- Advertisement -
ಮಿತ್ರ ಬಸಣ್ಣ ಸಸಾಲಟ್ಟಿಗೆ
ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು
ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು
ಬಾನಿನಾಚೆಯ ದಿಗಂತದ ಮೂಲ ನೆಲೆಯನು
ಸೇರಲು ಸಾಕೇಂದು ಭವಬಂಧದ ಬದುಕನು
ಭವಬಂಧದ ಬದುಕಲಿ ಅವರಿವರು ನಾನು ನೀನು
ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು
ಹೊತ್ತ ಭಾರಕ್ಕೆ ಬಾಗುತ್ತಿದ್ದ ಬೆನ್ನೆಲುಬಿನ ಹುರಿಯನು
ಮರೆತು ನಂಬಿದ್ದು ಮಬ್ಬುಮಂಜಿನ ದಾರಿಯನು
ಬಂದಾಗರಚುವ ಜೀವ ಸೇರುವದು ಸ್ಥಬ್ದತೆಯನು
ಹಂಗು ಹರಿದು ತೊರೆದು ಬಿಟ್ಟೆಲ್ಲ ಕಿರುಚಾಟವನು
ಸುಖದ ದೇಹಕ್ಕನಿವಾರ್ಯ ನರಳಿಸುವ ನೋವನು
ಸಹಿಸುವದು ಬಿಡುವದು ಬಳಲಿ ತಾನಿದ್ದ ತನುವನು
- Advertisement -
ಗೆಳೆಯಾ
ನೀನಿಂದು ಮುಂದಿರುವಿ ಸೇರಲಾಮನೆಯನು
ತೊರೆದಿರುವಿ ಬೆಸೆದ ನಮ್ಮ ಇಲ್ಲಿಯ ಸಂಬಂಧವನು
ಸೇರುವದಿದೆ ನಾವೆಲ್ಲ ನಾಳೆ ಅದೆ ನಮ್ಮ ಮನೆಯನು
ಆ ಸಂಬಂಧ ಹಂಗಿನದಲ್ಲ ಮತ್ತೆ ನಿನ್ನ ಕೂಡವೆನು
ಜೆ ಪಿ ವಿಜಯಕುಮಾರ
ಮಾನ್ಯ ಸಂಪಾದಕರಿಗೆ ಹಾಗು ತಮ್ಮೆಲ್ಲ ಸಿಬ್ಬಂದಿಗೆ ಅನಂತ ನಮನಗಳು ತಮ್ಮ ಪತ್ರಿಕೆಯಲ್ಲಿ ಮಿತ್ರ ಬಸಣ್ಣ ಸಸಾಲಟ್ಟಿಗೆ ಕವನ ಪ್ರತಟಿಸಿದ್ದು ನಾನು ತಮಗೆ ಋುಣಿಯಾಗಿರುವೆ. 🙏🙏🙏