ಇದ್ದು ಬಿಡು
ನೀನು ಸಾಕು
ನೀನೊಬ್ಬಳೇ ಸಾಕು
ಎತ್ತರದ ಯಶ
ವಿಂಧ್ಯ ಪರ್ವತ ಏರಲು
ನೀನಿದ್ದರೆ ಪಕ್ಕ
ಸ್ವರ್ಗ ಸುಖ
ನೀನಿರದ ವಿರಹ
ನರಕ ಯಾತನೆ
ನಿನ್ನ ಜೊತೆಗೆ ಪಯಣ
ಹೂವು ಹಸಿರು ಕಾನನ
ನೀನಿರದ ಹೆಜ್ಜೆ
ಬರಡು ಮರ ಭೂಮಿ
ನಿನ್ನ ಸ್ನೇಹ ಪ್ರೀತಿ
ಒಲವು ಬಾಳ ರೀತಿ
ನಿನ್ನ ನೆನಪಿನ ಕ್ಷಣ
ನನ್ನ ಜೀವದ ಸ್ಪೂರ್ತಿ
ಇದ್ದು ಬಿಡು ಹೀಗೆ
ನನ್ನಲ್ಲಿ ನನ್ನೊಳಗೆ
ಸದ್ದಿಲ್ಲದೆ ಮೌನದಲಿ
ಕವನ ಕಾವ್ಯ ಭಾವವಾಗಿ
______________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ