Homeಕವನಕವನ: ಕನ್ನಡದ ನವಪೀಳಿಗೆ ಏಳಿ, ಎದ್ದೇಳಿ

ಕವನ: ಕನ್ನಡದ ನವಪೀಳಿಗೆ ಏಳಿ, ಎದ್ದೇಳಿ

ನವತರುಣ ತರುಣಿಯರೇ, ಏಳಿ ಎದ್ದೇಳಿ

ಕನ್ನಡಕಾಗಿ ಹೋರಾಡಿ ಕನ್ನಡ ಭಾಷೆ ಮಾತಾಡಿ ಕನ್ನಡದಲೇ ಉಸಿರಾಡಿ ಕನ್ನಡ ತಾಯಿಗೆ ಪ್ರಾಣ ನೀಡಿರಿ
ಜಗಜ್ಯೋತಿ ಬಸವಣ್ಣ ವಿಶ್ವಗುರು,ಅಲ್ಲಮಪ್ರಭು ಅಕ್ಕಮಹಾದೇವಿ, ಗುಡ್ಡಾಪುರದ ದಾನಮ್ಮ ಇತಿಹಾಸದ ಮಹಾಸಾಧಕರಂತಾಗಿರಿ.

ಪಂಪ ರನ್ನ ರಾಘವಾಂಕ ಹರಿಹರ ಕುಮಾರವ್ಯಾಸರು ಕನ್ನಡದ ಕವಿ ರತ್ನಗಳoತಾಗಿರಿ

ಕುವೆಂಪು ಬೇಂದ್ರೆ ವಿ. ಕೃ ಗೋಕಾಕರು ಮಾಸ್ತಿ ಕಾರಂತರು ಕನ್ನಡದ ಸರಸ್ವತಿ ಪುತ್ರ ಇವರು ಇವರoತಾಗಿರಿ ಇತಿಹಾಸದಿ ಪುಟ ಪುಟದಲ್ಲಿ ಅಜರಾಮರಾಗಿರಿ.

ಗಾನಕೋಗಿಲೆ ಬಾಲಸುಬ್ರಹ್ಮಣ್ಯಂ ಡಾ ||ರಾಜಕುಮಾರ ಎಸ್ ಜಾನಕಿ ಎಲ್ಆರ್ ಈಶ್ವರಿ ಸುಬ್ಬಲಕ್ಷ್ಮೀ ಇವರಂತೆ ಕನ್ನಡ ಗಾನಕೋಗಿಲೆಗಳಾಗಿರಿ.

ಏಳಿ ಎದ್ದೇಳಿ ಕನ್ನಡಕಾಗಿ ಹೋರಾಡಿ
ಕನ್ನಡ ನಾಡಲಿ ತುಂಬಿದೆ ಸಮೃದ್ಧಿ ಚಿಂತೆ ಏತಕೆ?ಓ ಕನ್ನಡ ಪೀಳಿಗೆ ಕನ್ನಡಕಾಗಿ ದುಡಿದು ಹೋರಾಡು. ಕನ್ನಡತನವ ಕಾಪಾಡು ಕನ್ನಡವೇ ನಮ್ಮಮ್ಮ ಕನ್ನಡವೇ ನನ್ನ ತಾಯಿ ಕನ್ನಡಕ್ಕಾಗಿ ತನು ಮನ ಧನ ಸಮರ್ಪಿಸು ಕನ್ನಡ ನಾಡು ತೊರೆದು ಹೋಗದಿರು.

ಕನ್ನಡ ಬಾವುಟ ಮೇಲೆತ್ತು
ಕನ್ನಡ ಕನ್ನಡ ಹಾ ಸವಿಗನ್ನಡ
ಸವಿಗನ್ನಡ ಕನ್ನಡ ಸಿಹಿ ಕನ್ನಡ ಉಸಿರು ಉಸಿರಲ್ಲಿ ಬೆರೆಯಲಿ… ಕರುನಾಡಲ್ಲಿ ನಮ್ಮ ಜನ್ಮ ಪುನರ್ಜನ್ಮವಾಗಲಿ
ಸಾರ್ಥಕವಾಗಲಿ.

ಸಾಲುಮರದ ತಿಮ್ಮಕ್ಕನಂತೆ ನಿಸ್ವಾರ್ಥ ಸೇವೆ ಮಾಡಿರಿ ಹಸಿರು ಬೆಳೆದು ಉಸಿರಿನೊಳಗೆ ಉಸಿರಾಗಿರು ನಿಸರ್ಗವಾ ಪ್ರೀತಿಸಿ ಹಸಿರು ಸೌಂದರ್ಯವನ್ನು ಬೆಳೆಸಿರಿ ನೋಡುಗರ ಕಣ್ಣಿಗೆ ತಂಪುಗಳಾಗಿರಿ ಮನಕ್ಕೆ ಆನಂದ ಸಮೃದ್ಧಿಯನ್ನು ಪಡೆಯಿರಿ
ಕನ್ನಡನಾಡಿಗೊoದು ಅಖಿಲಾಂಡಕೋಟಿ ಸಂಪತ್ತಿನ ಸಮೃದ್ಧಿಯ ತನ್ನಿರಿ.

ಸಿದ್ದಗಂಗಾ ಶಿವಕುಮಾರ್ ಸ್ವಾಮೀಜಿ ವಿದ್ಯಾದಾನದ ದಾಸೋಹದ ಹರಿಕಾರರoತೆ ನೀವಾಗಿರಿ
ವಿಜಯಪುರದ ಶಾಂತಿದೂತ ಸಿದ್ದೇಶ್ವರ ಸ್ವಾಮಿಜಿಯoತೆ, ಗಾನಗಂಧರ್ವ ಪುಟ್ಟರಾಜರoತೆ ಮಾದರಿ ನೀವಾಗಿರಿ
ಕನ್ನಡನಾಡಿನ ಹೆಮ್ಮೆಯ ಮಕ್ಕಳಾಗಿರಿ ಎಂದೂ ಮರೆಯದ ಕನ್ನಡಿಗರಾಗಿರಿ…

ನ್ಯಾಯಾoಗ ಕಾರ್ಯಾಂಗ ರಾಜ್ಯಾoಗ, ಧಾರ್ಮಿಕ ನಾನಾ ಕ್ಷೇತ್ರದಲ್ಲಿ ರಾರಾಜಿಸಿರಿ ಒಗ್ಗಟ್ಟಾಗಿ ಕನ್ನಡಕ್ಕಾಗಿ ಹೋರಾಡಿರಿ ಎಂದೂ ಮರೆಯದ ಸಾಧಕರಾಗಿರಿ.
ಏಳಿ ಎದ್ದೇಳಿ ನವಪೀಳಿಗೆಗಳೇ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡಕ್ಕಾಗಿ ಹೋರಾಡಿ.

ಪಾರ್ವತಿ ದೇವಿ(ಉಮಾ ). ಎಂ. ತುಪ್ಪದ
ಬೆಳಗಾವಿ

RELATED ARTICLES

Most Popular

error: Content is protected !!
Join WhatsApp Group