spot_img
spot_img

ಎಂಪಿಎಲ್-2023 ಕ್ರಿಕೆಟ್ ಟೂರ್ನಿ! ಮೂಡಲಗಿ ರಾಯಲ್ ಚಾಲೇಂಜರ್ಸ ತಂಡ ಚಾಂಪಿಯನ್ಸ್

Must Read

spot_img
- Advertisement -

ಮೂಡಲಗಿ: ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಸಹಯೋಗದಲ್ಲಿ ಸ್ಥಳೀಯ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ 5 ದಿನಗಳ ‘ಮೂಡಲಗಿ ಪ್ರಿಮಿಯರ್ ಲೀಗ್-2023’ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿಯ ರಾಯಲ್ ಚಾಲೆಂಜರ್ಸ್ ತಂಡವು ಪ್ರಥಮ ಸ್ಥಾನ ಪಡೆದು ರೂ. 50,001 ನಗದು ಬಹುಮಾನ ಮತ್ತು ಪಾರಿತೋಷಕವನ್ನು ಪಡೆದುಕೊಂಡಿತು.

ದ್ವಿತೀಯ ಸ್ಥಾನವನ್ನು ಮೂಡಲಗಿಯ ಬುಲ್ಡೋಜರ್ ತಂಡವು ಪಡೆದು ರೂ. 30,001 ಮತ್ತು ಪಾರಿತೋಷಕ ಪಡೆದುಕೊಂಡರೆ, ಮೂಡಲಗಿ ಸ್ಟ್ರೈಕರ್ಸ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡು ರೂ. 20,001 ಮತ್ತು ಪಾರಿತೋಷಕವನ್ನು ಪಡೆದುಕೊಂಡಿತು.

ಪಂದ್ಯ ಪುರುಷೋತ್ತಮ ಮತ್ತು ಅತೀ ಹೆಚ್ಚು ವಿಕೆಟ್ ಪಡೆದ ಹಣಮಂತ ಗಣಿ ಒಂದು ಬೈಸಿಕಲ್ ಮತ್ತು ಎಲ್‍ಇಡಿ ಟಿವಿ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಯನ್ನು ಪಡೆದುಕೊಂಡ ಜುನೇದ್ ಅವರು ಎಲ್‍ಇಡಿ ಟಿವಿ ಬಹುಮಾನವಾಗಿ ಪಡೆದುಕೊಂಡರು.  

- Advertisement -

ಅತಿಥಿಗಳಾಗಿ ಭಾಗವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಬಸವೇಶ್ವರ ಅರ್ಬನ್ ಕೋ.ಆಪ್ ಸೊಸೈಟಿ ಉಪಾಧ್ಯಕ್ಷ ಗಿರೀಶ ಢವಳೇಶ್ವರ, ವೀರೇಶ ಢವಳೇಶ್ವರ, ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ, ಮೂಡಲಗಿ ಶಿಕ್ಷಣ ಸಂಸ್ಥೆ ನಿರ್ದೇಶಕ ಸಂದೀಪ ಸೋನವಾಲಕರ, ಎನ್.ಟಿ. ಪಿರೋಜಿ, ಪ್ರೊ. ಎಸ್.ಬಿ. ಖೋತ, ಪ್ರಶಾಂತ ನಿಡಗುಂದಿ, ಸಂಜಯ ಮೋಕಾಶಿ, ಹಣಮಂತ ಬಸಳಿಗುಂದಿ, ಕೃಷ್ಣಾ ಕೆಂಪಸತ್ತಿ, ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ,  ರವಿ ಪತ್ತಾರ, ಮೇತ್ರಿ ಬಹುಮಾನ ವಿತರಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group