- Advertisement -
ಕನಸುಗಳು ಗುರಿಯಾಗಿವೆ
ಮೆಲ್ಲನೆ ಹೃದಯ ಸ್ಪರ್ಶಿಸಿ,
ಕಣ್ಣಿಂದ ಗಮನಿಸಿ,
ಮನದಲ್ಲಿ ಹುಟ್ಟಿ,
ಈ ಕನಸುಗಳು ಗುರಿಯಾಗಿ ನಿಂತಿವೆ.
ಸತತ ಪ್ರಯತ್ನ,
ಆತ್ಮ ಬಲ ದೊಂದಿಗೆ
ಜ್ಞಾನದ ಬೆಳಕು,
ಮನದ ಅಂಗಳದ ದೀಪವಾಗಿದೆ.
- Advertisement -
ಈ ಗುರಿ ಬೆಂಕಿಯಂತೆ ಉಜ್ವಲಿಸಿ,
ಗುರಿ ತಲುಪಿದ ಮೇಲೆ,
ದೀಪದಂತೆ ಈ ಜಗತ್ತಿಗೆ ಬೆಳಕಾಗಲಿ.
ಇದು ನನ್ನ ಕನಸು,
ಇದು ನನ್ನ ಗುರಿಯಾಗಿದೆ.
ಕುಮಾರಿ ಸೃಷ್ಟಿ ಅಶೋಕ ಎಲಿಗಾರ
ಗುರಿಯು ಕನಸಸಾಗಬಾರದು, ಕಂಡ ಕನಸುಗುರಿಯಾಗಬೇಕು ಕಂದಾ 💐