ನಾನು ನಾನಲ್ಲ
ಗುರು ಇರದೇ ಗುರಿ ತಲುಪುವ
ಗುರೂರು ಎನಗಿಲ್ಲ
ಗುರುತಿರದ ದಾರಿಯಲಿ
ಗುರಿತಪ್ಪುವ ಆಸೆ ನನಗಿಲ್ಲ
ಸತ್ಯವೇ ಹೇಳುವೆನು
ನಾನು ನಾನಲ್ಲ…
ಹೊತ್ತು ಹೆತ್ತಳೆನಗೆ
ನನ್ನ ಪ್ರೀತಿಯ ಅಮ್ಮ
ಗುರುತಿಗೊಂದ್ ಹೆಸರು
ಉಸುರಿದರು ಕಿವಿಯೊಳಗೆ
ನನಗೆ ನನ್ನ ಅತ್ತೆಮ್ಮಾ
ಹಸಿದಾಗ ತುತ್ತಿಟ್ಟು
ಅಕ್ಕರೆಯ ಮುತ್ತಿಟ್ಟು
ನನಗಾಗಿ ತಮ್ಮೆಲ್ಲ
ಕನಸುಗಳ ಹೂತಿಟ್ಟು
ದುಷ್ಟರ ಕೈಯಿಂದ
ಪಾರಾಗುವ ಮತಿ ಕೊಟ್ಟು
ಏನೂ ಅರಿಯದ ನನಗೆ
ಅರಿವಿನ ಅರಿವೆಯನು
ತೊಡಿಸಿದವರು ಬೇರೆ
ಗುರಿ ಮುಟ್ಟಲು ನನ್ನೊಳಗೆ
ಅಕ್ಷರದ ಗರಿಯಿಟ್ಟವರು ಬೇರೆ
ಪ್ರತಿ ಹೆಜ್ಜೆಗೂ, ಪ್ರತಿದಿನವೂ
ತರತರಹದ ಪಾಠ
ಕಲಿಸಿದವರೆಲ್ಲರೂ ಗುರು ಎನಗೆ
ಗುರು ಇರದೇ ಈ ಬಾಳು
ನಡೆಯುವುದಾದರೂ ಹೇಗೆ?
✍️ ಕಮಲಾಕ್ಷಿ ಕೌಜಲಗಿ
(ಸೂರ್ಯ ಕಮಲ)
*ಸಮರಸದ ಜ್ಯೋತಿ ಬಸವ*
ಶರಣು ಬಂದೆನು ತಂದೆ ಬಸವ
ಕರುಣದಿಂದಲಿ ಕಾಯೊ ನನ್ನ//ಪ//
ಅಂಧಶ್ರದ್ಧೆಯ ಅಳಿಸಿದೆ ನೀ
ಮಂದಮತಿಗಳ ಮಂಥಿಸಿದೆ
ಕುಂದು ಕೊರತೆ ನೀಗಿಸಿದೆ
ಎಲ್ಲರೊಂದಾಗಿಸಿ ನಲಿದೆ ಬಸವ//
ಜಾತಿಯತೆಯ ಅಳಿಸಿದೆ ನೀನು
ಜನಜಾಗೃತಿಯ ಮೂಡಿಸಿದೆ
ಜನ ಮನಗಳ ಮಂಥಿಸಿದೆ
ಜನಹಿತಕ್ಕಾಗಿ ಜೀವ ತೇದೆ ಬಸವ//
ಅನುಭಾವ ಅರುಹಿದೆ ನೀನು
ಅನನು ಭಾವ ಅಳಿಸಿದೆ
ಅಂಧಶ್ರದ್ಧೆಗಳ ಆಳಿಸಿದೆ
ಸರಳತೆಯ ಮೆರೆದೆ ಬಸವ//
ಲಿಂಗ ಸಂಗಿ ಯಾದೆ ನೀನು
ಆತ್ಮ ದೊಳಲಿಂಗವಾ ಇರಿಸಿದೆ
ಲಿಂಗ ಆತ್ಮ ಒಂದೆಂದು ಅರುಹಿದೆ
ಸಂಗಯ್ಯ ನಲುಮೆಯ ಸಂತ ನೀ ಬಸವ//
ನಡೆ-ನುಡಿ ಒಂದಾಗಿ ಬದುಕಿದೆ ನೀನು
ಸತ್ಯಸಂಧತೆ ತಿಳಿಸಿದೆ
ಮಿತ್ಯ ಅಳಿಸಲು ಶ್ರಮಿಸಿದೆ
ನಿತ್ಯ ಹೋರಾಟ ಮಾಡಿದೆ ಬಸವ//
ವಚನಾಮೃತ ಉಣಿಸಿದೆ ನೀನು
ವಚನಕಾರರ ಹುಟ್ಟುಹಾಕಿದೆ
ಎಲ್ಲರ ಒಟ್ಟುಗೂಡಿಸಿದೆ
ಅನುಭವ ಮಂಟಪದ ಅಧಿಪತಿ ಆದೆ ಬಸವ//
ಕಾಯಕದ ಮಹಿಮೆ ಅರುಹಿದೆ ನೀನು
ಮಾಯದ ಮದವ ಮಣಿಸಿದೆ
ಆಯಕೆ ಮಿತಿಯ ಹಾಕಿದೆ
ಕಾಯಕ ನಿಷ್ಠನಾಗಿ ಬದುಕಿದೆ ಬಸವ//
ಚಿಂತಕರ ಚಾವಡಿ ಕಟ್ಟಿದೆ ನೀನು
ಮಂಥನದ ಹಾದಿ ತಿಳಿಸಿದೆ
ಕಂದಕಗಳ ಕೆಡಹಿದೆ
ಸಮತೆಯ ಸಾರಿದೆ ಜಗದಿ ಬಸವ//
ಸಮಾಜದ ಕಳಂಕಗಳ ಕಳೆದೆ ನೀನು//
ಸಮಾಜಕ್ಕಾಗಿ ಬದುಕಿದೆ
ಅಸಹಜವಾಗಿ ರಾರಾಜಿಸಿದೆ
ಅಜ್ಞಾನ ಅಳಿಸಲು ಜ್ಞಾನದ ಜ್ಯೋತಿ ಬೆಳಗಿಸಿದ ಬಸವ//
ಹೋರಾಟ ಮಾಡುತ್ತಾ ಹೊರಟೆ ಬಸವ ನೀನು
ಧರ್ಮದ ದಾರಿ ಹಿಡಿದೆ
ಸಮರಸ ಕ್ಕಾಗಿ ಸವೆದೆ
ಕೂಡಲಸಂಗಯ್ಯ ನಲ್ಲಿ ಐಕ್ಯನಾದೆ// ಬಸವ
*ಅನ್ನಪೂರ್ಣ ಹಿರೇಮಠ*
ನೀತಿ ಬೋಧ
ಜನಾನುರಾಗಿ ಆಗಿರು ಮನುಜ
ಜನರು ನಿನ್ನನು ಒಪ್ಪುವರಯ್ಯಾ
ಜಂಬದ ಕೋಳಿ ಆಗದಿರು ಮನುಜ
ಜನರು ನಿನ್ನನ್ನು ತೆಗಳುವರಯ್ಯ
ಜೋತಿಯು ಬೆಳಗಲು
ಎಣ್ಣೆಯು ಬೇಕು
ಎಣ್ಣೆ ತಿರುವತನಕ
ಪಣತೆ ಉರಿಯುವದಯ್ಯಾ
ಮನುಷ್ಯನ ಜೀವನ
ಹಾಗೆನಯ್ಯಾ.
ಜಗದಲಿ ಕಾಲು ಎಳೆಯುವರಯ್ಯಾ
ಮುಂದೆ ನೋಡಿ ಹೆಜ್ಜೆ
ನೀ ಇಡು ಮನುಜ.
ಜಾತಿಯ ಭೇದ ಮಾಡದಿರು ಮನುಜ
ಮಾನವನಾಗಿ ಬದುಕಲು
ಕಲಿಯಲೇಬೇಕು ಮನುಜ.
ಜೀವದ ಹಂಗು ತೊರೆಯಲೇಬೇಕು
ಸ್ವಾಭಿಮಾನಕ್ಕೆ ಕುತ್ತು
ಬಂದರೆ ಮನುಜ.
ಜ್ಞಾನದ ಭಂಢಾರ
ತುಂಬಿಕೊಳ್ಳಬೇಕು
ಜನರಲಿ ನಾವು
ಬೆರೆತಿರಬೇಕು.
ನೀತಿಪಾಠ ಕಲಿಯಲೇಬೇಕು
ನೀರಿಗಿಂತ ತಿಳಿಯಾಗಿ
ಬದುಕಬೇಕು
ಜಟಕಾಬಂಡಿ ಈ ಬದುಕು
ಇದನ್ನು ನಾವು ಅರಿತಿರಬೇಕು.
ಡಾ.ಎಚ್.ಆರ್.ಜಗದಾರ.