ನೀನಿದ್ದರೆ
ನೀನಿದ್ದರೆ
ನನ್ನ ಜೊತೆಗೆ
ಬರಡು ಬಂಜರು
ಪ್ರೇಮ ಕಾಶ್ಮೀರ
ಗಿಳಿ ಕೋಗಿಲೆಗಳ
ಸುಮಧುರ ಗಾನ
ನಲಿವ ನವಿಲಿನ
ಬಯಲು ನರ್ತನ
ಉಕ್ಕಿ ಹರಿಯುವ
ಸಿಹಿ ಒಡಲ ಪ್ರೀತಿ
ಬರೆಯುವೆ ಪ್ರೇಮ
ಕವನ ಕಾವ್ಯಸುಂದರ
ನೀನು ಇಲ್ಲದಿದ್ದರೆ
ವಿರಹ ವೇದನೆ
ಕೂಗುವುದು ನನ್ನ
ಬಂಡಾಯದ ಕಹಳೆ
_____________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

