- Advertisement -
ಉಳಿದು ಬಿಟ್ಟವು
——————————-
ಗೆಳತಿ
ಉಳಿದು ಬಿಟ್ಟವು
ನನ್ನ ಮಾತುಗಳು
ನಿನ್ನ ಮೌನದ
ತಿಜೋರಿಯಲ್ಲಿ .
ಹಾಗೆ ಉಳಿದು ಬಿಟ್ಟವು
ಊರ ಹೊರಗಿನ
ಬಂಡೆಗಳ ಮೇಲಿನ
ನಮ್ಮ ಹೆಸರುಗಳು.
ಅನಾಥವಾದವು
ಮರದ ಕೆತ್ತನೆ
ಮೂಕವಾಯಿತು
ಕಟ್ಟಿದ ಗುಬ್ಬಿ ಗೂಡು.
- Advertisement -
ಕೊಚ್ಚಿ ಹೋಯಿತು
ಮರುಳ ಮೇಲಿನ ಕಾವ್ಯ
ಕಗ್ಗತ್ತಲಿನಲಿ
ಕನಲಿದವು ಭಾವಗಳು.
ಬಾಡಿದವು ಭರವಸೆಗಳು
ಕಮರಿದವು ಕನಸುಗಳು
ಸೋತ ಆಶಯಗಳು
ಉಳಿದವು ಭಾವ ಕವನಗಳಲ್ಲಿ
————————————–
ಡಾ ಶಶಿಕಾಂತ ಪಟ್ಟಣ ಪುಣೆ