ಕವನ: ಅನ್ನದಾತ ಅಯ್ಯೋ ಪಾಪ!

Must Read

ಹೊಲವ ಉಳುವ ರೈತ ಪಾಪ

ಹಲುಬುವಂತೆ ಆಗಿದೆ !!
ತನ್ನ ಕುಣಿಯ ತಾನೇ ತೋಡಿ
ಕೂರೋ ಹಾಗೆ ಮಾಡಿದೆ!!

ಎಲ್ಲ ಜನರ ಹೊಟ್ಟೆ ತುಂಬ್ಸೋ
ಅನ್ನದಾತ ಪ್ರಭು ಇಂವ
ಇವನ ಮನೆಯೆ ಹೊಟ್ಟೆ-ಬಟ್ಟೆ
ಕೊರತೆಯಿಂದ ಕೊರಗಿದೆ!!

ಮಂಜೇ ಇರಲಿ,ಮಳೆಯೆ ಬರಲಿ
ಸಂಜೆವರೆಗೂ ದುಡಿಯುವ
ಗುಟುಕು ಗಂಜಿಗಾಗಿ ಅಂಜಿ
ಜೀವಮಾನ ಸವೆಸುವ!!

ಬಿಸಿಲ ಧಗೆಯ ಬೆವರ ಜಳಕ
ಶ್ರಮಕೆ ಇಲ್ಲ ಸಾರ್ಥಕ
ಶ್ರಮವ ಪಡದೆ ಬೇರೆ ಜನರು
ಮೆರೆಯುತಿಹರು ಸ್ವಾರ್ಥವ!!

ದೇಶದ ಬೆನ್ನೆಲುಬು ಎಂದು
ನುಡಿಯುತಿಹರೆ ಸುಮ್ಮನೆ
ಹೊಗಳಿಕೆಯ ಭಾಷಣವ ಬಿಗಿದು
ಕಟ್ಟಿ ಮಾತಿನರಮನೆ!!

ಹಿಡಿದು ಎತ್ತುವ ಕೈಗಳಿರದೆ
ಕಂಗಾಲಾಗಿ ಕುಳಿತಿದೆ!!
ಮುಗುದ ಮನದ ಶ್ರಮಜೀವಿ
ದಿನವು ಜೀವ ಕೊಡುತಿವೆ!!

✍️ ಕಮಲಾಕ್ಷಿ ಕೌಜಲಗಿ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group