ಕವನ: ಎಳ್ಳಮವಾಸೆ ಸಡಗರ

Must Read

ಎಳ್ಳಮವಾಸೆ ಸಡಗರ

ಹಸಿರುಟ್ಟ ಭೂತಾಯಿಯೇ ಹರಸು ನಮ್ಮನು
ವರುಷ ವರುಷವು ಬಿಡದೆ ಆಚರಿಪೆವು ನಿನ್ನನು
ಚರಗ ಚೆಲ್ಲುತ ಪೂಜಿಸುವ ಎಳ್ಳಮವಾಸೆಯು
ಆಹಾ! ಆಹಾ! ಎಂತಹ ಸಡಗರ ಸಂಭ್ರಮವು.

ಹಗಲು ರಾತ್ರಿ ಎನ್ನದೆ ವಾರಪೂರ್ತಿ ಸಿದ್ದತೆಯು
ಕಡಬು ಕರ್ಚಿಕಾಯಿ ಚಕ್ಲಿ ಸುರಳಿ ಹೊಳಿಗೆಯು
ತರತರದ ಚಟ್ನಿಕಾರ ಹಪ್ಪಳಸಂಡಿಗೆ ತುಪ್ಪವು
ಬಗೆಬಗೆಯ ರೊಟ್ಟಿ ಚಪಾತಿಯ ಹಬ್ಬದೂಟವು

ಚಕ್ಕಡಿ ಗಾಡಿ ರೀಕ್ಷಾ ಹಲವು ರೀತಿ ವಾಹನಗಳು
ಎತ್ತುಗಳನ್ನು ಅಂದಚಂದಗೊಳಿಸು ಆ ಪರಿವು
ಹಸಿರನು ಮೈವೆತ್ತ ಜೋಳ ಗೋಧಿ ಕಡಲೆಯು
ಕಣ್ಣು ಹಾಯ್ಸಿದಷ್ಟು ಇಂಪುತೋರ್ವ ಬೆಳೆಯು.

ಬಣ್ಣಬಣ್ಣದುಡುಗೆಯ ತೊಟ್ಟು ಸಂಭ್ರಮಿಸುತ!
ಹೊಲದಲ್ಲಿ ಹುಲ್ಲುಲ್ಗೊ ಚಲಾಮ್ರಗೋ ಎನ್ನುತ!
ಮಿಸಲಿಟ್ಟ ನೈವೆದ್ಯವ ಭೂತಾಯಿಗೆ ಅರ್ಪಿಸುತ!
ಕಾಯು ತಾಯಿ ರೈತನ ಬೆನ್ನುಬಿಡದೆ ಅನವರತ!

ಹಾಲುಗಾಳ ಹೊತ್ತಂತ ಧರೆಯ ಈ ಸೊಬಗು
ಸುಲಿಗಾಯಿಯ ಸುಲಿಯುತ ತಿನ್ನುವ ಮೆರುಗು
ಎಲ್ಲರೊಂದಾಗಿ ಸವಿಯುವ ಸುಖಭೋಜನವು
ಆನಂದ ಸುಖ ಸಂತಸಕೆ ಇದುವೇ ತೋರಣವು.

ಅಕಾಶಿಶ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group