- Advertisement -
ದಿಟ್ಟ ಮಾತೆಗೆ ನುಡಿ ನಮನ
ಕಮಲಾಬಾಯಿ ಚಟ್ಟೋಪಾಧ್ಯಾಯ
ಎಂದೂ ಮರೆಯದ ಶ್ರೇಷ್ಠ ಧ್ಯೇಯ
ಸ್ವಾತಂತ್ರ್ಯದ ಆ ಚಳವಳಿಯಲ್ಲಿ
ಭಾಗವಹಿಸಿದವರು ನಿರಂತರ ಸಕ್ರಿಯ
ಪತಿ ಜೊತೆ ಉಪ್ಪಿನ ಸತ್ಯಾಗ್ರಹ
ಮೂಲೆ ಗುಂಪಾಗದೆ ಮುನ್ನುಗ್ಗುತ
ಯುದ್ದ ನಿರಾಶ್ರಿತರ ಪುನರ್ವಸತಿಗೆ
ಶ್ರಮಿಸಿದ ದಿಟ್ಟೆ ಹೆಮ್ಮೆಯು ನಮಗೆ
ಕರಕುಶಲ ಕರ್ಮಿಗಳ ಸಹಾಯಕೆ ನಿಂತು
ಸಂಘ ಸಂಸ್ಥೆಗಳ ಹುಟ್ಟು ಹಾಕಿದರಂದು
ಸಂಗೀತ ನಾಟಕ ಅಕಾಡೆಮಿಗಳ ತೆರೆದು
ಅಧ್ಯಕ್ಷರಾದ ಹೆಗ್ಗಳಿಕೆ ಪಡೆದಿದ್ದರು ಅಂದು
- Advertisement -
ಕನ್ನಡದ ಮೊದಲ ಚಲನ ಚಿತ್ರ ನಾಯಕಿ
ಮೃಚ್ಛಕಟಿಕ ಈ ಸ್ತಬ್ಧ ಚಿತ್ರದಿ ನಟಿಸಿ
ಹೆಣ್ಕುಲಕೆ ಮಾದರಿ ಆಗಿರುವರು ಈಕೆ
ಹೆಸರು ತಂದು ಕೊಟ್ಟರು ಭಾರತ ದೇಶಕೆ
ಬನ್ನಿರಿ ದೇಶದ ಜನಗಳೆ ಎಲ್ಲರು
ಕಮಲಾದೇವಿಯ ಸ್ಮರಿಸೋಣ
ಅವರು ನಡೆದಂಥ ಉತ್ತಮ ಮಾರ್ಗದಿ
ನಡೆಯುತ ಸಾರ್ಥಕತೆ ಪಡೆಯೋಣ.
ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.