕೇವಲ ತನ್ನ ಸುಖ ಭೋಗಾದಿಗಳ ಪೂರೈಕೆಯಲ್ಲಿ ತನ್ನ ದೈಹಿಕ ಮಾನಸಿಕ ಸಂತೋಷಕ್ಕೆ ಎಲ್ಲ ವಾಮ ಮಾರ್ಗಗಳಲ್ಲಿ ವ್ಯವಹರಿಸುತ್ತಾನೆ.

ಅಲ್ಲಿ ಪಾಪದ ಮೊತ್ತ ಹೆಚ್ಚುತ್ತದೆ. ಅಂಗದ ಅರಿವಿಲ್ಲದೆ ಅನುಭವಿಸುವ ಸುಖ ಅಂಗಕ್ಕೆ ಕೇಡು .ಅರಿವಿನಿಂದ ಇತಮಿತವಾಗಿ ಬಳಸಿ ತಾನು ಸಂತೋಷ ಅನುಭವಿಸಿ ಸಮಾಜವನ್ನು ಸಂತೋಷವಾಗಿಡುವ ಗುಣವಿಲ್ಲದಿದ್ದಡೆ ಅದುವೇ ಅನಾಚಾರ ಮಹಾ ಪಾಪವು.

ಲಿಂಗ ಸಂಗವೆಂಬುದು ಸದಾಚಾರ


ಲಿಂಗ ಸಂಗವೆಂದರೆ ಸಮಾಜದ ಸಮಷ್ಟಿಯ ಕಲ್ಯಾಣ ಸುಖ ಅಭಿವೃದ್ಧಿ ಬಯಸುವವನು ಲಿಂಗ ಸಂಬಂಧಿಯಾಗುತ್ತಾನೆ.ಸದಾ ಲಿಂಗ ತತ್ವದ ಜೊತೆಗೆ ಜಂಗಮ ವಿಕಾಸಕ್ಕೆ ದುಡಿಯುವವನು ಲಿಂಗ ಅಂಗಗಳ ಸಮನ್ವಯಕನಾಗಿ ಸದಾ ಸುಖದ ಅನುಭವವನ್ನು ಹೊಂದಿ ಸದಾಚಾರಿಯಾಗುತ್ತಾನೆ. ತಾನು ಸಮಾಜ ಲಿಂಗ ಸುಖಕ್ಕೆ ಬದ್ಧನಾಗುವ ಭರವಸೆ ಹೊಂದಿದ್ದಾರೆ ಆತನ ಎಲ್ಲ ಕ್ರಿಯೆಗಳು ಮಂಗಳ ಸುಖಕರ ಆನಂದಕರವಾಗಿರುತ್ತವೆ .ಇದು ಸಾಧಕ ಭಕ್ತನಿಂದ ಮಾತ್ರ ಸಾಧ್ಯವು.

ಲಿಂಗ ಸಂಬಂಧಿಯಾದವನಿಗೆ ಅಂಗದ ಪರಿವಿಲ್ಲ ಯೋಚನೆ ಚಿಂತನೆ ಇರುವದಿಲ್ಲ .ಭಕ್ತನಾದವನಿಗೆ ಸದಾ ಸಮಾಜ ಲಿಂಗ ಮುಖಿಯಾಗುವ ತವಕವಿರುತ್ತದೆ.

ಇದು ಕಾರಣ ಅಂಗ ಸಂಗವ ಬಿಟ್ಟು ಲಿಂಗ ಸಂಗಿಯಾಗಿರಬೇಕು.ಕೂಡಲ ಚೆನ್ನ ಸಂಗಮದೇವನಲ್ಲಿ


ನಿತ್ಯ ಸುಖಿ ಪರಮ ಸುಖಿಯಾಗಬೇಕೆನ್ನುವವನು ಲಿಂಗ ಸಮಾಜ ಜಂಗಮ ಅಭಿವೃದ್ಧಿ ವಿಕಾಸಕ್ಕೆ ದುಡಿಯುವವನು ಭಕ್ತನು. ಭಕ್ತನು ತನ್ನ ಅಂಗ ಸುಖಕ್ಕೆ ಮಾತ್ರ ಸೀಮಿತನಾಗಿ ಅಂಗ ಸಂಗಿಯಾದರೆ ದುರಾಕಾರಿಯಾಗುತ್ತಾನೆ. ಆದರೆ ಲಿಂಗ ಸಂಗಿಯಾಗಿ ಸರ್ವತೋಮುಖ ಅಭಿವೃದ್ಧಿ ಬಯಸುವವನು ಪರಮ ಸುಖಿಯಾಗುವನು. ತನ್ನ ಅಂಗ ಸುಖದ ಹಂಗು ಹರಿದು ಅಂಗ ಲಿಂಗದ ಸಂಬಂಧ್ಕ್ಕೆ ಸೇತುವೆಯಾಗುತ್ತಾನೆ ಸಾಧಕನು . ಇಂತಹ ಮಹಾ ಕರುಣೆಯನ್ನು ದಯಾ ಪಾಲಿಸು ಎಂದು ತನ್ನ ಚೈತನ್ಯ ಕುರುಹು ಲಿಂಗನಲ್ಲಿ ಬಿನ್ನಯಿಸುತ್ತಾರೇ ಶರಣ ಚೆನ್ನ ಬಸವಣ್ಣನನವರು.

ಇಲ್ಲಿ ಚೆನ್ನ ಬಸವಣ್ಣನನವರು ಪ್ರಾತಿನಿಧಿಕ ಭಾವದಲ್ಲಿ ಸಾರ್ವತ್ರಿಕ ಅರ್ಥ ನೀಡುವ ಅತ್ಯಂತ ಸರಳ ನಿಷ್ಟುರ ನೇರವಾಗಿ ವಚನದಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ.
ಇದು ಭಕ್ತ ಸ್ಥಲದ ಸಾಧನೆಯ ಹಾದಿಯು.


ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group