ಕವನ: ಪ್ರೇಮದ ದೇವತೆ

Must Read

ಪ್ರೇಮದ ದೇವತೆ!!

ಕೇಳದ ದನಿಯೊಂದು ಕೂಗಿ ಕರೆದ ಭಾವಾನುರಾಗದಿ ಮೆರೆದ ಒಲವ ಮದ..
ನನ್ನವಳೇ ಕರೆದಂತೆ ನನ್ನ ಒಳಮನವ..
ಒಲವ ಧಾರೆಯು ಮಳೆಯ ಸುರಿಸಿದಂತೆ!
ಕಾಣದ ಪ್ರೇಮದ ಸಾಗರದಿ ವಿಹರಿಸಿದಂತೆ..
ಸವೆದ ಪ್ರೀತಿಯ ನೆನಪು ಹಾಡಿದಂತೆ!!

ಇರುಳ ಮೇಘದ ಅಡಿಯಲಿ,
ಸಿಡಿಸಿದೆ ನೀ ಪ್ರೇಮದ ಕಿಡಿ..
ಆಹುತಿಯಾಗಿದೆ ನನ್ನೀ ಹೃದಯ,
ಅಪ್ಪುಗೆಯೊಂದಿಗೆ ನಿನ್ನ ಉದಯ..
ಅವಿತುಕೊಳ್ಳಲೇ ನಾ ಈಗ ನಿನ್ನಲಿ,
ಮರೆಯಾಗಲೇ ನಿನ್ನದೇ ಉಸಿರಲಿ!!
ಲೀನವಾಗಲೇ ನಿನ್ನ ಎದೆ ಬಡಿತದಲಿ!!

ನಯನ. ಎನ್
1st BAMS.
ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ. ಹುಬ್ಬಳ್ಳಿ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group