ಇದು ಇಂದು ಅನಿವಾರ್ಯವಾಗಿ ಗೃಹಬಂಧಿಗಳಾದ ಗಂಡಸರ ಗೋಳಿನ ಕವಿತೆ. ಅಜ್ಞಾತವಾಸದ ಅಳಲಿನ ಕಥೆ. Just for fun. ಕೇವಲ ನಗಿಸಲಿಕ್ಕಾಗಿ ಅಷ್ಟೆ. ಇಲ್ಲಿ ವಿನೋದವಿದೆ. ವ್ಯಂಗ್ಯ, ವಿಡಂಬನೆಗಳೊಟ್ಟಿಗೆ ವಾಸ್ತವವೂ ಇದೆ. ಆದರೂ ಏನೇ ಆಗಲಿ.
ಗಂಡಸರೇ ಮನೆಯೊಳಗೇ ಇರಿ. ಆಚೆ ಬಂದು ಕೊರೋನಾ ಬಾಧೆಯಿಂದ ನರಳುವುದಕ್ಕಿಂತ ಹೆಂಡತಿ ಕೈಯ್ಯಲ್ಲಿ ಬೈಸಿಕೊಳ್ಳುವುದೇ ಭೇಷು. ನಿತ್ಯ ಪಾತ್ರೆ ತೊಳೆದುಕೊಟ್ಟು, ತರಕಾರಿ ಹೆಚ್ಚಿ ಪಡೆಯಬೇಕು ಶಹಭಾಷು. ಏನಂತೀರಾ.?” –
ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ
ಗಂಡಸರ ಗೋಳು..!
ಇದೇನು ಲಾಕು ಡೌನೋ ಏನೋ..
ಗಂಡಸರ ಜೀವನ ಬ್ರೇಕ್ ಡೌನು
ನರಕ ಆಗೋಯ್ತೋ ಗೋವಿಂದಾ
ಮನೆ ಒಳಗಿದ್ರೆ ಆ ಟಿವಿನೋರು
ನಿಮಿಷಕ್ಕೊಂದು ಹೆಣ ತೋರಿಸಿ
ಗಾಬರಿ ಹುಟ್ಟಿಸಿ ಹೆದರಿಸ್ತಾರೆ.!
ಆಚೆಬಂದು ರೋಡಿಗಿಳಿದ್ರೆ ಸಾಕು
ಪೊಲೀಸ್ನೋರು ಲಾಠಿ ಬೀಸಿ
ಮೈಮ್ಯಾಗೆ ಬಾಸುಂಡೆ ಎಬ್ಬಿಸ್ತಾರೆ.!
ಬೆಚ್ಚಗೆ ಹೊದ್ದು ಮಲಗಿಕೊಂಡ್ರೆ
ಕೆಲಸಿಲ್ಲ ಕಾರ್ಯವಿಲ್ಲ ಬಿದ್ಕೊಂಡ
ಅಂತ ಮನೆಮಕ್ಕಳೇ ಆಡ್ಕೊತಾರೆ.!
ಎದ್ದುಕೂತು ಕಾಪಿ ಕೇಳಿದ್ರೆ ಸಾಕು
ಕಾಫಿ ಬೇರೆ ಕೇಡು ದಂಡಪಿಂಡಕ್ಕೆ
ಹೆಂಡತಿ ಮುಖ ತಿರಿಗಿಸ್ಕೊತಾಳೆ.!
ಹಾಳಾದ್ದು ಕಣ್ಗೂಕಾಣದ ವೈರಸ್ಸು
ಆಡಿಸ್ತಾ ಐತೆ ನೂರೆಂಟು ಸರ್ಕಸ್ಸು
ಯಾರಿಗೆ ಹೇಳೋದು ನಮ್ಮ ಸ್ಟ್ರೆಸ್ಸು.!
ಮುಗಿಯುವಷ್ಟರಲ್ಲಿ ಈ ಲಾಕೌಟು
ಗಂಡುಗಳ ಪಾಡಾಗ್ತದೆ ನಗೆಪಾಟು
ತನುಮನಗಳೆಲ್ಲ ಟೋಟ್ಲಿ ಶೇಪೌಟು.!
ಎ.ಎನ್.ರಮೇಶ್. ಗುಬ್ಬಿ.