ಕವನಗಳು
ನಾನು
ಸುಳ್ಳು ಆರಂಭವಾದದ್ದೇ ನನ್ನ ಹೆಸರಿನಿಂದ,
ಸುಳ್ಳೇ ನನ್ನ ಮನೆ ದೇವರು,
ಸುಳ್ಳೇ ನನ್ನ ನಿಜ ಜೀವನ !
ಸುಳ್ಳು-ಸುಳ್ಳು , ಸುಳ್ಳೇ ನಾನು.
ಸ್ವಾತಂತ್ರ್ಶದ ಆದಿಯಿಂದ ಹುಲುಸಾಗಿ ಬೆಳೆದದ್ದು ಸ್ವೇಚ್ಛೆಯಾಗಿ ಮೆರೆದದ್ದು
ಅವಕಾಶ ಇತ್ತವರು ನೀವು- ನಾನು ಅಲ್ಲವೇ ?!
ಸತ್ಶವನ್ನು ನುಂಗಿದ್ದು ಸುಳ್ಳು
ನಿರ್ಭೀತಿಯ ನುಂಗಿದ್ದು ಭೀತಿ.
ಫಲಿತಾಂಶ ಊಚವೋ ನೀಚವೋ,
ಅನುಭವಿಸುವವರೇ ಪರಮ ಸುಖಿಗಳು !
ಹುಸಿ ಹಿರಿಮೆ-ಗರಿಮೆ,
ಹುಸಿ ಅಹಂ-ಅಂತಸ್ತುಗಳ ಪ್ರಭಾತ್ ಪೇರಿ
ಅಗೋ ಅಲ್ಲಿ ಆಧಿಪತ್ಶದ ಬೃಹತ್ ಸವಾರಿ
ಮಾಂದ್ಶ ಕಂಗಳು ಕುಕ್ಕುವದ್ಶಾತಕ್ಕೆ ?
ವಿರಮಿಸಲು ಅಣಕಿಸುತ್ತೆ,
ಬಿಡುಗಡೆ ಯಾವತ್ತೋ ಸಭ್ಶತೆಯ ಸೋಗಿನಿಂದ.
ಬಿಡಿ, ನಾನು ನಾನೇ ನಾನಾಗಲು.
ಹುಸಿಗೆ ನುಸಿ ಮುಟ್ಟಿಸಲು.!!
‘ಅಮರ್ ಜಾ’ .
ಅಮರೇಗೌಡ ಪಾಟೀಲ ಜಾಲಿಹಾಳ
ನಿವೃತ್ತ ಬ್ಶಾಂಕ್ ವ್ಶವಸ್ಥಾಪಕರು, ಬು.ಬ.ನಗರ, ಕುಷ್ಟಗಿ.
ಅಣ್ಣ
ಅಣ್ಣ ಅಂದರೆ ಬರಿ ಅಣ್ಣನಲ್ಲ,
ಅವನು ಅನುಬಂಧಗಳಿಗೆ ಬಣ್ಣ
ಪ್ರೀತಿಸುವ ಮನಗಳಿಗೆ ಚಿನ್ನ
ಜವಾಬ್ದಾರಿಗಳ ಮೂಟೆ ಹೊತ್ತ ರನ್ನ
ಅಣ್ಣ ಅಂದರೆ ಬರಿ ಅಣ್ಣನಲ್ಲ,
ತಮ್ಮನ ಇಷ್ಟಾರ್ಥಗಳ ಈಡೇರಿಸುವ ಜೀವ
ಅಪ್ಪನಂತೆ ಹೆಗಲೇರಿಸಿ ಜಗವ ತೋರಿಸುವ ಜೀವ
ಮನೆಗೆ ಕಷ್ಟಬರದಂತೆ ದುಡಿದು ಸಾಕುವ ದೇವ
ಅಣ್ಣ ಅಂದರೆ ಬರಿ ಅಣ್ಣನಲ್ಲ,
ಕುಟುಂಬವೆಂಬ ರಥ ಎಳೆಯುವ ಸಾರಥಿ
ತನ್ನ ಬಾಳ ಸವೆಸಿ ಬೆಳಕ ನೀಡುವ ಪಣತಿ
ಎಷ್ಟು ಹೊಗಳಿದರು ಕಡಿಮೆಯಾಗದು ಸ್ಪೂರ್ತಿ
ಅಣ್ಣ ಎಂದರೆ ಬರಿ ಒಡಹುಟ್ಟಿದವನಲ್ಲ,
ಒಂಟಿತನದಲ್ಲೇನಿದೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದವನು
ನನ್ನ ಬಾಳಿಗೆ ದಾರಿದೀಪವಾದವನು
ಎಲ್ಲರಿಗೂ ಇರಬೇಕು ಇಂಥ ಅಣ್ಣ
ಇಂಥ ಅಣ್ಣನನ್ನು ಪಡೆದ ನಾ ಧನ್ಯ
ಸರ್ವರಿಗೂ ಗರ್ವದಿಂದ ಹೇಳುವೆ ಇವ ನನ್ನ ಅಣ್ಣ
ಎಂದು ಹೇಳುತ್ತಾ ಅರ್ಪಿಸುವೆ ಈ ಕವನ.
ಮಂಜುನಾಥ ಸಿಂಗನ್ನವರ
ಪ್ರ.ದ.ಸ (ಸ.ಆ.ಕೇಂದ್ರ ಯರಗಟ್ಟಿ)
ಜಿ.ಬೆಳಗಾವಿ.