- Advertisement -
ಶಿವರಾತ್ರಿ
ಶಿವ ಶಿವ ಎನುತ ಪೂಜಿಸಿ
ವರವ ಬೇಡುತ
ರಾತ್ರಿಯಿಡಿ ಜಾಗರಣೆಯ
ತ್ರಿದಳ ಬಿಲ್ವಪತ್ರೆ ಶಿವಗೇರಿಪ ಶಿವರಾತ್ರಿ
ಶಿವದೇಗುಲಗಳಲಿ ಭಕ್ತಿ ಪೂಜೆ
ವನಸ್ಪತಿಗಳ ಅಲಂಕಾರದಿ ಶೋಭಿತ
ರಾಜಶೇಖರನ ಚೆಲುವ ವದನದಲಿ
ತ್ರ್ರಿಕರಣಗಳ ಉಪವಾಸದೀ ಶಿವರಾತ್ರಿ
ಶಿಖಿನೇತ್ರ ಶಿತಿಖಂಡ ಶಿರದಲಿ ಗಂಗೆಯ ಧರಿಪ
ವಸುಮತಿಯ ಚಲುವಲಿ ಶೋಭಿತ
ರಾಜಶೇಖರನ ಚಲುವ ವದನ
ತ್ರಿಕಾಲದೊಳು ಭಕ್ತಿಯ ಸ್ಮರಣೆಯ ಶಿವರಾತ್ರಿ
ಶಿವದೀಕ್ಷೆ ಪಡೆದ ಮನದಿ
ವಂದಿಸುವೆ ಶಿವನೊಲುಮೆ ನಾಮವ
ರಾಜಶೇಖರ ನಿನಗೆ
ತ್ರಿಕರಣದಿಂದಲಿ ಶಿವರಾತ್ರಿಯ ದಿನದಿ
ಶಿವ ನಿನ್ನಯ ಅನುಗ್ರಹದ
ವರವಿರಲಿ ಸದಾವಕಾಲದಿ
ರಾರಾಜಿಪ ಹಸನ್ಮುಖದಿ
ತ್ರಿಲೋಚನ ಪರಶಿವನ ಶಿವರಾತ್ರಿ
ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು