ಅಪ್ಪಾss ಐ ಲವ್ ಯೂ ಪಾ….!!

Must Read

*ಅಪ್ಪ*

ಎಷ್ಟೇ ಪ್ರಯತ್ನಿಸಿದರು
ಬರೆಯಲಾಗುತ್ತಿಲ್ಲ
ಅಪ್ಪಾ…
ನೀನ್ಯಾಕೊ ಪದಗಳಿಗೆ ಸಿಗುತ್ತಿಲ್ಲ…!!

ಹೆಗಲ ಮೇಲೆ ಹೊತ್ತು
ಜಗವತೋರಿದವನು
ಎದೆಗೆ ಅವುಚಿಕೊಂಡು
ಮುದ್ದಿಸಿದವನು ನೀನು
ಅಪ್ಪಾ…..
ನೀನ್ಯಾಕೋ
ರಾಗಕೆ ಸಿಗುತ್ತಿಲ್ಲ…!!

ಸಮಾನ ಹಕ್ಕು ಕೊಟ್ಟು
ಹೆಮ್ಮೆ ಪಟ್ಟವನು ನೀನು
ನಿಷ್ಠೆಯನು ನಿತ್ಯ ರೂಢಿಯಲಿ ತಂದವನು
ಅಪ್ಪಾ….
ನಿನ್ಯಾಕೊ ಅರಿವಿಗೆ ಸಿಗುತ್ತಿಲ್ಲ….!!

ಮೌಲ್ಯಗಳನು ಪುಟಕ್ಕಿಟ್ಟ
ಕುಶಲಕರ್ಮಿ ನೀನು
ಪ್ರೀತಿಯ ಸಿರಿವಂತಿಕೆ
ಉಣಸಿದ ಸಾಹುಕಾರ
ಅಪ್ಪಾ….
ನೀನ್ಯಾಕೊ ಲೆಕ್ಕಕ್ಕೆ
ಸಿಗುತ್ತಿಲ್ಲ…..!!
ಸತತ ದುಡಿದ ಕಾಯಕಯೋಗಿ ನೀನು
ಜಗದ ಸುಖವನೆಲ್ಲಾ
ನನ್ನ ಬೊಗಸೆಗೆ ತಂದವ ನೀನು…..
ಅಪ್ಪಾ ನೀನ್ಯಾಕೊ ವ್ಯಾಖ್ಯಾನಕ್ಕೆ ಸಿಗುತ್ತಿಲ್ಲ…!!

*ಡಾ. ನಿರ್ಮಲಾ ಬಟ್ಟಲ*


*ಅಪ್ಪ*

ಅಪ್ಪ ಎಂಬ ಪದವು ಅಮೃತವು
ತಂದೆಯೆಂದರೆ ತನ್ಮಯವು//ಪ//
ಮನೆ ಮಂದಿರದ ದೇವರು ಅಪ್ಪ
ಆಡದೆ ಮಿಡಿಯುವ ಹೃದಯದ ಅಪ್ಪ
ಅಕ್ಕರೆ ಮನೆಯ ಸಿಹಿ ಸಕ್ಕರೆ ಅಪ್ಪ
ಮನೆಯ ಮೇರು ಪರ್ವತ ಅಪ್ಪ//

ಅಂತಃಕರಣದ ಚಿಲುಮೆ ಅಪ್ಪ
ಅಹಂಕಾರದ ಅರಸು ಅಪ್ಪ
ಅಳಿಸದ ಬಣ್ಣದ ಚಿತ್ರ ಅಪ್ಪ
ಮಿನುಗುವ ನಕ್ಷತ್ರವು ಎಂದೆಂದಿಗೂ ಅಪ್ಪ//

ಕರುಳಬಳ್ಳಿಯ ಬೇರು ಅಪ್ಪ
ಕನಕ ಕಸ್ತೂರಿ ಮನೆಗೆ ಅಪ್ಪ
ಕೀರ್ತಿಯ ಮಗನು ಮನೆಗೆ ಅಪ್ಪ
ಕರುಣೆಯ ಕಳಸ ಮಕ್ಕಳಿಗೆ ಅಪ್ಪ//

ಬೇಕು-ಬೇಡಗಳ ಬರಿಸುವ ಅಪ್ಪ
ಬಯಕೆ ಬಳ್ಳಿಗೆ ನೀರೆರೆಯುವ ಅಪ್ಪ
ಬದುಕು ನಡೆಸುವ ನಾವಿಕನು ಅಪ್ಪ
ಬಂಧುರ ಮನದ ಸವಿಗಾನ ಅಪ್ಪ

*ಅನ್ನಪೂರ್ಣ ಹಿರೇಮಠ ಬೆಳಗಾವಿ*

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group