ಸವದತ್ತಿ: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಕಾನೂನನ್ನು ಜಾರಿ ತಂದು ರೈತ ವಿರೋಧಿ ಕೆಲಸ ಮಾಡುತ್ತಿದೆ. ನಮ್ಮ ತಾಲೂಕಿನಲ್ಲಿ ಬಹಳಷ್ಟು ಜನ ರೈತರು ಕಡಲೆಯನ್ನು ಬೆಳೆದಿರುತ್ತಾರೆ ಇದುವರೆಗೂ ಕಡಲೆ ಖರೀದಿ ಕೇಂದ್ರಗಳನ್ನು ಎಲ್ಲಿಯೂ ತೆರೆದಿಲ್ಲ ಇದರಿಂದ ಬೇಕಾಬಿಟ್ಟಿ ಮಾರಾಟ ಮಾಡುತ್ತಿದ್ದಾರೆ ರೈತರು ಬೆಳೆದ ಮಾಲನ್ನು ಎಲ್ಲಿ ಮಾರಾಟ ಮಾಡಬೇಕು ಎಂಬುವುದು ತಿಳಿಯದಾಗಿದೆ ಇದರಿಂದ ರೈತರು ಕಂಗಾಲಾಗಿದ್ದು ಇನ್ನು ಮುಂದಾದರೂ ಅಧಿಕಾರಿಗಳು ಕೂಡಲೆ ಒಂದು ವಾರದಲ್ಲಿ ತಾಲೂಕಿನಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಇಲ್ಲವಾದರೆ ತಾಲೂಕಿನ ರೈತರು ತಹಶೀಲ್ದಾರ ಕಾರ್ಯಾಲಯದ ಮುಂದೆ ತಹಶೀಲ್ದಾರ ಕಚೇರಿಗೆ ಬೀಗ ಹಾಕಿ ಅಹೋ ರಾತ್ರಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ವಿ. ನಾಯಕ ಮಾತನಾಡಿದರು.
ಅವರು ತಹಶೀಲ್ದಾರ ಕಾರ್ಯಾಲಯದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ತಹಶೀಲ್ದಾರರವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, “ನಾವು ರೈತರಾಗಿ ನಮಗಿರುವ ಹಕ್ಕನ್ನು ಕೇಳುತ್ತಿದ್ದೇವೆ ಪಕ್ಷಕ್ಕೆ ವಿರೋಧಿಸುತ್ತಿಲ್ಲ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರಿಂದ ನಾವು ಪ್ರತಿಭಟಿಸಬೇಕಾಗಿದೆ” ಎಂದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮುಖಂಡರು ಹಾಗೂ ನ್ಯಾಯವಾದಿಗಳಾದ ಜೆ ವ್ಹಿ ಅಗಡಿಯವರು ಮಾತನಾಡಿ, “ರೈತರ ಪಂಪಸೆಟ್‍ಗಳಿಗೆ ಮೀಟರ ಅಳವಡಿಸುವುದನ್ನು ನಾನು ಖಂಡಿಸುವೆ ಸರಕಾರಿ ನೌಕರರ ವೇತನ ಹೆಚ್ಚಿಸಿದ್ದಾರೆ ಆದರೆ ರೈತರು ಬೆಳೆದ ಬೆಳೆಗೆ ಬೆಲೆ ಏಕೆ ಹೆಚ್ಚಿಸುತ್ತಿಲ್ಲ.ಯಾವ ರೈತರನ್ನು ಕೇಳದೆ ರೈತ ವಿರೋಧಿ ಕಾನೂನನ್ನು ಮಾಡಿರುವುದು ಸರಿಯಲ್ಲ ಎಂದು ಮಾತನಾಡಿದರು.
ನಂತರ ಗ್ರೇಡ್ -2.ತಹಶೀಲ್ದಾರ ರವಿ ನೇಸರಗಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಅಧ್ಯಕ್ಷ .ಸುರೇಶ ಇ ಸಂಪಗಾವಿ. ರಮೇಶ ಪ. ಗುಮ್ಮಗೋಳ.ಆರ್ ಎಫ್. ರೇಣುಕಿಗೌಡರ .ಈರಣ್ಣ ಹಳ್ಳದ.ವೀರೇಶ. ಗಿರಿಜಾ ಕರಿಗೌಡ್ರ. ರಾಜೇಶ್ವರಿ ರೇಣುಕಿಗೌಡ್ರ.ಪ್ರವೀಣ ಪಟಾತರ.ಉಪಸ್ಥಿತರಿದ್ದರು