spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ವಚನ ಭಂಡಾರಿ ಶಾಂತರಸ

12ನೇ ಶತಮಾನದ ಶಿವಶರಣರ ಸಮಕಾಲೀನರು ವಚನ ಭಂಡಾರಿ ಶಾಂತರಸರು. ಇವರ ಪರಿಚಯ ದೊರೆತಿಲ್ಲ ಇವರು ಅನುಭವ ಮಂಟಪದಲ್ಲಿ ಮಾಡಿರುವ ಕಾರ್ಯಗಳು ಮಾತ್ರ ಪ್ರಮುಖವಾಗಿದ್ದವೆಂದು ಹೇಳಬಹುದು. ಇವರದೊಂದು ವಚನದ ಮುಖಾಂತರ ಇವರ ಪರಿಚಯ ತಿಳಿದುಕೊಳ್ಳಬಹುದು.

ಇನ್ನೆಲ್ಲರ ಕೇಳುವದು ಕುಲ ಛಲ ಮಲ ದೈಹಿಕರು ಬಿಡನೆನ್ನ
ಎದೆಯಲ್ಲಿ ಕಟ್ಟಿದ ಎಳೆ ಆಶಯ ಬಿಡದು
ಕೊಡುವಲ್ಲಿ ಕೊಂಬಲ್ಲಿ ದ್ವಿಜರೊಡಗೂಡುವದು ಬಿಡದು
ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಆಡಿ ಇಡಲಮ್ಮದೇ ಕಟ್ಟಿದೆ

- Advertisement -

ಇದರಿಂದ ಶಾಂತರಸರು ಮೊದಲು ಬ್ರಾಹ್ಮನನಾಗಿದ್ದು ಕಂಡುಬರುತ್ತದೆ ಪ್ರಧಾನಮಂತ್ರಿಗಳಾದ ಬಸವಣ್ಣನವರ ಮಾತನ್ನು ಮೀರಲಾರದೆ ಲಿಂಗಾಯತ ಧರ್ಮ ಸ್ವೀಕರಿಸುತ್ತಾರೆ ಚನ್ನಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆಯುತ್ತಾರೆ. ನಂತರ ಇವರು ಕೂಡ ವಚನ ರಚನೆ ಮಾಡಿರುವರು ಇವರ ಒಟ್ಟು 65 ವಚನಗಳು ಸದ್ಯ ಉಪಲಬ್ಧವಿವೆ ಇವರ ವಚನದ ಅಂಕಿತನಾಮ “ಅಲೇಖನಾದ ಶೂನ್ಯ ಕಲ್ಲಿನೊಳಗಾದ” ಎಂದಿರುವದು ಇವರ ಅಂಕಿತನಾಮ ಅಭ್ಯಾಸ ಮಾಡುವವರನ್ನು ಚಿಂತನೆಗೆ ತೊಡಗಿಸುತ್ತದೆ ಕಲ್ಲಿನೊಳಗಾದವನೇ, ಕಲ್ಲಿನೊಳಗಾದ, ಕಲ್ಲಿನಾಥ ಹೀಗೆ ಕಲ್ಲು ಅವರ ವಚನಗಳ ಅವಿಭಾಜ್ಯ ಅಂಗವಾಗಿ ಹರಿದು ಬಂದಿರುತ್ತದೆ ವಿರುದ್ಧ ಅಂಶಗಳನ್ನು ಹೋಲಿಸುತ್ತಾ ತತ್ವ ನಿರೂಪಣೆ ಮಾಡುವ ಶಾಂತರಸರ ಕೌಶಲ್ಯ ಪ್ರಬಲವಾದದು.

ಅನುಭವ ಮಂಟಪದಲ್ಲಿಯ ಎಲ್ಲ ಶರಣರು ಬರೆದ ವಚನಗಳನ್ನು ಮೊದಲು ಬಸವಣ್ಣನವರಿಗೆ ಓದಲು ಕೊಡುತ್ತಿದ್ದರು ಸುಪ್ರಭಾತ ಸಮಯದಲ್ಲಿ ಶಿವಾನುಭವ ಗೋಷ್ಠಿಯಲ್ಲಿ ಎಲ್ಲರ ಎದುರಿಗೆ ಚನ್ನಬಸಣ್ಣವರು ಪ್ರವಚನ ಮಾಡಿ ಎಲ್ಲ ಶರಣರಿಗೆ ವಿವರಿಸಿ ಹೇಳುತ್ತಿದ್ದರು ಅನುಭವ ಮಂಟಪದಲ್ಲಿ ಚೆನ್ನಾಗಿ ಮಥಿಸಲ್ಪಟ್ಟು ಬಸವ ಚೆನ್ನಬಸವ ಅಲ್ಲಮ ಪ್ರಭುದೇವರು ಮುಖ್ಯ ಪ್ರಮಥರಿಂದ ಒಪ್ಪಿಗೆಯಾದ ನಂತರ ವಚನ ಭಂಡಾರಿ ಶಾಂತರಸರು ವಚನ ಭಂಡಾರದಲ್ಲಿ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಜೋಡಿಸಿ ಇಡುತ್ತಿದ್ದರು ಇವರು ಕೇವಲ ವಚನ ಭಂಡಾರಿಯಾಗದೆ ಕಲ್ಯಾಣ ಕ್ರಾಂತಿಯಲ್ಲಿಯೂ ಕೂಡ ಇವರ ಪ್ರಮುಖ ಪಾತ್ರವಿತ್ತು

ಶರಣರ ವಚನ ಹಾಗೂ ಶಾಂತರಸರ ಕಾಯಕದಿಂದ ನಮಗಷ್ಟೇ ಅಲ್ಲ ಇಡೀ ಜಗತ್ತಿಗೆ ತಾಡದೋಲೆಯಲ್ಲಿ ಬರೆದಿರುವ ಈ ವಚನ ಸಾಹಿತ್ಯ ಲಭ್ಯವಾಯಿತು ಈ ವಚನ ಕಟ್ಟುಗಳನ್ನು ತೆಗೆದುಕೊಂಡು ಚರ ಜಂಗಮರು ಜಗದಾದ್ಯಂತ ಬಸವ ಪ್ರಚಾರ ಮಾಡಿದರು ಈ ಎಲ್ಲ ಕಾರ್ಯಕ್ಕೂ ಚನ್ನಬಸವಣ್ಣ ಅವರ ಮಾರ್ಗದರ್ಶನ ಹಾಗೂ ಸಹಕಾರವಿತ್ತು ಓದುವ ಗ್ರಂಥಾಲಯವಿದ್ದ ಹಾಗೆ ಅಧ್ಯಯನ ಮಾಡುವವರಿಗೆ ಓದಲು ಕೊಡುತ್ತಿದ್ದರು ಶಿವ ಶರಣರು ತಮ್ಮ ಅವಲೋಕನಕ್ಕೆ ಬೇಕಾದರೆ ಅಂತಹ ವಚನಗಳನ್ನು ಪ್ರತಿ ಮಾಡಿ ಒದಗಿಸುತ್ತಿದ್ದರು ಅಂದರೆ ಇಂದಿನ ಮುದ್ರಣಾಲಯಗಳು ಹಾಗೂ ಗ್ರಂಥ ಪಾಲಕರು ಆಗಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಫ ಗು ಹಳಕಟ್ಟಿ ಅವರು ಪ್ರಕಟಿಸಿರುವ ಕಾಲಜ್ಞಾನದ ವಚನಗಳು ಗ್ರಂಥದಲ್ಲಿ ಅನೇಕ ಉಲ್ಲೇಖಗಳು ಸಿಗುತ್ತವೆ ಒಂದೆರಡು ನೋಡೋಣ

- Advertisement -

ನಮ್ಮ ಶಿವಶರಣರು ಮರ್ತ್ಯಕ್ಕೆ ಬಂದು ವಚನಗಳ ಹಾಡಿ ಹಾಡಿ ಕೊಂಡಾಡಿದರಯ್ಯಾ.
ಪ್ರಭುದೇವರು ಹಾಗೂ ಪ್ರಮುಖರಾದ 220 ಅಮರ ಗಣoಗಳು ತಮ್ಮ ವಚನ ನಿಕ್ಷೇಪಿಸಿದರಯ್ಯಾ.
ನೀವು ಬಾಹಂದಿ ನಿಮ್ಮ ವಚನ ಭಂಡಾರದಲ್ಲಿಹ ವಚನಗಳು ತೆಗೆದು ಅವು ಮರ್ತ್ಯದಲ್ಲಿ ಹರಿದಾವು
ದಿಕ್ಕು ದಿಕ್ಕಿದಲ್ಲಿ ಕೊಂಡಾಡಿಕೊಂಡು ಮೆರೆದಾವು
ಪುರಾತನರ ವಚನ ಭಂಡಾರವು ತೆಗೆದೋದಿಸುವ ಆಕಾಲ ಈಗಲೇ ಬಂದಿದೆ ನಮ್ಮ ಆಧ್ಯರ ವಚನ ಭಂಡಾರವನ್ನು ಪ್ರಭುದೇವ ಮೊದಲಾದ ಅಸಂಖ್ಯಾತ ಪುರಾತನರು ಹೇಳಿ ಕೇಳಿ ಕೊಂಡಾಡಿದರು 12ನೇ ಶತಮಾನದಿಂದಲೇ ವಚನ ಭಂಡಾರವೆಂಬ ಸಂಸ್ಥೆಯ ಐತಿಹಾಸಿಕವೂ ಆಯಿತು ಶಾಂತರಸರಿಗೆ ವಚನ ಭಂಡಾರಿ ಎಂಬ ನಾಮವು ಪ್ರಖ್ಯಾತವಾಯಿತು ಈ ಸಿದ್ಧಾಂತದಿಂದ ಭಾರತದಲ್ಲಿ ಇದು ಪ್ರಪ್ರಥಮ ಸಾರ್ವಜನಿಕ ಗ್ರಂಥ ಭಂಡಾರವೆನ್ನಬಹುದು.

ವಚನ ವಿಶ್ಲೇಷಣೆ

ಧ್ಯಾನವ ಮಾಡಿ ಕಾಬಲ್ಲಿ ಚಿತ್ತ ಪ್ರಕೃತಿಯ ಗೊತ್ತು
ಕುರು ಹಿಡಿದು ಕಂಡೆಹೆನೆಂದರೆ ಅದು ಶಿಲೆ, ಉಳಿಯ ಹಂಗು
ಕೊಟ್ಟವನ ಹಿಡಿದಿಹೆನೆಂದರೆ ಗುತ್ತಿಗೆಯ ಕೇಣಿಕಾರ
ಮಾಡಿ ನೀಡಿ ಕಂಡೆಹೆನಂದಡೆ ನನ್ನ ಮನೆಗೆ
ಬಂದವರೆಲ್ಲರೂ ಉಂಡು ಉಟ್ಟು ಎನ್ನ ಹಂಗಿಗರು
ಆಗರಗಳ್ಳನ ಹಾದರಿಗ ಕಂಡಂತೆ ಇನ್ನಾರಿಗೆ ಹೇಳುವರು ಆ ಘನವ?ಅದು ಎನಗಾಯಿತ್ತು
ಅಲೇಖನಾದ ಶೂನ್ಯಕಲ್ಲಿನ ಮರೆಯಾದವನೇ.

ಧ್ಯಾನವ ಮಾಡಿ ಕಾಣುವೇನೆಂದರೆ ಚಿತ್ತ ಪರಾತ್ಪರ ವಸ್ತುವಿನಿಂದಲೇ ಉದಯವಾಗಿರುವುದರಿಂದ ಪ್ರಕೃತಿಯ ಹಂಗಿಗೆ ಒಳಗಾಗಿದೆ ಇನ್ನು ಕುರುಹು ಹಿಡಿದು ಕಾಣುವೆನೆಂದರೆ ಆ ಶಿಲೆಯ ಉಳಿಯ ಹಂಗು ಕೊಟ್ಟವನೇ ಹಿಡಿದು ಕೇಳುವನೆಂದರೆ ಅವನು ಗುತ್ತಿಗೆದಾರ ಕಲ್ಲು ಕುಟಿಗ ಕಟೆದು ಕೊಟ್ಟವನು ಇವನು ಮಾರಿಕೊಂಡು ಬರುತ್ತಿರುವನು ಇನ್ನೂ ಮಾಡಿ ನೀಡಿ ಉಣಿಸಿ ಉಡಿಸಿ ಕಾಣುವೇನೆಂದರೆ ಅವರೆಲ್ಲರೂ ನನ್ನ ಹಂಗಿನಲ್ಲಿರುವವರು ಹಗಲುಗಳ್ಳನ ಕಂಡಂತೆ ಇನ್ನಾರಿಗೆ ಹೇಳಬೇಕು ಆ ಘನದ ಬಿನ್ನಾಣವ? ಆ ಪರಶಿವನ ಕಾಣುವ ಬಗೆಯಾದರೂ ಹೇಗೆ? ಹಗಲು ಕಳ್ಳತನ ಮಾಡುವವ ಹಾಗೂ ಹಾದರ ಮಾಡುವವ ಇವರಿರ್ವರಿಗೆ ಗೆಳೆತನ ವಾದಲ್ಲಿ ತಪ್ಪೇನಿಲ್ಲ ಇಬ್ಬರೂ ಕಳ್ಳರೇ ಹೀಗಿರುವಾಗ ಘನವನ್ನು ಇನ್ನಾರಿಗೆ ಹೇಳಲು ಸಾಧ್ಯ ಈ ರೀತಿಯ ತೊಡಕಿನ ವಿಧಿ ಎನಗಾಯಿತ್ತು ಅಲೇಖನಾದ ಶೂನ್ಯ ಕಲ್ಲಿನಲ್ಲಿ ಮರೆಯಾದವನೆ ಎಂದು ದೃಷ್ಟಾಂತವನ್ನು ಕೊಟ್ಟು ಉದಾಹರಿಸುತ್ತ ಯಾವ ವಸ್ತುವನ್ನು ಯಾವುದೇ ರೀತಿಯಲ್ಲಿ ಬರೆಯಲಿಕ್ಕಾಗದೆ ಶೂನ್ಯ ಕಲ್ಲಿನ ಮಧ್ಯದಲ್ಲಿದ್ದವನನ್ನು ತಿಳಿಯಲು ಸಾಧ್ಯವಾಯಿತು ಎಂದು ವಚನ ಭಂಡಾರಿ ಶಾಂತರಸರು ಹೇಳುತ್ತಾರೆ ಕುರುಹು ಹಿಡಿದು ಕಾಣುವೆನೆಂದರೆ ಅದು ಶಿಲೆ ಅದು ಉಳಿಯಹಂಗು ಎಂಬ ವಾಕ್ಯದಲ್ಲಿ ಕುರುಹು ಶಿಲೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆಂದು ಹೇಳಬಹುದು

ಶಾಂತಾದೇವಿ ಸಿದ್ದೇಶ್ವರ ದುಲಂಗೆ,                    ಸೋಲಾಪುರ

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group