spot_img
spot_img

ಏಳೆಲೆ ಏ ಗುಬ್ಬಿ ಎಂಬ ತತ್ತ್ವಪದದ ವಿವರಣೆ

Must Read

spot_img
- Advertisement -

ಏಳೆಲೆ ಏ ಗುಬ್ಬಿ ಮಬ್ಬಾಗಿಯಿದ್ದರೆ                            ಕೊಂದು ತಿನ್ನುವುದಲ್ಲ ಬೆಕ್ಕು                                        ಪರರ‌ ನಿವಾಸದಿ‌ ಗೂಡನು ಕಟ್ಟುತ.                         ಕೊಬ್ಬಿದೆ ನಿನಗೆಷ್ಟು ಸೊಕ್ಕು

ಊರ ಗಂಡು ಗುಬ್ಬಿಯ ಜೀವನವನ್ನು ರೂಪಕವಾಗಿ ಇಟ್ಟುಕೊಂಡು ಬರೆದಂಥ ತತ್ತ್ವಪದ. ಇಲ್ಲಿ‌ ವಿವೇಕಾನಂದರು ಹೇಳಿದ Arise awake stop not till the goal is reached ಎಂಬ‌ ಮಾತನ್ನು‌ ಏಳೆಲೆ‌ ಏ ಗುಬ್ಬಿ ಪದ ನೆನಪಿಸುತ್ತದೆ.ನೀನು ಮಬ್ಬಾಗಿದ್ದರೆ‌ ಅಂದರೆ ಅಜ್ಞಾನದಲ್ಲಿದ್ದರೆ ಬೆಕ್ಕು ಎನ್ನುವ ಕಾಮ ಅಥವಾ ಕಾಲ ನಿನ್ನ ಕೊಂದುಬಿಡುತ್ತದೆ. ಪರರ‌ ಮನೆಯಗೋಡೆ ತೂತುಗಳ ಅಥವಾ ಪಟಗಳ‌ ಹಿಂದೆ ಗೂಡು‌ ಕಟ್ಟಿ ನನ್ನದು‌ ಎಂದು ಅಂದರೆ ಪರಮಾತ್ಮ ಸೃಷ್ಟಿಸಿದ ಜಗತ್ತಿನಲ್ಲಿ‌ ಮನೆಕಟ್ಟಿಕೊಂಡು ಆಸ್ತಿ ಹಣ ಸಂಪಾದಿಸಿ ಸೊಕ್ಕಿನಿಂದ ಮೆರೆಯುತ್ತಿದ್ದೀಯ. ಹಣದ ಮೇಲಿನ
ಮೋಹದಿಂದ ಹಾಗೆ ಮಾಡುತ್ತಿ.

ಮಡದಿಯನೋರ್ವಳ ಕಟ್ಟಿಕೊಳ್ಳುತ ನೀನು
ಬಹಳ ಕಾಮುಕನಾದೆಯಲ್ಲ
ಯಾವನಾದರು ಬಂದು ಮಡದಿಯ ತಡವಲು
ಗುದ್ದಾಟವಾಡುವೆಯಲ್ಲ

- Advertisement -

ಹೆಂಡತಿಯನ್ನು‌ ಮದುವೆಯಾಗಿ ಅತಿ ಕಾಮುಕನಾಗಿ ( ಗಂಡು ಗುಬ್ಬಿ ಅನೇಕ ಸಲ ಹೆಣ್ಣು ಗುಬ್ಬಿಯ ಮೇಲೆ ಹತ್ತಿ ಇಳಿಯುತ್ತದೆ)ವರ್ತಿಸುತ್ತಿದ್ದೀಯ. ನಿನ್ನ‌ ಸತಿಗೆ ಮತ್ತೊಂದು ಗುಬ್ಬಿ ಬಂದು ತಡವಿದರೆ ಜೋರಾಗಿ ಗುದ್ದಾಡುತ್ತೀಯ (ಎರಡು ಗಂಡು ಗುಬ್ಬಿಗಳು ಜಗಳವಾಡುತ್ತವೆ) ಅಂದರೆ
ಸತಿಯ ತಡವಿದವನನ್ನು ಕೊಲ್ಲಲು ಸಹ ಹೇಸುವುದಿಲ್ಲ. ಸತಿಯಮೇಲಿನ ಮೋಹದಿಂದ ಹಾಗೆ ವರ್ತಿಸುತ್ತಿ.

ಗೂಡಲಿ‌ಮರಿಯಿಟ್ಟು ಮತ್ತೆ ಗುಟುಕನು ಕೊಟ್ಟು
ಪೋಷಣೆ ಮಾಡಿದೆಯಲ್ಲ
ರೆಕ್ಕೆ ಬಲಿತ ಮರಿ ಹಾರಿಹೋದರೆ ದೂರ
ದುಃಖವ ಮಾಡುವೆಯಲ್ಲ

ಗೂಡಿನಲ್ಲಿ ತತ್ತಿ‌ ಇಟ್ಟು ಮರಿಮಾಡಿ ದುಡಿದು ತಂದು ಗುಟುಕು ಕೊಟ್ಟು ಪೋಷಣೆ ಮಾಡುತ್ತಿ.ಆದರೆ ರೆಕ್ಕೆ ಬಲಿತ ಮರಿಗಳು ಸ್ವಾತಂತ್ರವಾಗಿ‌ ಗೆಳತಿಯೊಂದಿಗೆ ಹಾರಿ ಹೋದರೆ ದುಃಖಪಡುತ್ತಿಯ. ವಯಸ್ಸಿಗೆ ಬಂದ ಮಕ್ಕಳು ಬೆಳೆದು ಸ್ವಂತ ದುಡಿಯಲು ಹೆಂಡತಿಯೊಂದಿಗೆ ಬೇರೆಯಾಗಿ ಹೋಗುತ್ತಾರೆ. ಆಗ ಆ ಮಕ್ಕಳ ಮೇಲಿನ ಮೋಹ‌ ನಿನಗೆ ದುಃಖಿಸುವಂತೆ ಮಾಡುತ್ತದೆ.

- Advertisement -

ಯಾರಿಗೆ ಯಾರಿಲ್ಲ ಯಮನಿಗೆ ದಯವಿಲ್ಲ
ಮಾರಾರಿಯೊಬ್ಬನೆ ದಿಕ್ಕು
ಮೆಟ್ರಿ ಮಹದೇವನ ನೆನೆಯುತಲಿದ್ದರೆ
ಶಾಂತಿ ಸಂಪದ‌ ನಿನಗಕ್ಕು

ಕೊನೆಯ ಕಾಲದಲ್ಲಿ ಮಡದಿ ಮಕ್ಕಳು ಯಾರು ಬರುವುದಿಲ್ಲ.
ಕೊಂಡೊಯ್ಯುವ ಆ ಯಮರಾಜನಿಗೆ ಕರುಣೆಯೆಂಬುದಿಲ್ಲ. ಯಾರು ಇಲ್ಲದವರಿಗೆ ದೇವರೆ ದಿಕ್ಕು ಎನ್ನುವ ಹಾಗೆ
ಕೊನೆಗೆ ಆ ಪರಮಾತ್ಮನೆ ನಿನ್ನ ಕಾಪಾಡುತ್ತಾನೆ. ಅಂದರೆ ದೇಹವನ್ನು ಇಚ್ಛಾಮರಣಿಯಾಗಿ ನೋವಿಲ್ಲದೆ ಸಾವಿಲ್ಲದೆ
ತೊರೆಯುವಂತೆ ಮಾಡುತ್ತಾನೆ. ಮಾರ್ಕಂಡೇಯನಿಗೆ ಸಾವಿದ್ದರು ಅವನನ್ನು ಯಮನಿಂದ ಕಾಪಾಡಿದ ಮೃತ್ಯಂಜಯ ಜಿರಂಜೀವಿಯನ್ನಾಗಿ ಮಾಡಿದಂತೆ ನಿನ್ನ ಮಾಡುತ್ತಾನೆ. ಆದ್ದರಿಂದ ಅವನನ್ನು‌ ಸದಾ‌ ನೆನೆದರೆ ಶಾಂತಿ ಎಂಬ ಸಂಪತ್ತನ್ನು ನೀಡುತ್ತಾನೆ. ಎಷ್ಟು ಸಂಪತ್ತು ಸತಿಸುತರು ಇದ್ದರೇನು‌ ಶಾಂತಿ ಇಲ್ಲದಿದ್ದರೆ ವ್ಯರ್ಥ.

ಈ ತತ್ತ್ವಪದದಲ್ಲಿ‌ ಈಷಣತ್ರಯಗಳಾದ ಧನೇಷಣ, ಧಾರೇಷಣ ಮತ್ತು ಪುತ್ರೇಷಣಗಳ ಬಗ್ಗೆ ಚರ್ಚಿಸಲಾಗಿದೆ
ಈಷಣ ಅಂದರೆ ಆಸೆ. ಆಸೆಯೆ ದುಃಖಕ್ಕೆ ಕಾರಣವಾಗುತ್ತವೆ.
ಈಷಣತ್ರಯಗಳನ್ಮು‌ ತೊರೆದರೆ ದುಃಖದಿಂದ ಪಾರಾಗಿ
ಪರಮ ಶಾಂತಿ ದೊರಕುತ್ತದೆ ಎಂಬುದು ಕವಿಯ ಆಶಯ

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group