ಕವನ: ನನ್ನೂರು

Must Read

ಚಿಕ್ಕತನದಲಿ ಇಲಿಯನ್ನೇ ಹೋಲುತ್ತದೆ ನನ್ನೂರು

ಆದರೆ,
ವಿಶಾಲ ಬಾನುವಿನ ಕೆಳಗೆ
ತೆಪ್ಪಗೆ ಮಲಗಿದ್ದರೂ – ಅಲ್ಲಿ ದಿಲ್ಲಿಯ ಚಿತ್ರಗಳು ಮಿಸುಗಾಡುತ್ತವೆ
ಹಾಳು ಮಣ್ಣೇ ಮನೆಗಳ
ಮೈ ಆದರೂ
ಮನ ಮನಗಳಲ್ಲಿ – ಜೇನ ಸಿಹಿ ಜಿನುಗುತ್ತದೆ.

ಪಾಳು ಬಿದ್ದ ಗುಡಿ
ಮೈ ಕಳೆದುಕೊಂಡ ಮಠ
ನನ್ನೂರ ಆಸ್ತಿ
ಬೆಳಿಗ್ಗೆ ಅವ್ವ ಮಡಿ ಪಡಕಿ ಉಟ್ಟು
ಹಣೆಗೆ ವಿಭೂತಿ ಇಟ್ಟು;
ಆ ದಿನ್ನೇ ಕಲ್ಲ ಬಸವನ ನೆತ್ತಿಗೆ
ಎಣ್ಣೆ ಎಳೆ ಇಳಿಯುವಲ್ಲಿ
ಸಿದ್ಧಾರೂಢನ ಸುಪ್ರಭಾತಗಳು ಏಳುತ್ತವೆ.

ಚಿಕ್ಕದಿದ್ದರೂ ನನ್ನೂರಿಗೆ
ಬ್ರಿಟಿಷರ ಕಾಲದಲ್ಲಿ
ಕಂಪನಿಯಾಗಿ ಮೆರೆದ ಕೊಂಬುಗಳಿವೆ.

ನಾ ಎಷ್ಟೇ ದಿವಸ
ಎಷ್ಟೇ ವರುಷ – ಊರ ದಾರಿ ಹರಕೊಂಡರೂ
ಅಲ್ಲಿಯ ನೀರು, ಗಾಳಿ ,ಅನ್ನ
ನನ್ನ ತಡವಿ ತಡವಿ
ಮುತ್ತುಕೊಟ್ಟಂತೆ
ತುತ್ತು ಇಟ್ಟಂತೆ ;
ನನ್ನ ಮೈ ಉಬ್ಬಿ ಹರೆಯ ಚೆಲ್ಲುತ್ತದೆ
ನಾಲಗೆ ಊರಗಲವಾಗಿ ;
ಬ್ರೇಕ್ ಇಲ್ಲದ ಮಾತುಗಳಲ್ಲಿ
ನಾ ಮೈ ಮರೆಯುತ್ತೇನೆ

ಆ ನೆಲದವ್ವನಿಗೆ ಸಾವಿರದ ಶರಣು !!

ಯಮುನಾ.ವ್ಹಿ.ಕಂಬಾರ
ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group