ಅಬ್ಬರಿಸಲು ‘ ರಾಬರ್ಟ್ ‘ ಸಿದ್ಧ ; ಅಭಿಮಾನಿಗಳ ಕುತೂಹಲ

Must Read

ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಪೋಸ್ಟರ್, ಟ್ರೇಲರ್ ಗಳು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿದ್ದು ಚಿತ್ರ ತೆರೆ ಕಾಣಲಿರುವ ಮಾರ್ಚ್ ೧೧ ನೇ ದಿನವನ್ನು ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಮಾಡಿದೆ.

ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಅಂತು ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಚಿತ್ರವನ್ನು ಕಣ್ತಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಚಿತ್ರದ ಡೈಲಾಗ್ಸ್ ಎಲ್ಲರ ಬಾಯಲ್ಲೂ ಗುನುಗುನಿಸುತ್ತಿವೆ. ಟೀ ಶರ್ಟ್, ಟ್ಯಾಟೂಗಳಲ್ಲೂ ‘ರಾಬರ್ಟ್’ ಚಿತ್ರ ಮೂಡಿಬರುತ್ತಿದೆ. ಇನ್ನು ಕಾರುಗಳ ಮುಂಭಾಗದಲ್ಲೂ ‘ರಾಬರ್ಟ್’ ಸ್ಟಿಕ್ಕರ್ ರಾರಾಜಿಸುತ್ತಿವೆ. ‘ರಾಬರ್ಟ್’ ಮೊದಲ ಪೋಸ್ಟರ್ ಬಿಡುಗಡೆಯಾದಾಗ ಇದು ಆ್ಯಕ್ಷನ್ ಸಿನಿಮಾವೇ ಇರಬೇಕು ಎಂದೆನ್ನಿಸಿತ್ತು. ಹಾಡುಗಳು ಬಿಡುಗಡೆಯಾದಾಗ
ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ ಎಂಬುದು ಮನದಟ್ಟಾಯಿತು. ಟ್ರೇಲರ್ ನಲ್ಲಿ ಆ್ಯಕ್ಷನ್ ‌ನಲ್ಲೂ ಅಬ್ಬರಿಸುವ ದರ್ಶನ್ ಸಂಟಿಮೆಂಟ್‌ನಲ್ಲೂ ಸಖತ್ ಮಿಂಚಿದ್ದಾರೆ.

ಅತ್ತ ತೆಲುಗಿನಲ್ಲಿಯೂ ರಾಬರ್ಟ್ ಹವಾ ಕರೋನಾದಿಂದ ಚಿತ್ರರಂಗ ಕಂಗೆಟ್ಟಿದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾದ ದಚ್ಚು , ಮಾರ್ಚ್ 11ಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ಘೋಷಿಸಿದರು. ಎಂತಹದ್ದೇ ಸಂಕಷ್ಟವಿದ್ದರೂ ಚಿತ್ರ ಮಂದಿರದಲ್ಲಿಯೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದರು. ಅದರಂತೆ ಈಗ ‘ರಾಬರ್ಟ್’ ಕನ್ನಡದ ಜತೆಗೆ ತೆಲುಗಿನಲ್ಲಿಯೂ ತೆರೆಗೆ ಬರಲು ಸಿದ್ಧವಾಗಿದ್ದು, ಇದಕ್ಕೆ ಅಗತ್ಯ ತಯಾರಿ ನಡೆಯುತ್ತಿವೆ.

ತೆಲುಗಿನಲ್ಲಿ ‘ರಾಬರ್ಟ್’ ತೆರೆಗೆ ಬರಲಿದೆ ಎಂದಾಗಲೇ ಟಾಲಿವುಡ್ ಮಂದಿ ಬೆಚ್ಚಿಬಿದ್ದಿದ್ದರು. ಹಾಗಾಗಿ ಅಲ್ಲಿನ ಕೆಲವರು ಚಿತ್ರ ಬಿಡುಗಡೆಗೂ ಅವಕಾಶ ನೀಡದೆ ತಕರಾರು ತೆಗೆದಿದ್ದರು. ಇದೆಲ್ಲವೂ ಈಗ ಬಗೆಹರಿದಿದ್ದು, ‘ರಾಬರ್ಟ್’ ತೆಲುಗು ಅವತರಣಿಕೆ ಮಾರ್ಚ್ 11ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ದರ್ಶನ್‌ಗೆ ಜತೆಯಾಗಿ ಆಶಾಭಟ್ ನಟಿಸಿದ್ದಾರೆ. ತೆಲುಗಿನ ಖ್ಯಾತ ಖಳ ನಟ ಜಗಪತಿ ಬಾಬು ಈ ಚಿತ್ರದಲ್ಲಿಯೂ ಖಳನಾಗಿ ಮಿಂಚಿದ್ದಾರೆ.

ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group