ನಮ್ಮಲ್ಲಿವೆ ಕಣ್ದುಂಬುವ ತಾಣಗಳು
ನೋಡುವ ಕಣ್ಗಳಿಗೆ ಹೃದಯವಂತಿಕೆಬೇಕು !
ಉತ್ತರದ ಚೆಲ್ವರಾಶಿಯ ಸವಿಯೋಣ ಬನ್ನಿ
ಚೆಲುವನರಸಿ
ಕವಿ-ಪುಂಗವರು, ದಾಸ-ಶರಣರು
ಉದಿಸಿದ ಮಹಾ ಮಹಿಮೆಯ ನಾಡು
ಮಾರ್ಗಕಾರರು ತೋರಿದ ನೆಲೆವೀಡು
ದೇವನಾಂಪ್ರಿಯಂಗೆ ಪ್ರಿಯವಾದ ನಾಡು
ಆರುಂಕುಶವಿಟ್ಟೊಡಂ ನೆನೆಯುದೆನ್ನ ಮನಂ ಎಂದ
ಕವಿವರ್ಯರು, ದಾಸ-ಶರಣರು ಹರಿಸಿದ ಹೆಮ್ಮೆಯ ನಾಡು.
ವರ್ಷಧಾರೆಗೆ ಮಲೆಗಳ ಸೃಷ್ಟಿ
ಶ್ರಾವಣ ಮಾಸದ ಸೊಬಗಿನ ಪುಷ್ಟಿ
ಸೊಂಡೂರು ಸಿರಿ-ಐಸಿರಿ ಸವಿಯೋಣ ಬನ್ನಿ
ಐದು ಸುತ್ತಿನ ಕೋಟೆಯು
ಐತಿಹ್ಶ ಹೊತ್ತ ಜಲದುರ್ಗ
ಕೃಷ್ಣೆ ತೋಳ್ಬಂಧಿಯ ಬೃಹತ್ ದ್ವೀಪವದು.
ಗುಹಾಂತರ ಬಸದಿ ಮಂದಿರ
ಅಗಸ್ತ್ಶ ತೀರ್ಥ, ವಾತಾಪಿ ಇಲ್ವಲರು
ಚೆಲ್ವ ಚಾಲುಕ್ಶರ ನಾಡು ಮಿಂಚಿದ್ದು ಭಾರತಕ್ಕೆಲ್ಲ
ಬಾದಾಮಿ ಶ್ರೀಬನಶಂಕರಿ ಪ್ರಭಾವಳಿ
ಮರಳು ಬೆಟ್ಟದ ಸೋಜಿಗದ ಸರಪಳಿ
ಆಚೆ ಧುಮ್ಮಿಕ್ಕುವ ಕಪಿಲತೀರ್ಥ, ನಯನಮನೋಹರ
ಐಹೊಳೆ ಪಟ್ಟದಕಲ್ಲು ಮಹಾಕೂಟ
ಶಿಲ್ಪಾಚಾರರ ತೊಟ್ಟಿಲು ತೋಟ
ಮಧ್ಶವಿದೆ ಸಿದ್ಧನಕೊಳ್ಳ, ಸಿದ್ಧರಮಠ ನೋಡಲ್ಲಿ
ರಾಮಾಯಣದ ಕಿಷ್ಕಿಂಧೆ
ವಿಜಯನಗರ ಬೇರೂಡಿ ಹಾಲುಂಡ, ಆನೆಗುಂದಿ
ವಾಲಿ ಸುಗ್ರೀವರ ಗುಹೆಗಳು, ಇವೆ ಅಲ್ಲೆಲ್ಲ
ಆಂಜನ ಪರ್ವತ
ಪುಣ್ಶಕ್ಷೇತ್ರ ಪಂಪಾ ಸರೋವರವಿರುವದು
ಕುಮಾರರಾಮನ ಕುಮ್ಮಟದುರ್ಗ ಎಲ್ಲ ನೋಡಲ್ಲಿ
ಹಕ್ಕ-ಬುಕ್ಕ ವಿಜಯನಗರದೌನ್ನತ್ಶ
ಜಗದ್ವಿಖ್ಶಾತ ಕೃಷ್ಣದೇವರಾಯರ
ಉತ್ತುಂಗ ಶಿಖರ ವೈಭವದ ಹಂಪಿ ಆಗಸಕೆ
ದೇವಾಲಯಗಳ ಚಕ್ರವರ್ತಿ
ಸೌಂದರ್ಯದೊಳು ಪ್ರಸಿದ್ಧಿ
ಮಹದೇವ ದೇವಾಲಯ ಇಟಗಿ
ನವಿಲುತೀರ್ಥ-ಮಲಪಹಾರಿ ಪಹರೆಯೊಳು
ಏಳುಕೊಳ್ಳದ ಎಲ್ಲಮ್ಮ
ತುಂಗಾವಿಹಾರಿ ಸುಮ್ಮನೇನಮ್ಮ
ಏಳುಗುಡ್ಡದ ಹುಲಿಗೆಮ್ಮ ಉದೋ ಉದೋ.
ತುಂಗಭದ್ರ ಆಣೆಯು ಸಂಪದ ಸಾಗರ
ರಾಯಲ್ ಬಳ್ಳಾರಿ ದೋಆಬ್ ಮೈದಾನ
ಮಂತ್ರಾಲಯ ನವ ವೃಂದಾವನ, ನೋಡಲ್ಲಿ
ಕೃಷ್ಣಾ ಮೇಲ್ಥಂಡೆ ಕಟ್ಟುಗಳೊಟ್ಟಿದ
ಜೀವ ಜಲಾಶಯಗಳಷ್ಟೂ
ಶರಣರೈಕ್ಶ ಸಂಗಮಸ್ಥಳ ಭಕ್ತಿಯ ಪರಕಾಷ್ಠೆ
ಮಲೆ-ಬಯಲಿನ ಕೊಂಡಿ
ಕವಿಪುಂಗವರು ತಣಿಯುವ ಧಾಮವು
ಹೆಮ್ಮೆಯ ಸಾಂಸ್ಕೃತಿಕ ಧಾರವಾಡ
ಎಪ್ಪತ್ತುಗಿರಿ ಸುತ್ತುವದ್ಶಾಕೆ
ಉತ್ತರ ಸೀಮೆಯ ಹಸಿರು ನೆತ್ತಿ
ಕಪ್ಪತ್ತಗಿರಿ ನೋಡಲು ಬೇಕೊಮ್ಮೆ
ಗೋಕರ್ಣ ಕಿನಾರೆ ಓಂಕಾರ
ಕುಮಟಿ-ಹೊನ್ನಾವರ
ಅಂಬರಕ್ಕೇರಿದ ಹೆಮ್ಮರವು
ಕರಾವಳಿ-ಕಡಲು ಕಾರವಾರ
ನಲಿಯೋಣ ಬನ್ನಿ ಸುಂದರ ತೀರ
ಶಹ್ಶಾದ್ರಿ ಶ್ರೇಣಿ ಶಿರಿಸಿ-ದಂಡಕಾರಣ್ಶ
ಕಂನಾಡಿನ ಕಿರೀಟ ಪ್ರಾಯವೆನ್ನಿರಿ
ಪಿಸುಗುಡುವ ಬಿದರಿ, ಬೀದರ.
ಕಲಬುರ್ಗಿ ಸೂಫಿ-ಸಂತರು
ಕಲ್ಶಾಣದ ಬೆಳಕು ಹರಿದಿಹುದು ನಾಡಿನ ನರನಾಡಿಗಳಲ್ಲಿ
ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ನಿವೃತ್ತ ಬ್ಶಾಂಕ್ ವ್ಶವಸ್ಥಾಪಕರು,
ಬುತ್ತಿಬಸವೇಶ್ವರ ನಗರ, ಕುಷ್ಠಗಿ
ಮೊ. 99005 04639