ಡಾ. ಭೇರ್ಯ ರಾಮಕುಮಾರ್ ಕವನಗಳು

Must Read

ಯಮರಾಜನಿಗೊಂದು ಮನವಿ

ಓ ಯಮ ದೇವ,
ಒಳ್ಳೆಯವರ ಮೇಲೇಕೆ
ನಿನ್ನ ಕಣ್ಣು ?
ಮಾನವ ಪ್ರಪಂಚಕ್ಕೆ
ಒಳ್ಳೆಯತನ,ಒಳ್ಳೆಯ ಜನ
ಅನುದಿನ ಬೇಕಾಗಿದೆ !!
ದಯೆ ತೋರು
ಮೃತ್ಯುದೇವ.

ಸಮಾಜಕೆ ದಾರಿದೀಪವಾದ
ಹಿರಿಯ ನಾಗರೀಕರು,
ಸಾಹಿತ್ಯ, ಸಂಗೀತವನ್ನೇ
ಉಸಿರಾಡುತ್ತಾ
ಸಮಾಜಕ್ಕೆ ದಾರಿತೋರುತ್ತಿರುವ
ಸಾಧಕರು,
ದೀನದುರ್ಬಲರ ಅಭ್ಯುದಯಕೆ
ದುಡಿಯುತ್ತಿರುವ
ನಿಸ್ವಾರ್ಥ ಜೀವಿಗಳ ಮೇಲೇಕೆ
ನಿನಗೆ ಕೆಂಗಣ್ಣು ???

ನಿನ್ನ ಹಿಂದೆ ಬಿದ್ದು,ರೋಧಿಸಿದ
ಸಾವಿತ್ರಿಯ ಕಣ್ಣೀರಿಗೆ ಕರಗಿ
ಪತಿ ಸತ್ಯವಾನನಿಗೆ
ಜೀವದಾನ ಮಾಡಿದ
ಮಹಾಪುರುಷ ನೀನು….

ನೂರಾರು ವೃದ್ಧರ,ಅಸಹಾಯಕರ,
ಗೃಹಿಣಿಯರ ,ಅನಾಥಮಕ್ಕಳ
ಕಣ್ಣೀರ ಕೋಡಿ ಹರಿದಿದೆ..
ನಿತ್ಯ……ನಿರಂತರ….

ಓ ಯಮರಾಜ,
ಅನಾಥ ಮಕ್ಕಳ,
ಮಹಿಳೆಯರ,ವೃದ್ಧರ,
ಅಂಗವಿಕಲರ
ಕಣ್ಣೀರಿನ ಕಥೆಯನ್ನೊಮ್ಮೆ ನೋಡು,
ಓ ಲೋಕ ನಿರ್ಣಾಯಕನೆ
ನಿನ್ನ ಕೆಲಸಕೆ
ಸ್ವಲ್ಪ ದಿನ
ರಜಾ ಮಾಡಿಬಿಡು,
ಸಮಾಜದಲಿ
ನಡೆದಿರುವ
ಕಣ್ಣೀರ ಕಥೆಗಳಿಗೆ
ಮಂಗಳ ಹಾಡಿಬಿಡು


ದೈವ ಸ್ವರೂಪಿ

ಎಲ್ಲರ ಪ್ರಾಣ ಉಳಿಸುವ ಓ ವೈದ್ಯ,
ನೀ ದೇವರ ಪ್ರತಿರೂಪ,
ನಿನಗಿರುವ ತಾಳ್ಮೆ,ಸಹನಶೀಲ ಗುಣ,
ರೋಗಿಗಳ ಬಗೆಗಿನ ನಿಷ್ಕಲ್ಮಶ ಪ್ರೀತಿ,
ಇಡೀ ಜಗತ್ತಿಗೇ ಮಾದರಿ…

ನಿನ್ನದು ಸೇವಾ ಮನೋಬಾವ,
ನಿನ್ನುಸಿರು ಸಮಾಜದ ಆರೋಗ್ಯ,
ಜಾತಿ,ಮತ,ಧರ್ಮಗಳ‌ ಮೀರಿ ನಿಂತ,
ನೀ ಆಧುನಿಕ ಬ್ರಹ್ಮ..

ನಿನಗೂ ಕುಟುಂಬವಿದೆ,
ತಂದೆ-ತಾಯಿ,ಪತ್ನಿ ,ಮಕ್ಕಳು
ಎಲ್ಲ ರ ಮರೆತು ರೋಗಿಗಳ ರಕ್ಷಿಸಲು
ಅನವರತ ಹೋರಾಟ ನಡೆಸುತಿರುವ
ನೀ ತ್ಯಾಗಮಯಿ.

ನಿನ್ನ ವೈಯಕ್ತಿಕ ಕುಟುಂಬ,ಬದುಕು
ಎಲ್ಲವ ತ್ಯಾಗ ಮಾಡಿ
ಸಮಾಜದ‌ ಎಲ್ಲರ ಆರೋಗ್ಯ ಕಾಗಿ
ದಿನರಾತ್ರಿ ಶ್ರಮಪಡುವ
ನೀ ಮಹಾಭಾರತದ ಕರ್ಣನ ಪ್ರತಿರೂಪ !!!!

ನಿನ್ನಲೊಂದು ಮಾತೃ ಹೃದಯವಿದೆ,
ನೋವು-ನಲಿವುಗಳಿಗೆ ಮಿಡಿಯುವ
ನಿಸ್ವಾರ್ಥ ಚಿಂತನೆಯಿದೆ,
ರೋಗಿಗಳ ಸಾವು-ನೋವಿನಿಂದ ಉಳಿಸಿ,
ಸಂತಸಪಡುವ ಹೃದಯ ವೈಶಾಲ್ಯತೆಯಿದೆ.

ಓ ವೈದ್ಯ,ನೀ ಆಧುನಿಕ
ಬ್ರಹ್ಮ ಚೈತನ್ಯ,
ನಿನಗಿದೋ
ಕೋಟಿ ನಮನ


ಡಾ.ಭೇರ್ಯ‌ರಾಮಕುಮಾರ್,
ಸಾಹಿತಿಗಳು,ಪತ್ರಕರ್ತರು
ಮೊ:94496 80583
63631 72368

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group