ಕಣ್ಣಿಗೆ ಕಾಣದ ಜೀವಿಯೊಂದು ಭೂಮಿಗೆ ಅವತರಿಸಿ ಬಂದಿದೆ ಎಷ್ಟು ವರ್ಷದ ಅದರ ತಪಸ್ಸಿನ ಫಲವೇನು ಗಟ್ಟಿ ಮೆಟ್ಟು ಮಾಡಿದೆ
ಕೊರೋನಾ ಎಂಬ ಹೆಸರಿನಿಂದ ನರ್ತನವ ನಡೆಸಿದೆ ಮಾನವ ಶಕ್ತಿಯನ್ನು ಮೀರಿ ಅಟ್ಟಹಾಸ ಮೆರೆದಿದೆ ಜಗದ ತುಂಬ ತಲ್ಲಣವಗೊಳಿಸಿದೆ
ಅಲ್ಲೋಲ ಕಲ್ಲೋಲ ಮಾಡುತ್ತಾ ದೇಶದಿಂದ ದೇಶಕ್ಕೆ ಹಬ್ಬುತ್ತ ಸಾಗಿದೆ ಅದೆಷ್ಟೋ ಜೀವಗಳನ್ನು ಬಲಿ ತೆಗೆದು ಕೇಕೆ ಯಾಕೆ ನಗುತ್ತಿದೆ
ಒಬ್ಬರನ್ನೊಬ್ಬರು ಮುಟ್ಟಿದರೆ ಅಂಟಿಕೊಂಡು ಬಿಡುತ್ತದೆ
ಅಂತರಗಳ ಮಧ್ಯದಲ್ಲಿ ಹೊಂಚ ಹಾಕಿ ಕುಳಿತುಕೊಂಡು ಸಂಚನೊಂದು ಮಾಡುತ್ತಿದೆ ಸ್ವಲ್ಪ ಮೈಮರೆತರೆ ಮುತ್ತಿಕೊಂಡು ಬಿಡುತ್ತದೆ
ಚೀನಾದಲ್ಲಿ ಹುಟ್ಟಿ ವಿಶ್ವ ಪರ್ಯಟನ ಕೈಗೊಂಡಿದೆ
ಕಂಡಕಂಡ ರಾಷ್ಟ್ರಗಳಲ್ಲಿ ವಸ್ತಿ ಮಾಡಿ ಸದ್ದಿಲ್ಲದೆ ತನ್ನ ನೀಚ ಬುದ್ಧಿ ತೋರಿಸಿ ಜಾತ್ರೆಯನ್ನು ಮಾಡುತ್ತಿದೆ
ಯಾವ ಔಷಧಿಗೂ ಬಗ್ಗ ಲಾರದೇ ಕರಕಿಯ ಕಸ ಹಬ್ಬಿದ ಹಾಗೆ ಹಬ್ಬುತ್ತಿದೆ ಮಾನವ ಕುಲ ಎಂದು ಕಂಡರಿಯದ ಆತಂಕವ ಮೂಡಿಸಿದೆ
ಲಸಿಕೆ ಸಿಗುವವರೆಗೂ ನಡೆಯುವುದು ಅದರ ಚೆಲ್ಲಾಟ
ಆದಷ್ಟು ನಾವೆಲ್ಲಾ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಮುಗಿಯುವುದು ಅದರ ಕ್ರೂರ ಹೋರಾಟ
ಡಾ. ಎಫ್. ಡಿ. ಗಡ್ಡಿ ಗೌಡರ

