spot_img
spot_img

ಕರ್ನಾಟಕ ಏಕೀಕರಣದ ರೂವಾರಿ ಅದರಗುಂಚಿ ಶಂಕರಗೌಡರು

Must Read

- Advertisement -

ಇಪ್ಪತ್ತಮೂರು ದಿವಸಗಳ ಉಪವಾಸದ ಮ‌ೂಲಕ ಏಕೀಕರಣದ ಮನ್ನುಡಿ ಬರೆದವರು ಅದರಗುಂಚಿ ಶಂಕರಗೌಡರು.

ಆ ಮೂಲಕ ಕನ್ನಡ ನಾಡಿನ ಪೊಟ್ಟಿ ಶ್ರೀರಾಮುಲು ಎಂದು ಪ್ರಸಿದ್ಧಿಯಾದವರು

೧೯೫೩ರಲ್ಲಿ ಆಂದ್ರಪ್ರದೇಶದ ಭಾಷಾವಾರು ಆಧಾರದ ಮೇಲೆ ರಾಜ್ಯ ರಚನೆಯಾದ ನಂತರ ಕನ್ನಡಿಗರ ಅತೃಪ್ತಿ ಹೆಚ್ಚಾಯಿತು.

- Advertisement -

ಇದರಿಂದ ಮನನೊಂದ ಅದರಗುಂಚಿ ಶಂಕರಗೌಡರು ಕರ್ನಾಟಕ ಏಕೀಕರಣ ಆಗುವ ಖಚಿತ ಭರವಸೆ ಸಿಗುವವರೆಗೆ ದಿನಾಂಕ ೨೮/೩/೧೯೫೩ರಂದು ಧಾರವಾಡ ಜಿಲ್ಲೆಯ ಕುಂದಗೊಳ ತಾಲೂಕಿನ ಅದರಗುಂಚಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಆಮರಣಾಂತ ಉಪವಾಸ ಪ್ರಾರಂಭಿಸಿದರು.

ಅದರಗುಂಚಿ ಶಂಕರಗೌಡರು ಮಹಾತ್ಮ ಗಾಂಧೀ ಮತ್ತು ಸುಭಾಸಚಂದ್ರ ಬೋಸ್ ಅವರಿಂದ ಪ್ರಭಾವಿತರಾಗಿದ್ದರು.ರಾಷ್ಟ್ರ ಮಟ್ಟದ ಇಂಗ್ಲಿಷ್ ಪತ್ರಿಕೆಗಳ ಮೂಲಕ ಶಂಕರಗೌಡರ ಉಪವಾಸ ವ್ಯಾಪಕ ಪ್ರಚಾರ ಪಡೆಯಿತು.

ಉಪವಾಸ ಕುಳಿತ ಅದರಗುಂಚಿ ಶಂಕರಗೌಡರನ್ನು ಭೇಟಿಯಾಗಲು ಜನ ಪ್ರವಾಹವೇ ಹರಿದು ಬಂದಿತು.ಈ ಜನರ ನಿಯಂತ್ರಣ ,ಊಟ ನೀರಿನ ವ್ಯವಸ್ಥೆ ಮಾಡುವುದು ಸವಾಲಾಯಿತು.

- Advertisement -

ಈ ಸಂದರ್ಭದಲ್ಲಿ ಮುಂಬಯಿ ನಲ್ಲಿ ಶಸ್ತ್ರಚಿಕಿತ್ಸೆ ಗೆ ಒಳಗಾಗಿದ್ದ ಜಯದೇವಿತಾಯಿ ಲಿಗಾಡೆ ರಕ್ತದಲ್ಲಿ ಸಹಿಯುಳ್ಳ ಪತ್ರವನ್ನು ಬೆಂಬಲ ಸೊಚಿಸಿ ಬರೆದರು.ಹೊಸಮನಿ ಸಿದ್ದಪ್ಪನವರು ಮತ್ತು ಅವರ ಬೆಂಬಲಿಗರು ರಕ್ತದಲ್ಲಿ ಪತ್ರಬರೆದು ಬೆಂಬಲ ಸೂಚಿಸಿದರು. ಅಂದಿನ ಕೊಪ್ಪಳದ ಸಂಸದರಾದ ಅಳವಂಡಿ ಶಿವಮೂರ್ತಿ ಅದರಗುಂಚಿ ಶಂಕರಗೌಡರ ಉಪವಾಸ ಕುರಿತು ಲೋಕಸಭೆಯಲ್ಲಿ ಅರ್ಧಗಂಟೆ ಚರ್ಚಿಸಿದರು,ಏನೂ ಪ್ರಯೋಜನವಾಗಲಿಲ್ಲ.

ಶಂಕರಗೌಡರ ಉಪವಾಸದ ೨೩ನೇಯ ದಿನ ಅಂದರೆ ದಿನಾಂಕ ೧೯/೪/೧೯೫೩ ಹುಬ್ಬಳ್ಳಿಯ ಪುರಸಭೆಯಲ್ಲಿ ರಾಜಕೀಯ ಪಕ್ಷದ ಕಾರ್ಯಕಾರಿ ಸಭೆ ಜರುಗಿತ್ತು. ಇದು ಅಂದಿನ ವಿರೋಧ ಪಕ್ಷದ ರಾಜಕೀಯ ನೇತಾರರಿಗೆ ತಿಳಿದಿತ್ತು. ಹಾಗಾಗಿ ಅದರಗುಂಚಿ ಶಂಕರಗೌಡರ ಉಪವಾಸದ ೨೩ ನೆಯ ದಿನದಂದು ಉಪವಾಸ ಮೊಟಕುಗೊಳಿಸುವಂತೆ ಯಾವ ನಾಯಕರೂ ಮನವೊಲಿಸಲು ಅದರಗುಂಚಿಗೆ ಬರಲಿಲ್ಲ. ಕಾರಣ ಅಂದು ಸಹಿತ ಎಲ್ಲವೂ ದೆಹಲಿಯಿಂದ ನಿರ್ಧರಿತವಾಗುತ್ತಿತ್ತು(high command) ಏಕೀಕರಣದ ಪರವಿದ್ದ ಸುಮಾರು ೨೫೦೦೦ ಜನರು ಹುಬ್ಬಳ್ಳಿಯ ಗುಳಕವ್ವನ ಕಟ್ಟೆ ಅಂದರೆ ಇವತ್ತಿನ ನೆಹರು ಮೈದಾನಕ್ಕೆ ಚಕ್ಕಡಿ ಸಮೇತ ಬಂದರು.

೧೯/೪/೧೯೫೩ರಂದು ಜರುಗಿದ ರಾಜಕೀಯ ಸಭೆಗೆ ಪ್ರತಿನಿಧಿಗಳು ಬರುವ ಹೊತ್ತಿಗೆ ಧಿಕ್ಕಾರ ಕೂಗಿದರು,ಸಭೆ ನಡೆಯುವ ಸ್ಥಳಕ್ಕೆ ನುಗ್ಗಿ ಜನಪ್ರತಿನಿಧಿಗಳಿಗೆ ಬಳೆ ತೊಡಿಸಿ ಅರಿಶಿನ ಕುಂಕುಮ ಹಚ್ಚಿದರು.ಹಳ್ಳಿಕೇರಿ ಗುದ್ಲೇಪ್ಪನವರ ಕಾರಿಗೆ ಬೆಂಕಿ ಇಟ್ಟರು.

ಎಸ್.ನಿಜಲಿಂಗಪ್ಪ ನವರೇ ಸಂದರ್ಶನದಲ್ಲಿ ಹೇಳಿದಂತೆ ಜೋಡಿನಿಂದ ಹೊಡೆದರು ಎಂದಿದ್ದಾರೆ.ಈ ಘಟನೆಯನ್ನು ಸ್ಥಳೀಯ ಪತ್ರಿಕೆಗಳು ವರದಿ ಮಾಡಲಿಲ್ಲ.

ಕಾರಣ ಇದಕ್ಕೆ ಪ್ರಚಾರ ಸಿಕ್ಕರೆ ಅದರಗುಂಚಿ ಶಂಕರಗೌಡರು ರಾಷ್ಟ್ರಮಟ್ಟದಲ್ಲಿ ಚಲಾವಣೆಗೆ ಬರುವರು ಎಂಬ ಆತಂಕ ಹೀನ ಬುದ್ದಿ ಅವರಿಗೆ ಇತ್ತು.

ಜನರನ್ನು ನಿಯಂತ್ರಣಕ್ಕೆ ತರಲು ಲಾಟಿ ಚಾರ್ಜ ಮಾಡಲಾಯಿತು ಆದರೆ ಈ ಘಟನೆ ಕುರಿತು ಅಂದಿನ ಅಮೇರಿಕಾದ New york times ಭಾರತ ಮತ್ತು ಕರ್ನಾಟಕದ ನಕಾಶೆ ಹಾಕಿ ವರದಿ ಮಾಡಿತು.

ಅಂದಿನ ಗಲಭೆಗೆ ಕಾರಣ ಎಂದು ಚನ್ನಪ್ಪ ವಾಲಿ,ತಲ್ಲೂರ ರಾಯನಗೌಡರು, ಚಿನ್ಮಯಸ್ವಾಮಿ ಓಂಕಾರಮಠ,ಶಾಂತಿನಾಥ ಇಂಗಳೆ ಮುಂತಾದವರನ್ನು ಬಂದಿಸಿ ನಾಸಿಕ,ಯರವಾಡಾ,ಹಿಂಡಲಗಾ ಜೈಲಿಗೆ ಕಳುಹಿಸಿತು ಸರಕಾರ.
ಪುರಸಭೆಯಲ್ಲಿ ನಡೆದ ರಾಜಕೀಯ ಸಭೆಯಲ್ಲಿ ಜನರ ಆಕ್ರೋಶ ಗಮನಿಸಿ ಏಕೀಕರಣದ ಪರವಾಗಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರಕಾರಕ್ಕೆ ಈ ರೀತಿಯಾಗಿ ವರದಿ ಮಾಡಿತು.

೧೯೫೪ ರ ಅಂತ್ಯದೊಳಗೆ ಕರ್ನಾಟಕ ರಾಜ್ಯ ರಚನೆಯಾಗಬೇಕು ಎಂದು ವರದಿ ಮಾಡಿದರು ರಾಜ್ಯದ ನಾಯಕರು.

ಅಂದಿನ ಸಭೆಯ ಕೆಲ ಸದಸ್ಯರು ಅದರಗುಂಚಿಗೆ ಬಂದು ಸಭೆಯ ಗೊತ್ತುವಳಿ ಪ್ರತಿ ತೋರಿಸಿ ಉಪವಾಸ ಹಿಂದೆ ತೆಗೆದು ಕೊಳ್ಳಲು ಅದರಗುಂಚಿ ಶಂಕರಗೌಡರಲ್ಲಿ ವಿನಂತಿಸಿದರು.ನಂತರದ ದಿನ ಅಂದರೆ ೨೦/೪/೧೯೫೩ರಂದು ಉಪವಾಸ ನಿಲ್ಲಿಸಿದರು.

ಮತ್ತೆ ನಾಲ್ಕು ತಿಂಗಳ ನಂತರ ಕರ್ನಾಟಕ ರಾಜ್ಯದ ರಚನೆಯ ಕುರಿತು ಸ್ಪಷ್ಟವಾಗಿ ನಿರ್ಧಾರ ತೆಗೆದು ಕೊಳ್ಳುವ ವರೆಗೆ ಸ್ವಂತ ಊರಾದ ಅದರಗುಂಚಿ ಯಲ್ಲಿ ಇರುವುದಿಲ್ಲವೆಂದು ಪ್ರತಿಜ್ಞೆ ಮಾಡಿ ತೀರ್ಥ ಕ್ಷೇತ್ರಗಳಿಗೆ ತೆರಳಿದರು.

ಅಂದು ಅದರಗುಂಚಿ ಶಂಕರಗೌಡರು ೨೩ದಿವಸಗಳ ಕಾಲ ಉಪವಾಸ ಮಾಡದೇ ಇದ್ದರೆ ಏಕೀಕರಣ ಕ್ಕೆ ತೀವ್ರತೆ,ಒಗ್ಗಟ್ಟು,ಹೊರಾಟದ ಪ್ರೇರಣೆ ಕಾಳ್ಗಿಚ್ಚಾಗಿ ಪರಿವರ್ತನೆ ಯಾಗುತ್ತಿರಲಿಲ್ಲ.ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಮತ್ತಷ್ಟು ವಿಳಂಬವಾಗುತ್ತಿತ್ತು.

ಅದರಗುಂಚಿ ಶಂಕರಗೌಡರ ಹೋರಾಟ ಸರಕಾರದ ಗೆಜೆಟಿಯರಗಳಲ್ಲಿ ದಾಖಲಾಗದೇ ಇರುವುದು, ಹೋರಾಟದ ದಾಖಲೀಕರಣ ಮಾಡದೆ ಪಕ್ಷಪಾತ ಮಾಡಿರುವುದಂತೂ ಖಂಡಿತವೆಂದು ಹೇಳಬಹುದು.

ಅದರಗುಂಚಿ ಶಂಕರಗೌಡರು ಉಪವಾಸ ಕುಳಿತಾಗ ರಾಷ್ಟ್ರ ವ್ಯಾಪಿ ಜನ ಬಂದು ಅದರಗುಂಚಿ ಶಂಕರಗೌಡರ ಯೋಗಕ್ಷೇಮ ವಿಚಾರಿಸಿದರು.

ಉಪವಾಸದ ಮೂಲಕ ಕನ್ನಡನಾಡಿನ ಏಕೀಕರಣಕ್ಕೆ ಕಾರಣರಾದ ಅದರಗುಂಚಿ ಶಂಕರಗೌಡರು ಮಾತ್ರ ಕುಂದಗೋಳ ತಾಲೂಕಿನ ಜನರಿಗೂ ಅಪರಿಚತರಾಗಿ ಉಳಿದರು,ಅವರ ಹೆಸರಿನ ಸ್ಮರಣೆಗೆ ಯಾವುದೇ ಸ್ಮಾರಕ ಗಳಿಲ್ಲದೇ ಇರುವುದು ಪಕ್ಷಪಾತದ ನೀತಿಯನ್ನು ಎತ್ತಿ ಹಿಡಿಯುವುದು.

ಲೇಖನ: ಮಹೇಶ ನೀಲಕಂಠ ಚನ್ನಂಗಿ kes
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
೯೭೪೦೩೧೩೮೨೦

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group