- Advertisement -
ಮಾಗಿದ ನೋವುಗಳು !
ಏನಿತು ವಿಚಿತ್ರವು ಜೀವನದ ಪಯಣ
ಸಾಗಿದೆ ತಿರುವುವಿನಲಿ ತೀರದ ಯಾಣ
ಹಗಲಿರುಳುನಂತೆ ಕತ್ತಲು ಬೆಳಕಿನಾಟ
ಬಾಲ್ಯ ಹರೆಯ ಮುಪ್ಪಿನ ಮುಸಿಕಿನಾಟ
ಬೆನ್ನ ಮೇಲೆ ತೀರದ ಕಹಿನೆನಪಿನ ಬುತ್ತಿ
ಸಾಗಿದೆ ಮಾಗಿದ ನೋವುಗಳ ಹೊತ್ತು
- Advertisement -
ಬಿತ್ತಿದ ಬೀಜ ಗಿಡಮರವಾಗಿ ವರವಾಗಿವೆ
ಹೆತ್ತ ಮಕ್ಕಳ ಆಸರೆಯಿಲ್ಲದೆ ಭಾರವಾಗಿದೆ
ಭಾವಬಸಿರು ಜೀವಹಸಿರು ಕೆಸರಂತಾಗಿದೆ
ದುಃಖಕೆ ಕಾಯ ಬಾಗಿದೆ ಆಶ್ರಯಕೆ ಕೋಲಿದೆ !!
ಬರಿಗಾಲು ಬಾಗಿದ ಬೆನ್ನು ಭಾವದಿ ನೋವು
ಸುತ್ತ ಹಸಿರು ಹೊತ್ತಿಹಿಳು ಅನಾಥನೊಗವು
- Advertisement -
ಚಿತ್ತಗುರಿಯತ್ತ ಬತ್ತದ ಛಲದ ನಡೆಗೆ ಸಾಗಿದೆ
ಯಾರ ಯಾರ ಕಮ೯ ಕೊನೆಗೆ ಹೇಗಲೇರಲಿದೆ
ಮುಪ್ಪಿನಂಚಿಗೆ ಕಾಲ ಎಲ್ಲರ ನಿಲ್ಲಿಸುವುದು
ಹೆತ್ತವರಗಿಟ್ಟ ಪಾಪದ ನೆನಪುಉಕ್ಕಿಸುವುದು ! .
ರತ್ನಾ ಎಂ ಅಂಗಡಿ
ಹುಬ್ಬಳ್ಳಿ