ಗೌರಿಗೆ ಮಾನಸಪೂಜೆ
ಭಕ್ತಿಯಿಂದಲಿ ನಿನ್ನ ಮಾನಸ ಪೂಜೆ ಮಾಡುವೆ
ಬಾ ಗೌರಿ ಹೃದಯ ಮಂದಿರದ ಬಂಗಾರ ಹಸೆಗೀಗ
ಎಣ್ಣೆಯ ಹೆಚ್ಚಿ ಪನ್ನೀರಿನಿಂದೆರೆದು
ಮೃದು ವಸ್ತ್ರದಿಂವರೆಸಿ
ರೇಶಿಮೆ ಸೀರೆ ಉಡಿಸಿ ಕುಪ್ಪುಸ ತೊಡಿಸಿ
ಸುರುಳಿ ಗರುಳ ತೀಡಿ ತುರುಬು ಕಟ್ಟಿ ಬಂಗಾರದ ಕೇದಿಗೆ ಜಾಜಿ ಮಲ್ಲಿಗೆ ಮಾಲೆ ಮುಡಿಸಿ ವಜ್ರದಹರಳಿನ ಓಲೆ ಮುಖರು ಲೋಲಾಕು
ತೊಡಿಸುವೆ ಪಾರ್ವತಿಯೇ
ತೋಳಿಗೆ ತೋಳಬಂದಿ ನಾಗರವಂಕಿ ನಡುವಿಗೆ ವಡ್ಯಾಣ ತೊಡಿಸುವೆ ಶಾಂಭವವಿಯೇ
ಕೈಗೆ ಹಸಿರು ಕಾಜಿನ ಬಳೆ ಚಿನ್ನದ ತೋಡೆಗಳಿಂದ ಕಂಕಣ ಬಳೆ ಮುತ್ತು ಮಾಣಿಕ್ಯ ವಜ್ರದ ಬಳೆಗಳ ತೊಡಿಸುವೆ ಶಂಕರಿಯೇ
ಕೊರಳಿಗೆ ನಿನ್ನ ಕಂಬುಕಂಠದ ತಾಳಿಯ ಮೇಲೆ
ಚಿನ್ನದ ಅವಲಕ್ಕಿ ಸರ ಮೋಹನ ಮಾಲೆ ಸರ
ಸೌಭಾಗ್ಯದ ಲಕ್ಷ್ಮೀ ಟಿಕ್ಕೆ ಕಟ್ಟಾಣಿ ಸರ ಮೇಲೆ ಕಾಸಿನ ಸರಗಳಿಂದ ಅಲಂಕರಿಸುವೆ
ಮಹಾದೇವಿ ಯೇ
ಕ್ಷೀರಾನ್ನ ಚಿತ್ರಾನ್ನ ಬುರಬೂರಿ ಶೆಕೆದುಂಡಿ
ಪರಪರಿ ಭಾತುಗಳು ಶಾವೀಗಿ ಪಾಯಸ ಹೋಳಿಗೆ ಪಂಚ ಭಕ್ಷ್ಯ ಪರಮಾನ್ನಗಳು ಚಿನ್ನದ ಹರಿವಾಣದಿ
ನೈವೇದ್ಯ ಬಡಿಸಿರಲು ಪತಿ ಸಹಿತಾಗಿ ಉಂಡು
ತೃಪ್ತಳಾಗೇ ಮಂಗಳಾಂಗೆ
ಬೆಳ್ಳಿ ತಟ್ಟೆ ಮೇಲಿಟ್ಟು ತಾಂಬುಲವ ಸವಿದು
ಸುಪ್ಪತ್ತಿಗೆಯಲಿ ಮಲಗಿಸಿ ಲಾಲಿ ಹಾಡುವೆನೆ ಮಂಗಳಗೌರಿ ಪ್ರಾಥಿ೯ಪೆನೆ
ಸಂತತಿ ಸಂಪತ್ತು ದೌಲತ್ತು ಸೌಭಾಗ್ಯಗಳ ಸಕಲರಿಗೆ ವರನೀಡಿ ನಿನ್ನರಸ ಕುವರರ ಸಹಿತಾಗಿ ನೆಲೆ ನಿಲ್ಲು ನೀ ಮಂಗಳ ಗೌರಿಯೇ.
(ಶ್ರದ್ಧೆಯಲಿ ಈ ಹಾಡು ಹೇಳಿ ಕೊಳ್ಳಿ ಮಂಗಳಗೌರಿ ಪ್ರಸನ್ನ ಮಾಡುವಳು)
ರಾಧಾ ಶಾಮರಾವ
ಧಾರವಾಡ