spot_img
spot_img

“ಕಾವ್ಯ ಕಲರವ, ಗಂಗಾವತಿ” ಇವರಿಂದ ಹಮ್ಮಿಕೊಳ್ಳಲಾಗಿದ್ದ ೧೭ ನೇ ಕವಿಗೋಷ್ಠಿಯಲ್ಲಿಭಾಗವಹಿಸಿರುವ ಕವಿಗಳ ರಚನೆಗಳು

Must Read

spot_img
- Advertisement -

ಸಂಗಾತಿ

ಚಳಿಗಾಲದಲ್ಲಿ
ಮೈ ಕೊರೆಯುವ
ಚಳಿಗೆ
ಬಿಸಿ ನೀಡುವ
ನನ್ನ ಮುದ್ದು ಸಂಗಾತಿ

ಬೇಸಿಗೆಯಲಿ
ತಂಪಾಗಿ
ಚಳಿಗಾಲದಲಿ
ಬಿಸಿಯಾಗಿ
ಮಳೆಗಾಲದಲಿ
ಹಿತವಾಗಿ
ಮರೆಲಾರದ
ಸುಖ ನೀಡುವ
ನನ್ನ ಮುದ್ದು ಸಂಗಾತಿ

- Advertisement -

ನನಗೆ ಸಾಥಿಯಾಗಿ
ಸ್ಪರ್ಷಕೆ ಹಿತವಾಗಿ
ನೆಮ್ಮದಿಯ
ಬಿಸಿ ಅಪ್ಪುಗೆ ನೀಡುವ
ನನ್ನ ಮುದ್ದು ಸಂಗಾತಿ

ಸುಪ್ತ ಭಾವಗಳ
ಕೂಡಿಸಿ
ಸರ್ವ ಸುಯೋಗ
ಸಂಪನ್ನ ತರುವ
ಸರ್ವಋತು ಸಖ್ಯದಾರಿ
ನನ್ನ ಮುದ್ದು ಸಂಗಾತಿ

ಹಲವಾರು ಬಣ್ಣ
ನೂರಾರು ಭಾವ
ಸಾವಿರಾರು ಕನಸು
ತರುವ
ನನ್ನ ಮುದ್ದು ಸಂಗಾತಿ

- Advertisement -

ಲಕ್ಷಾಂತರ ನೆನಪು
ಕೊಟ್ಯಾನಂತರ
ಚಿತ್ತಾರ
ನವನವೀನ
ಝೇಂಕಾರ
ಮೂಡಿಸುವ
ನನ್ನ ಮುದ್ದು ಸಂಗಾತಿ

ಬಿಸಿ ಅಪ್ಪುಗೆಯಲಿ
ನನಗೆ ರಕ್ಷಾಕವಚವಾಗಿ
ಸದಾ ನನ್ನ ಜೊತೆಗೆ ಮಲಗುವ
ನನ್ನ ಮುದ್ದು ಸಂಗಾತಿ

ನೂರಾರು ರಂಗು
ರಂಗಿನ ಬಟ್ಟೆ
ತುಂಡು ತುಂಡು ಸೇರಿಸಿ
ಅಖಂಡತೆಯ ಕನಸು
ತರುವ
ನನ್ನ ಮುದ್ದು ಸಂಗಾತಿ

ಮೈಮೇಲೆ ಹೊದ್ದರೆ
ಮನದಲಿ ತನನನ
ಸದಾಕಾಲ
ಅಮ್ಮನ ಸಾಂತ್ವನ
ಹೇಳುವ
ನನ್ನ ಮುದ್ದು ಸಂಗಾತಿ
ನನ್ನ “ಕೌದಿ “

ಸಿ. ಮಹಾಲಕ್ಷ್ಮಿ. ಕೆಸರಹಟ್ಟಿ
ಅಧ್ಯಕ್ಷರು. ಕರುಣಾ ಟ್ರಸ್ಟ್
ಗಂಗಾವತಿ


ಉಳಿವಿಗಾಗಿ ಹೋರಾಟ

ಇತಿಮಿತಿಗಳ ಪರದೆ ಹರಿದು
ಬಯಲಲಿ ಒಂದಾಗಲು
ನಿಂತಲ್ಲೇ ನಿಂತು ಕೋಳೆಯುವ ಮೋದಲು
ಸಾಗಬೇಕು ನಾವು ಮುಂದು ಮುಂದು
ಹೋಸ ದಾರಿ ಕಂಡುಕೊಂಡು

ಅವರ ಜೀವನ ಅವರಿಗೆ
ನಮ್ಮ ಜೀವನದ ದಾರಿ ನಮಗೆ
ನಾವೆ ಸವಿಸಬೇಕು
ಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲು
ನಾವು ಹೆಣಗಾಡಬೇಕು

ಹುಚ್ಚು ಮನದ ಹಂಬಲಕೊ
ಯಾರ ಮೇಲಿನ ರೊಚ್ಚಿಗೊ
ಭಂಡಾಯದ ಕಿಚ್ಚಿಗೊ
ಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು

ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದು
ಗಟ್ಟಿನೆಲೆ ಕಾಣಬೇಕು
ನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು

ಕತ್ತಲೆಯಲಿ ಭೂಗತ ವಾಗುವ ಬದಲು
ಬೆಳಕಿಗೆ ಬಿದ್ದು,ಬಾಳು ಬೆಳಗಬೇಕು
ಕತ್ತಲಲಿದ್ದವರಿಗೆ ದೀಪದುಡಗರೆ
ನಾವು ನೀಡಬೇಕು

ಲಕ್ಷ್ಮೀದೇವಿ ಕಮ್ಮಾರ, ಗಂಗಾವತಿ
_7204327362


ಆಕೆ ಮತ್ತು ಸ್ವಾರ್ಥ.(ದ್ವಿಪದಿ.)

ಆಕೆ ಆತನನ್ನು ಬೀದಿಗಿಳಿಯಲು ಬಿಡುತ್ತಿರಲಿಲ್ಲ
ಸ್ವತಃ ಆಕೆಯೂ ಬೀದಿಗಿಳಿಯಲು ಇಚ್ಛಿಸಲಿಲ್ಲ

ಆಕೆಯ ಪ್ರೀತಿ ತುಂಬಿ ತುಳುಕಿ ಹರಿದಾಡಿತು
ಅತಿಯಾದಲ್ಲಿ ಅಮೃತವೂ ವಿಷವಾಯಿತು

ಆಕೆಯ ತಗಾದೆ ಪ್ರೇಮದಲಿ ನಿರಂತರವಾಗಿತ್ತು
ತನ್ನತನ ಬಂದಾಗ ಸ್ವಾರ್ಥ ತುಸು ಹೆಚ್ಚಾಯಿತು

ಆತ ಅದನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳಬೇಕಿತ್ತು
ಹೂವು ಬಾಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿತ್ತು

ದುಂಬಿಗೆ ಜೇನ ಹೀರಿಕೆಯೊಂದೇ ಗುರಿಯಾಗಿತ್ತು
ಯಾವ ಹೂವೇನು ಉದರ ಪೋಷಣೆಯಾಗಿತ್ತು

ತೋರಿಕೆ ಪ್ರೀತಿ ತಿಳಿಯಲು ಆಕೆಗೆ ತಡವಾಗಿತ್ತು
ತನ್ನದೆಲ್ಲವ ಅದಾಗಲೇ ಧಾರೆ ಎರೆದಾಗಿತ್ತು

ಕಾಲಪ್ರಹಾರಕೆ ಋತುಗಳೂ ಬದಲಾಗುತ್ತಿತ್ತು
ಅನಿಷ್ಟ ಸಮಯದಿ ಪ್ರಕೃತಿ ವಿಕೃತಿಯಾಗಿತ್ತು

ದಿನದಿನಕೂ ಪ್ರೀತಿಯ ನೋವು ವೃದ್ಧಿಯಾಗುತ್ತಿತ್ತು
ಗೂಡಿನೊಳಗಿನ ಹಕ್ಕಿ ಶೋಕಗೀತೆ ಹಾಡುತ್ತಿತ್ತು

ವಿರಹದುರಿಯಲಿ‌ ಬೆಂದು ದಾರಿ ಸವೆಸಬೇಕಿತ್ತು
ಉಡಿಬೆಂಕಿಯಲಿ ದಿನಗಳ ಉರುಳಿಸಬೇಕಿತ್ತು

ಬಯಲು ಆಲಯದಲಿ ಇನ್ನಿಲ್ಲವಾಗಬೇಕಿತ್ತು
ವೈರಾಗ್ಯ ನಂಜು ಪಾನವನು ಒಪ್ಪಿಕೊಳ್ಳಬೇಕಿತ್ತು

ಅವನೊಲುಮೆ ನೆನಪಲಿ ದೇಹ ಮಿಂದೇಳುತ್ತಿತ್ತು
ಜರ್ಝರಿತ ಹೈದಯವದು ಆಹುತಿಯಾಗಿತ್ತು

ಅನಸೂಯ ಜಹಗೀರದಾರ
ಕೊಪ್ಪಳ


ಮಾನವ ಬಂಧುತ್ವ

ಕಾಡುವ ಚಿಂತೆಯ ಕತ್ತು ಹಿಸುಕಿ
ಸ್ಥೈರ್ಯವಂತರಾಗಿ ಬಾಳಬೇಕು
ಚೈತನ್ಯ ಚಿಲುಮೆ ಹೊಮ್ಮುವಂತೆ
ಸತ್ಯ ಶುದ್ಧ ಆಗಸವಾಗಬೇಕು
ನಾವು ಸತ್ಪುರುಷರಾಗಬೇಕು.

ಬವಣೆಯ ಬೇಗೆಗೆ ಬೆಂದ ದೇಹಕ್ಕೆ
ಹಸಿರನರಳಿಸುವ ಕಾರಂಜಿಯಾಗಬೇಕು
ತೂತು ಬಿದ್ದ ಗುಡಿಸಲಲಿ, ನಾಳೆಯ
ಕನಸಿಗೆ ಆಸರದ ಕಂಬವಾಗಬೇಕು
ನಾವು ಫಕೀರರಾಗಬೇಕು.

ಹೃದಯ ಹೃದಯಗಳ ಕಟ್ಟಿ ಬೆಳೆಸಿ
ಬೆಳಕಿನ ಕಿರಣ ಸೂಸಬೇಕು
ಮನದ ಕೀಲಿಯನೊತ್ತಿ
ಭವಿಷ್ಯದ ಬಾಗಿಲ ತೆಗೆಯಬೇಕು
ನಾವು ಸಂತರಾಗಬೇಕು.

ಬುದ್ದಿ ಭಾವಗಳ ವಿಸ್ತರಿಸಲು
ಚಿಂತನೆಯ ಗೂಡು ಕಟ್ಟಬೇಕು
ಮಾನವ ಬಂಧುತ್ವ ಮಾರ್ಗದಲಿ
ಜೀವ ತೆತ್ತರೂ ಕೂಡಿ ಬದುಕಬೇಕು!
ನಾವು ಜಗದ್ಗುರುಗಳಾಗಬೇಕು.

ಬಂದುದೆಲ್ಲವ ಸಹಿಸಿಕೊಳ್ಳುತ
ಉಸಿರು ಹೆಸರಾಗಬೇಕು
ಬಿಸಿಲು ಗಾಳಿ ಮಳೆ ಚಳಿಗೆ ಬಗ್ಗದೆ
ಗೊಮ್ಮಟ ಶಿಲೆಯಾಗಬೇಕು
ನಾವು ನಾಗರೀಕರಾಗಬೇಕು.

ಬಿ‌ ಅರುಣ್ ಕುಮಾರ


ಹೆಣ್ಣು ಜಗದ ಕಣ್ಣು

ಅವರಿವರೆನ್ನದೆ ಕೊಟ್ಟ ಮನೆಗೆ ಮೆಟ್ಟಿಲಾಗಿ ಮುಗಿಲೆತ್ತರಕ್ಕೆ ಬೆಳೆಸಿ ಬೆಳೆದವಳು
ಸಮಾಜಕ್ಕೆ ಒಪ್ಪಿತವಾದವಳು
ನಾನು
ನಿಮ್ಮ ಪ್ರೀತಿಯ *ಮನೆಮಗಳು*!!

ಹೊತ್ತು-ಗೊತ್ತು ಲೆಕ್ಕಿಸದೆ ದುಡಿದುಡಿದು ಸಣ್ಣ ಆದವಳು ಮನೆ ಮಕ್ಕಳ ಸಂತೈಸಿ ವಂಶದ ಕುಡಿಗೆ ನೀರೆರೆದು ಬೆಳೆಸಿ
ಧನ್ಯತೆ ಮೆರೆದವಳು
ನಾನು
ನಿಮ್ಮೊಲುಮೆಯ **ಹೆಂಡತಿಯಾದವಳು.*!!

ಪ್ರೀತಿ ಮಮತೆ ಕರುಣೆ ವಾತ್ಸಲ್ಯವನ್ನು ಕುಟುಂಬಕ್ಕೆ ಧಾರೆಯೆರೆದು ಮನೆತನದ ಘನತೆ ಗೌರವ ಕಾಪಾಡಿದವಳು
ಸಂಸಾರದ ಗುಟ್ಟಿಗೆ ದನಿಯಾದವಳು
ನಾನು
ಮತ್ತೊಬ್ಬರಿಗೆ *ತಂಗಿಯಾದವಳು*
ಮುಗದೊಬ್ಬರಿಗೆ ಅಕ್ಕರೆಯ *ಅಕ್ಕನಾದವಳು* …!!

ಉಪವಾಸ ವನವಾಸ ಸೆರೆವಾಸ ಸಹಜವೆಂದು ನುಂಗಿಕೊಂಡವಳು
ಒಂಟಿಯಂತೆ
ಡುಬ್ಬ ಸವೆದರು ಹೊತ್ತು ನಡೆಯುವುದೇ ಕಾಯಕವೆಂದವಳು
ಎಲ್ಲಿಯೂ ನಿಲ್ಲದ ಕುಂಟೆತ್ತಿನಂತೆ ಒಂಟಿ ಪಯಣ ಬೆಳೆಸಿದವಳು ಓದು-ಬರಹ ಬರದಿದ್ದರೂ ಗೆಲುವಿನ ಪಾಠಹೇಳಿ ಮನೆಯ ಮೊದಲ ಗುರುವಾದವಳು
ಧರೆಯಂತೆ ಭಾರಹೊತ್ತು ಲೋಕದ ಕಣ್ಣಿಗೆ ನಾನು ತಮ್ಮೆಲ್ಲರ ಪೊರೆದು **ತಾಯಿಯಾದವಳು* .!!

ಪಾತ್ರ ಬೇರೆಯಾದರೂ ಜವಾಬ್ದಾರಿ ಒಂದೇ
ಹಣ್ಣು ಬೇರೆಯಾದರೂ ಸಿಹಿಯ ಅನುಭವೊoದೇ ನಿತ್ಯವೂ ಭ್ರೂಣ ಹತ್ಯೆ ಅತ್ಯಾಚಾರ ಕೊಲೆ ಸುಲಿಗೆ ಸಾಲದ್ದಕ್ಕೆ
ಸುಟ್ಟು ಬೂದಿಮಾಡಿ ಕ್ರೌರ್ಯ ಮೆರೆಯುವ ನಿಮಗೆ
ನೈತಿಕತೆ ಎಲ್ಲಿದೆ?
ಹೆಣ್ಣು
ಜಗದ ಕಣ್ಣೆoದು ಕರೆಯಲು….!!!


ನ್ನದಾತನ ಹಣೆಬರಹ

ರೈತ ಬೆಳೆಯನ್ನು ಬೆಳೆಸುತ್ತಾನೆ ಮಕ್ಕಳಂಗ
ದಿನ ರಾತ್ರಿ ಕಾಯ್ತಾನ ಕಣ್ಣಿಗೆ ನಿದ್ದಿ ಇಲ್ಲದಂಗ
ಈ ಮಾಲನ್ನು ಕೇಳುತ್ತಾರೆ ಬಾಯಿಗೆ ಸಿಕ್ಕಂಗ *..!!೦೧*

ಕೊಡದಿದ್ದರೆ ರೈತ ಕೊಳಿತ್ತಾನೆ ಸಾಲದೊಳಗ
ಕೀಟ ನಾಶಕ್ಕೆ ಔಷಧಿ ಹೊಡಿತಾನ ಸಿಕ್ಕಸಿಕ್ಕಂಗ
ತಿಂದವರಿಗೆ ಶಕ್ತಿ ಎಲ್ಲಿಂದ ಬರಬೇಕು ರಟ್ಟಿಯೊಳಗ *..!!೦೨*

ಆಸ್ಪತ್ರೆಗಳು ತುಂಬುತ್ತಿವೆ ಕೊಠಡಿ ಸಾಲದಂಗ
ರೈತರು ಆಗ್ಯಾರ ಸೋರಗಿ ಎಳ್ಳು ಕಟ್ಟಿಗೆಯಂಗ
ಸರಕಾರ ಕುಳಿತೈತಿ ರೈತರನ್ನು ತಿರುಗಿ ನೋಡದಂಗ *..!!೦೩*

ಹೀಗಾದರೆ ರೈತರು ಬದುಕೊದು ಹೆಂಗ
ಅನ್ನಕ್ಕೂ ಬರಬೇಕು ಬೆಲೆ ಚಿನ್ನದಂಗ
ಬದುಕಿ ಉಳಿತಾನ ರೈತ ಆಗ ಜಗತ್ತಿನಾಗ ..!!೦೪

ಮದ್ದಾನೆಪ್ಪ ಹೆಚ್ ಮನ್ನಾಪೂರ”
ಸಾ॥ ಕಾಮನೂರು. ತಾ॥ಜಿ॥ ಕೊಪ್ಪಳ ೯೭೪೦೨೧೬೯೭೩. ೬೩೬೨೨೯೪೬೮೮.


ಗೋಡೆ ತೇವಕೆ ಗೂಡು ಕುಸಿಯಿತು.

ಮೇಘಗಳ ಆಲಿಂಗನಕ್ಕೆ
ಇಳೆಗೆ ರಭಸದಿ ಹನಿಗಳ ಆಗಮನ.
ಬಳಲಿ ಬೆಂಡಾಗಿದ್ದ ಬದುಕು
ಹರಿವ ನದಿಗಳಲ್ಲಿ ನಿರ್ಗಮನ.

ಗೋಡೆಯ ತೇವಕೆ
ಗೂಡು ಕುಸಿಯಿತು.
ತೂಟ್ಟಿಲ ಮಗು ತುಟಿಯ
ನಗು ; ನೀರಲ್ಲಿ ಮುಳುಗಿ ತೇಲಿತು.
ಜೀವ ಮರದ ದಿಮ್ಮಿಯಂತಾಯಿತು.

ಬಿದ್ದ ಅವಶೇಷಗಳ ಕೆಳಗೆ
ಏನಿಹುದು ವಿಶೇಷ ?
ಬೆಸೆದ ಭಾವನೆಗಳು ಭವದಲ್ಲಿ;
ಕಲ್ಲು ಮಣ್ಣಿನಡಿಯಲ್ಲಿ ಈಗ ಬರಿ ಶೇಷ.

ಕಬ್ಬು ಬಾಳೆ ಅಡಿಕೆ ;ಕಾಳು
ಬೆಳೆತ ರೈತನ ಬಾಳು ಮುಚ್ಚಿದ ಬಾಗಿಲು.
ಕಬ್ಬಿಗನು ಏನು ಮಾಡಲು ಸಾದ್ಯ ?
ಹೊದ್ದ ಹೊದಿಕೆ ಉಸಿರುಗಟ್ಟಿಸಿದಾಗ.
ಕೈಯ ಪೆನ್ನು ಕಣ್ಣಿಗೆ ಚುಚ್ಚುವಾಗ.

ಓ ಶಿವಾ ಹಸಿ ತೊಗಲಿನ ಚರ್ಮಕ್ಕೆ.
ಬಿಸಿ ಕಾವಲಿನ ಬರೆಯೆಕೆ ?
ಅರಿಯದ ನರನ ಕ್ಷಮಿಸಿಬಿಡು
ಅವನ ಪಾಪವ ಮನ್ನಿಸಿಬಿಡು.

ಪ್ರಸಾದ ಬೂದಿವಾಳ.


ನಿರೀಕ್ಷೆ:

ನಿರೀಕ್ಷೆಗಳಿರಬೇಕು ಬದುಕಲಿ|
ಹುಸಿಯಾದರೂ ಹಸಿಯಾಗಿರಬೇಕು|
ನಿರೀಕ್ಷೆಗಳು ಕಸುವಿರುವತನಕ ಚಾಲತಿಯಲಿರಬೇಕು|
ಮಾನವೀಯ ಮೌಲ್ಯಯುತ ಬದುಕಿಗೆ|
ನಿರೀಕ್ಷೆಗಳೇ ಆಶಾಕಿರಣ|
ಸಾರ್ಥಕ್ಯದತ್ತದ ನಡಿಗೆಗೆ ನಿರೀಕ್ಷೆಗಳಿರಬೇಕು||

ಅರವಿಂದ ಪಟೇಲ್


ಹಸಿರೇ ಬದುಕಿನ ಉಸಿರು

ಬೆಳೆಸಿ ಮರವ ಕಾಪಾಡಿ ನೆಲವ,
ನೆಲವಿಲ್ಲದ ಬದುಕು ಬಂಜರು,
ಮರವಿಲ್ಲದ ಭೂಮಿ ಬಂಜರು,
ಬಂಜರದ ನೆಲ ಮತ್ತು ಬದುಕು ಸದಾ ಕೆಟ್ಟ ನೆತ್ತರು
ಮನುಜ ನೀ ತಿಳಿಯಬೇಕು ಕಾರಣ ಹಸಿರೇ ಉಸಿರು .

ಮರವಿರುವ ವಾತವರಣ ತಂಪು,
ನಗುವಿನ ಮನಸ್ಸಿರುವ ಮನೆ ತಂಪು,
ವಾತಾವರಣ ಮತ್ತು ಮನೆ ತಂಪಿದ್ದೊಡೆ,
ನಮ್ಮ ಪರಿಸರ ಮತ್ತು ಬದುಕು ಆಗದು ಕೆಂಪು .
ಮನುಜ ನೀ ತಿಳಿಯಬೇಕು ಕಾರಣ ಹಸಿರೇ ಉಸಿರು .

ನಾನು ನನ್ನದು ಎನ್ನುವ ಅಹಂ ಮತ್ತು ಅಹಂಕಾರವ ಬಿಡು,
ತನಗಾಗಿ ಏನನ್ನೂ ಬೇಡದ ನಿಸ್ವಾರ್ಥ ಮರವ ನೋಡು,
ಕೂಡಿಟ್ಟ ಆಸ್ತಿ ಸಂಪತ್ತು ಎಂದಿಗೂ ಶಾಶ್ವತವಲ್ಲವೆಂದು ಮೊದಲು ತಿಳಿ,
ಸಣ್ಣ ಬೀಜದಿಂದ ತನ್ನ ಎಲ್ಲಾ ಕನಸುಗಳನ್ನು ಕೊಡುವ ಮರದ ಮಹತ್ವ ಅಳಿ.
ಮನುಜ ನೀ ತಿಳಿಯಬೇಕು ಕಾರಣ ಹಸಿರೇ ಉಸಿರು .

ಮರವಿಲ್ಲದೆ ಮಳೆ ಬರಲ್ಲ,
ಮಳೆ ಬರದೆ ಜಲವಿರಲ್ಲ ,
ಜಲವಿಲ್ಲದೆ ನಮಗೆ ಬಲವಿಲ್ಲ ಮತ್ತು ಬಲವಿಲ್ಲದ ಬದುಕು ಸುಧಾರಿಸುವುದಿಲ್ಲ
ಮನುಜ ನೀ ತಿಳಿಯಬೇಕು ಕಾರಣ ಹಸಿರೇ ಉಸಿರು .

ಸಹಾಯದ ಮನಸ್ಸು ಏಂದೂ ಅಳದು,
ಬೆಳಸಿದ ಮರ ಹೆಮ್ಮರವಾಗಿ ನೆರಳು ನೀಡುವುದು,
ನೆರಳಿನ ತಂಪಿನಲ್ಲಿ ಬದುಕಿನ ಹೊಸ ಕಂಪನ್ನು ಆಸ್ವಾದಿಸುತ್ತಾ ಪ್ರಕೃತಿಯು ನಗುವಂತೆ ಬಾಳೋಣ.
ಮನುಜ ನೀ ತಿಳಿಯಬೇಕು ಕಾರಣ ಹಸಿರೇ ಉಸಿರು .

ವಸಂತಕುಮಾರ
ವಿಶೇಷ ಶಿಕ್ಷಕರು.


ಬುದ್ದನಾಗುವೆ ನಾ ಬುದ್ದನಾಗುವೆ

ಕೆಣಕದಿರು ಕೆಣಕಿ ನೋಯದಿರು
ಇಣುಕಿಣುಕಿ ನೋಡದೆ ಮೌನವ
ಮುರಿಯುತಾ ಮನವ ನೋಯಿಸದಿರು
ಬುದ್ದನಾಗುವೆ ನಾ ಬುದ್ದನಾಗುವೆ

ನಿಷ್ಕಲ್ಮಶ ಇರುವ ಮನಕೆ
ಕಲ್ಮಶವ ಆಗುತಾ ವಿಷ ಬೆರಸದಿರು
ಬೆರಸಿ ಮೃತ್ಯುಕೂಪಕೆ ದೂಡದಿರು
ಬುದ್ದನಾಗುವೆ ನಾ ಬುದ್ದನಾಗುವೆ

ಸರಿ ಪಥವ ಸಾಗುವೆ ನಾ
ನಾ ಸಾಗುವ ಪಥಕೆ ಮುಳ್ಳಾಗುವೆ ನೀ,,
ಮುಳ್ಳಾಗಿ ಚುಚ್ಚಿ ಮನಕೆ ನೋಯಿಸದಿರು
ಬುದ್ದನಾಗುವೆ ನಾ ಬುದ್ದನಾಗುವೆ

ನಾ ಎಂಬ ಸೊಕ್ಕು, ಅಹಂಕಾರದಿ
ನನ್ನಿಂದಲೇ ಎಲ್ಲಾ ಎನ್ನುವ ಗರ್ವದಿ ಮೆರೆಯದಿರು
ಮೆರೆದು ಪಶ್ಚಾತ್ತಾಪ ಪಡದಿರು
ಬುದ್ದನಾಗುವೆ ನಾ ಬುದ್ದನಾಗುವೆ

ಚಿನ್ನರಾಜ ಮೇಟ್ರಿ


ನೇಸರ

ಹೊಂಗಿರಣವ ಸೂಸುತ್ತ
ರವಿ ಮೂಡಿಬಂದ
ಬಂಗಾರದ ಬಣ್ಣವನ್ನು
ಭೂಮಿಗೆಲ್ಲ ತಂದ

ತೆಂಗು ಹೊಂಗೆಯ ಮಧ್ಯೆ
ನೀಲ್ಗಿರಣವ ಚಾಚಿ
ವಾರಿಧಿಯ ಅಲೆ ಮೇಲೆ
ಬೆಳಕನ್ನು ರಾಚಿ

ಬಾನಾಡಿಗಳು ಸಾಲಿಡಿದು
ಹಾರಾಡುತ್ತಿವೆ ಹಾಡುತ
ಗುಟುಕು ಅರಸಿ ಸಾಗಿವೆ
ಬಹುದೂರಕ್ಕೆ ಹಾರುತ

ಉದಯಿಸಿದ ಭಾಸ್ಕರನಿಂದ
ಭೂಮಿಗೆಲ್ಲ ಬೆಳಕು
ನಲ್ಮೆಯ ಇನಿಯ ನಿಂದ
ಪರಿಪೂರ್ಣ ಬದುಕು

ಶ್ರೀಮತಿ ಮಾಲಾಶ್ರೀಧರ
ಶಿಕ್ಷಕಿ, ಗಂಗಾವತಿ


ಹೆಣ್ಣೆಂದು ಬೇಸರವೇಕೆ ?

ಗರ್ಭದಿಂದ ಹೊರ ಬಂದರೆ
ನನಗೆ ಅಮ್ಮ

ವಾತ್ಸಲ್ಯದ ಪ್ರೀತಿ ತೋರಿದರೆ
ನನಗೆ ತಂಗಿ

ಪೂಜ್ಯ ಸ್ಥಾನದ ಆಶೀರ್ವದಿಸಿದರೆ
ನನಗೆ ಅಕ್ಕ

ಒಮ್ಮೆ ಕಂಡೊಡನೆ ಪ್ರೇಮವಾದರೆ
ನನಗೆ ಪ್ರೇಯಸಿ

ಬದುಕಿನ ಬಂಡಿಗೆ ಜೋಡಿಯಾದರೆ
ನನಗೆ ಪತ್ನಿ

ಮನೆಗೊಬ್ಬ ಅಳಿಯ ಬಂದರೆ
ನನಗೆ ಮಗಳು

ಭ್ರೂಣಹತ್ಯ ಮಾಡಬೇಡಿ
ಬದುಕಲು ಅವಕಾಶ ಕೊಡಿ

ರಾಜಪ್ಪ ಎ ಕೆ


ಕವಿತೆ

ಕಾವ್ಯ ಕಲರವ ಗಂಗಾವತಿ
ಸುಗ್ಗಿಯ ಹಿಗ್ಗು

ನೇಗಿಲ ಕೂರಗಿ ತೆಗೆದುಕೊಂಡು
ಕಾಳು ಕಡಿ ತುಂಬಿಕೊಂಡು
ಎತ್ತಿನಗಾಡಿಯ ಹೊಡಕೊಂಡು
ಹೊಲಕ್ಕ ಹೂಗೊನು ಕೂಡಿಕೊಂಡು

ಕೂರಿಗಿ ಸಡ್ಡಿ ಬಿಗಿಬೇಕು
ನೇಗಿಲಸಾಲ ಹೊಡಿಬೇಕು
ಹದಗಿದನಾಗಿ ಕಾಳು ಬಿತ್ತಬೇಕು
ಹಿಂದಿಂದ ಒಬ್ಬರು ಗೊಬ್ಬರ ಹಾಕಬೇಕು

ಮಳಿರಾಯನ ನೆನಿಬೇಕು
ಕಳೆ ಗಿಳೆ ತೆಗಿಬೇಕು
ಹಕ್ಕಿಪಿಕ್ಕಿ ಕಾಯಬೇಕು
ಬೆಳಿ ಸೊಬಗ ನಾವ ಸವಿಬೇಕು

ಹಂತಿಗಿಂತಿ ಕಟ್ಟಬೇಕು
ಬೆಳಿಗಿಳಿ ಕೊಯ್ದು ಒಟ್ಟಬೇಕು
ರಾಶಿಯ ಮಾಡಿ ನಲಿಬೇಕು
ರೈತನಿಗೆ ಜೈ ಜೈ ಅನ್ನಬೇಕು.

ಲಲಿತಾ ಮ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.
ಹಲಗಾ ಬೆಳಗಾವಿ


ಭಾವಗೀತೆ

ನಾನೀಗ ಸಾಲಗಾರ

ನನ್ನೆಲ್ಲ ಕ್ಷಣಗಳನು ನಿನಗಾಗಿ ಮುಡಿಪಿಟ್ಟ
ನಾನೀಗ ಸಾಲಗಾರ॥ಪ॥
ಸುಸ್ತಿ ಬಡ್ಡಿಯ ಭಾರ ಭಾವನೆಗಳ ಹುನ್ನಾರ
ನಾನೀಗ ಸುಸ್ತಿದಾರ॥ಅ.ಪ॥

ಹಾಲ್ದಿಂಗಳ ಕಿರಣಗಳು ನಿತ್ಯ ಎದೆಗಿರಿದಿವೆ
ವೇದನೆಗೆ ಸಾಲದಾಯ್ತು ವೇಳೆ।
ಬಾನ ನೀಲಿಮವು ನೀರಾಗಿ ಸೋರಿದಂತೆ
ಸಹಿಸದಾದೆ ಅಗಲಿಕೆಯ ನಾಳೆ॥೧॥

ಪಲ್ಲವಿಸಿವೆ ತರುಗೊರಳ ತಬ್ಬಿದ ಪರ್ಣ
ಅವಳ ತುಟಿ ಅಲುಗಿದ ಹಾಗೆ।
ಮೇಳೈಸಿದೆ ತಂಗಾಳಿ ತೀಡುತ್ತ ಗಂಧವ
ಮಳೆಬಿಲ್ಲ ಬಣ್ಣ ಹಿಡಿವ ಬೇಗೆ॥೨॥

ಸಾವಿರದ ವಸಂತಗಳಿಗೂ ಸೋಲಾಗಿದೆ
ಪ್ರಭಾವಿಸದೆ ಮೌನವ ತಾಳಿದೆ।
ಚಿಗುರುಲಿವ ಚೈತ್ರಗಳಿಗೂ ದಣಿವಾಗಿದೆ
ಒಲವಿನ ತುಡಿತವ ಅರಿಯದೆ॥೩॥

ಸುರಿದೆಲ್ಲ ಸ್ವಾತಿ ಹನಿಗಳು ಮುತ್ತಾಗವು।
ಬೆರೆತೆಲ್ಲ ಒಲವ ಮನಗಳು ಒಂದಾಗವು॥

ಶಂಕರ ಹರಟಿ

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group