ಬೀದರ: ಇವರಿಗೆ ಸಂಬಳ ಮಾತ್ರ ವೇಳೆಗೆ ಸರಿಯಾಗಿ ಬೇಕು ಆದರೆ ಕೆಲಸಕ್ಕೆ ಸರಿಯಾದ ವೇಳೆಗೆ ಬರುವುದು ಗೊತ್ತಿಲ್ಲ. ಇಂಥವರಿಗೆ ಖಡಕ್ಕಾಗಿ ಕ್ಲಾಸ್ ತೆಗೆದುಕೊಂಡ ಮಾಜಿ ಸಚಿವ ಪ್ರಭು ಚೌಹಾಣ ಕೆಲಸ ಮಾಡುವ ಇಚ್ಛೆ ಇಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಿ ಎಂದು ಲೇಟ್ ಲತೀಫ ಸಿಬ್ಬಂದಿಗಳಿಗೆ ವಾರ್ನ್ ಮಾಡಿದರು.
ಔರಾದ್ ಮಿನಿ ವಿಧಾನಸೌಧದಲ್ಲಿ ತಹಸಿಲ್ದಾರ್ ಕಚೇರಿ ಸೇರಿದಂತೆ ವಿವಿಧ ಇಲಾಖೆಯ ಕಚೇರಿಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಪ್ರಭು ಚೌವ್ಹಾಣ ಇಂದು ದಿಢೀರ್ ಭೇಟಿ ನೀಡಿದ್ದರು. ಬೆಳಿಗ್ಗೆ11 ಗಂಟೆ ಆದರು ಕೆಲಸಕ್ಕೆ ಹಾಜರಾಗದ ಸರ್ಕಾರಿ ಸಿಬ್ಬಂದಿಗಳನ್ನು ಮಿನಿ ವಿಧಾನಸಭೆಯ ಮೇನ್ ಗೇಟ್ ಲಾಕ್ ಮಾಡಿ ಅಧಿಕಾರಿಗಳು ಕಚೇರಿಗೆ ಬರುವ ಸಮಯ ವೀಕ್ಷಣೆ ಮಾಡಿದರು. ತಡವಾಗಿ ಬಂದ ನೌಕರರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
ಸಾರ್ವಜನಿಕರ ನೂರಾರು ಸಮಸ್ಯೆಗಳ ಬಗ್ಗೆ ದೂರುಗಳು ಬಂದ ಮೇಲೆ ಕಚೇರಿಗೆ ನಾನು ಭೇಟಿ ನೀಡಿದ್ದೇನೆ. ಸಮಯ 11 ಗಂಟೆ ಆದರೂ ಸಿಬ್ಬಂಧಿಗಳು ಮಾತ್ರ ಕೆಲಸಕ್ಕೆ ಹಾಜರಾಗಿರಲಿಲ್ಲ . ಇದು ಸರಿಯಲ್ಲ ಅಧಿಕಾರಿಗಳಿಗೆ ಕೆಲಸ ಮಾಡುವ ಇಚ್ಛೆ ಇಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಬೇಕು ಇಲ್ಲದಿದ್ದರೆ ನಾನು ರಸ್ತೆಗಳಿದು ಹೋರಾಟ ಮಾಡಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರ ಬಂದ 6 ತಿಂಗಳಿಂದ ಸರ್ಕಾರಿ ಅಧಿಕಾರಿಗಳು ಸರ್ಕಾರದ ಹಿಡಿತದಲ್ಲಿಲ್ಲ ಎಂದು ಆರೋಪಿಸಿದ ಅವರು, ಇದೇನು ಸರ್ಕಾರಿ ಕಚೇರಿನಾ ಅಥವಾ ನಿಮ್ಮ ಖಾಸಗಿ ಕಚೇರಿ ನಾ ಅಂತ ಪ್ರಶ್ನೆ ಮಾಡಿ ಸರ್ಕಾರಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿ ಕುಳಿತೇ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ ಇಲ್ಲಿನ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ನೀಡುವಂತೆ ತಿಳಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ