spot_img
spot_img

ಕವನ: ಪ್ರತೀಕ್ಷೆಯ ಲಹರಿ….

Must Read

spot_img
- Advertisement -

ಪ್ರತೀಕ್ಷೆಯ ಲಹರಿ….

ಮೀನಾಕ್ಷಿಯ ಮನದೊಳು
ಪ್ರತೀಕ್ಷೆಯ ನೆರಳು
ಸಾಗುತಿದೆ ಹಗಲಿರುಳು
ಸುಂದರ ಕನಸಿನೊಳು||

ಕಟ್ಟೆಯೊಡೆದ ಭಾವನೆಗೆ
ಚೆಡಪಡಿಸಿದಳು ಭಾಮೆಯು
ನೀಲಸೀರೆ ಧರಿಸಿ ತನುವಿಗೆ
ಸ್ವರ್ಣಹಾರ ಹಾಕಿ ಚೆಲುವೆಯು||

ಮನೆದೇವರಿಗೆ ದೀಪ ಹಚ್ಚಿ
ಮನದೇವರಿಗೆ ಕಾದಳು ನೆಚ್ಚಿ
ಗಿಣಿಮೂಗಿಗೆ ನತ್ತನು ಚುಚ್ಚಿ
ಜೇನಧರಗಳಿಗೆ ಕೆಂಬಣ್ಣ ಹಚ್ಚಿ||

- Advertisement -

ಪ್ರತಿನಿಮಿಷ ಮನಹರುಷ
ಹೃದಯದಲಿ ಮಹಾಪುರುಷ
ಆಶೆಕಂಗಳಲಿ ನಲ್ಲನುತ್ಸಾಹ
ನಲ್ಲೆಯಲಿಲುಲ್ಬಣಿಸಿದೆ ಮೋಹ||

ಸಂಧ್ಯಾಕಾಲದಿ ಬಾಗಿಲತೆರೆದು
ನೂಪುರಸದ್ದದು ನಲ್ಲನಿಗೆ ತಲುಪಿ
ಗೋಪುರ ಗಂಟೆಯು ಮೊಳಗಿತು
ಚೆಂದದ ಚಂದ್ರಮ ಬಂದಿಹನು ||

ನೊಂದಿಹ ಮನದಿ ಪ್ರೀತಿಚಿಲುಮೆ
ತಂದಿಹ ನಲ್ಲೆಗೆ ಸವಿ ಜೇನಿನೊಲುಮೆ
ಹೂವಲಿ ಗಂಧವು ಬೆರೆತಂತೆ
ಹಾಲಲಿ ಸಕ್ಕರೆ ಕಲೆತಂತೆ ಬೆರೆತರು
ಪ್ರೇಮಿಗಳು ಜಗವ ಮರೆತಂತೆ.||

- Advertisement -

ಶ್ರೀ ಈರಪ್ಪ ಬಿಜಲಿ

- Advertisement -

1 COMMENT

  1. ಈ ಸಾಮಾಜಿಕ ಜಾಲತಾಣದ ಸಂಪಾದಕರಿಗೆ.ಕವನವನ್ನು ಪ್ರಕಟ ಮಾಡಿದ್ದಕ್ಕಾಗಿ ಹೃತ್ಪೂರ್ವಕವಾದ ಧನ್ಯವಾದಗಳು👏ಸರ

Comments are closed.

- Advertisement -

Latest News

ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ – ಸಂತೋಷ ಪಾರ್ಶಿ

ಮೂಡಲಗಿ: - ನಮ್ಮ ದೇಶವನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ವೀರ ಧೀರ ಸೈನಿಕರ ನಿಸ್ವಾರ್ಥ ದೇಶಪ್ರೇಮ, ದೇಶಭಕ್ತಿ ಹೆಮ್ಮೆ ತರವಂತಹ ಸಂಗತಿ. ಸೈನಿಕರಿಗೆ ಗೌರವ ಕೊಡುವುದರೊಂದಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group