ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ನ ರಾಜ್ಯ ಸಮ್ಮೇಳನ
ಮೈಸೂರು: ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಹಂತದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರ ಸಂಘಟನೆಯಾಗಿರುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್(ರಿ),ಮೈಸೂರು ತನ್ನ “ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ-2022”
ವನ್ನು 24 ಜುಲೈ 2022 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಉದ್ದಾನೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ನಾಡಿನ ಪ್ರತಿಯೊಂದು ಜಿಲ್ಲೆ-ತಾಲೂಕುಗಳಿಂದ ಸಾವಿರಾರು ಶಿಕ್ಷಕರು ಭಾಗವಹಿಸಿದ್ದು, ಅವಿಸ್ಮರಣೀಯವಾಗಿದೆ.
ನಾಡಿನಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸುವದು ಪುಣ್ಯದ ಕೆಲಸ. ಅವರಲ್ಲಿಯ ಪ್ರತಿಭೆಗೆ ರಾಜ್ಯ ಮಟ್ಟದಲ್ಲಿ ಅನೇಕ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಈ ಪವಿತ್ರ ಭೂಮಿಯಲ್ಲಿ ವಿಜೇತರೆಲ್ಲರಿಗೂ ಒಂದು ಲಕ್ಷದ ಎಂಬತ್ತು ಸಾವಿರದಷ್ಟು ಹಣವನ್ನು ಬಹುಮಾನದ ರೂಪದಲ್ಲಿ ನೀಡುತ್ತಿರುವದು ಇಡೀ ರಾಜ್ಯದಲ್ಲಿಯೇ ಇದೇ ಮೊಟ್ಟಮೊದಲು ಆಗಿದೆ.
ಅಂತಹ ಅಮೋಘ ಕಾರ್ಯದಲ್ಲಿ ಸದ್ದಿಲ್ಲದೇ ತನ್ನನ್ನು ತಾನು ತೊಡಗಿಸಿಕೊಂಡ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ನಿಜಕ್ಕೂ ಶಿಕ್ಷಕರ ಪಾಲಿಗೆ ವರದಾಯಕವಾಗಿದೆ.
ಡಾ.ಎಸ್ ರಾಧಾಕೃಷ್ಣನ್ ಪ್ರಶಸ್ತಿ, ಶಿಕ್ಷಣ ಚೇತನ ಪ್ರಶಸ್ತಿ, ಗುರು ಪುರಸ್ಕಾರ, ಗುರು ಶ್ರೇಷ್ಠ ಪ್ರಶಸ್ತಿ ಪುರಸ್ಕಾರ, ಜನಸೇವಾ ರತ್ನ ಪ್ರಶಸ್ತಿ, ಶಿಕ್ಷಣ ಸಾರಥಿ ಪ್ರಶಸ್ತಿ- ಎಂಬ ಅನೇಕ ಬಗೆಯ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನಾಡಿನ 200 ಕ್ಕೂ ಅಧಿಕ ವಿವಿಧ ಸಾಧಕರಿಗೆ ನೀಡಿ ಗೌರವಿಸಲಾಯಿತು.ಹಿತ್ತಲಹಳ್ಳಿ ಮಠದ ಪೀಠಧ್ಯಕ್ಷರಾದ ಷ. ಬ್ರ..ಶ್ರೀ ಶ್ರೀ ಶ್ರೀ ಡಾ.. ಸದಾಶಿವ ಶಿವಾಚಾರ್ಯ ಸ್ವಾಮಿಗಳು ದಿವ್ಯಾಸಾನಿದ್ಯ ವಹಿಸಿದ್ದರು.ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ. ಸಿ. ಗೌರಿಶಂಕರ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಚಲನಚಿತ್ರ ನಟ ನಿರ್ಮಾಪಕ ಹಾಗೂ ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸಂಪಾದಕರಾದ ಗಂಡಸಿ ಸದಾನಂದಸ್ವಾಮಿ, ನಟ ಸಾಯಿಪ್ರಕಾಶ, ಚಿತ್ರರಂಗದ ಹಿರಿಯ ನಟ ಕರಿಸುಬ್ಬು, ಹಿರಿಯ ಹಾಸ್ಯ ಕಲಾವಿದರಾದ ಎಂ ಎನ್ ಸುರೇಶ (ಮೂಗುರು ಸುರೇಶ), ಚಲನಚಿತ್ರ ನಿರ್ದೇಶಕ ನೀನಾಸಂ ಮಂಜು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ ಕನ್ನೇರಿ ಚಲನಚಿತ್ರ ನಿರ್ದೇಶಕರು ಹಾಗೂ ಅವರ ತಂಡವನ್ನು ಅಭಿನಂದನಿಸಿ ಸನ್ಮಾನಿಸಲಾಯಿತು. ಸೋಮೇಶ ನವೋದಯ, ನಟಿ ನಿರ್ಮಾಪಕಿ ಇಳಾ ವಿಟ್ಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ,ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಟಿ ಕಾಳೇನಹಳ್ಳಿ, ತುಮಕೂರು ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಆರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ ಎಸ್ ಚಿಕ್ಕಣ್ಣ,ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ವೆಂಕಟರಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಹಾಗೂ ವಿವಿಧ ತಾಲೂಕಾ ಅಧ್ಯಕ್ಷರುಗಳು,ಪ್ರಧಾನ ಕಾರ್ಯದರ್ಶಿಗಳು ಮತ್ತು ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮೀ ನಾರಾಯಣ, ಕಾರ್ಯಾಧ್ಯಕ್ಷರಾದ ಡಾ.ಶಿವರಾಮೇಗೌಡ ಹಾಗೂ ನವ್ಯ ಕನ್ಸ್ಟ್ರಕ್ಷನ್ಸ್ ಮತ್ತು ನವ್ಯ ಇಂಟಿರಿಯಲ್ಸ್ ಮುಖ್ಯಸ್ಥರಾದ ಟಿ. ಎಸ್. ಭಾಗ್ಯಲಕ್ಷ್ಮಿ ಲಿಂಗಾರಾಜು ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ ಮಹೇಶ, ರಾಜ್ಯ ಉಪಾಧ್ಯಕ್ಷರುಗಳಾದ ವಿ ಜಿ ಅಗ್ರಹಾರ ಹಾಗೂ ರೇಖಾ ದಳವಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷಕುಮಾರ ಎಸ್ ಬಂಡೆ, ರಾಜ್ಯ ಕೋಶಾಧ್ಯಕ್ಷರಾದ ಎನ್ ಚಲುವೇಗೌಡ,ರಾಜ್ಯ ಸಹ ಕಾರ್ಯದರ್ಶಿಗಳಾದ ಎಸ್ ಸುಮತಿ, ಕೈದಾಳ ರಂಗಸ್ವಾಮಿ ಮತ್ತು ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ನಾಯಕ ಸೇರಿದಂತೆ ಅನೇಕ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.