Homeಕವನಕವನಗಳು

ಕವನಗಳು

 ಭಾವ ಸ್ಪಶ೯
🍁🍁🍁🍁🍁
ಬಸಿರಿನಲಿ ಅಮ್ಮನ ಪ್ರೀತಿಭಾವ ಸ್ಪಶ೯
ಕರುಳ ಕುಡಿ ಕಂಡಾಗ ಜಗಗೆದ್ದ ಹಷ೯!
ಮಗು ಬೆಳದಂತೆ ಬಿದಿಗೆ ಚಂದ್ರ ಚೆಲವು
ತಾಯಿಗೆ ಮಗುವೇ ಖುಷಿ ಪ್ರಪಂಚವು .
ಸೃಷ್ಟಿಯ ಮಾಯಾಗಾರ 
🌹🌹🌹🌹🌹🌹🌹
ಆಕಾರ ಚಿಕ್ಕದು ನೋಡು ಗುಲಗಂಜಿ
ಅಳಕದೆ ಬಾಳುವುದು ಯಾರಿಗದು ಅಂಜಿ
ಬೀಗುವುದು ಮನಸಲಿ ಒಳ ಒಳಗೆ
ಬಂಗಾರ ತೂಗುವ ತಾಕತ್ತು ತನ್ನೊಳಗೆ
ನಮ್ಮೂರಲಿ ನಾ ನಿನ್ನ ನೋಡಿರುವೆ
ಅಕ್ಕಸಾಲಿಗ ಭೋಜಪ್ಪನ ತಕ್ಕಡಿಯೊಳಗೆ
ಸುಂದರ ಕೆಂಪು ಬಿಳಿ ಕಪ್ಪು ಮೈಬಣ್ಣ
ಚಿಕ್ಕಗಾತ್ರದಿ ಇರುವದೊಂದೇ ಕಣ್ಣ
ಚೆಲುವಿನ ಸೃಷ್ಟಿ ಸೃಷ್ಟಿಸಿದ ಕಲೆಗಾರ
ರಂಗು ರುಚಿ ಆಕಾರವಿಟ್ಟ ಮಾಯಾಗಾರ
ಬೇಕಿಲ್ಲಾ ಮೌಲ್ಯಕ್ಕೆ ಆಕಾರ ಬಣ್ಣಗಳ ಅಂದ
ಸಾಥ೯ಕ ಬಾಳಿದರೆ ಜೀವನವೇ ಚೆಂದ
ಓ ಮನುಜ ಕಾಣದಿರು ಯಾರನು ಹೀನವಾಗಿ
ಎಲ್ಲರಲ್ಲೊಂದು ಪ್ರತಿಭೆ ಶಕ್ತಿ ಅರಿ ಮೌನವಾಗಿ.
       ರತ್ನಾ ಎಂ ಅಂಗಡಿ
              ಹುಬ್ಬಳ್ಳಿ
RELATED ARTICLES

Most Popular

error: Content is protected !!
Join WhatsApp Group