ಒಬ್ಬ ಪುರುಷನ ಸಾಧನೆ ಹಿಂದೆ ಸ್ತ್ರೀ ಇರುತ್ತಾಳೆ. ಆದರೆ, ಸ್ತ್ರೀ ಹೆಸರಿನ ಮುಂದೆ ಪುರುಷನಿರುತ್ತಾನೆ .
ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಒಂದು ಪದ್ಧತಿಯಾಗಿದೆ. ಇದು ಶುದ್ಧಾಂಗ ತಪ್ಪು. ಕೇವಲ ಪಾಶ್ಚಿಮಾತ್ಯರ ಅಂಧಾನುಕರಣೆ.
ಇದಕ್ಕೆ ಉದಾಹರಣೆ.
ಸೀತೆ, ಜಾನಕಿ ಅಥವಾ ಮೈಥಿಲಿ ಎಂದು ಕರೆಸಿಕೊಂಡಳೇ ವಿನಾ ಎಂದೂ ‘ರಾಮಿ’ ಆಗಲಿಲ್ಲ.
( ಸೀತಾರಾಮ ಎಂಬ ಪದ ಬಳಕೆಯಲ್ಲಿದೆ, ಇದು ರಾಮನಿಗೆ ಅನ್ವಯವಾಗುತ್ತದೆಯೇ ಹೊರತು ಸೀತೆಗಲ್ಲ).
ಕೃಷ್ಣೆ- ದ್ರೌಪದಿ ಅಥವಾ ಪಾಂಚಾಲಿ ಎನ್ನಿಸಿಕೊಂಡಳೇ ಹೊರತು ಪಾಂಡವಿ ಆಗಲಿಲ್ಲ.
ಪೃಥೆಯು ಕುಂತಿಯಾದಳೇ ವಿನಾ ಪಾಂಡವಿ ಆಗಲಿಲ್ಲ.
ಗಾಂಧಾರಿ ಗಾಂಧಾರಿಯಾಗಿಯೇ ಉಳಿದಳು. ಧೃತರಾಷ್ಟ್ರನ ಹೆಸರನ್ನು ತನ್ನ ಹೆಸರಿನ ಮುಂದೆ ತರಲಿಲ್ಲ.
ರುಕ್ಮಿಣಿ ಎಂದೂ ತನ್ನ ಹೆಸರಿನ ಮುಂದೆ ಕೃಷ್ಣನ ಹೆಸರನ್ನು ಸೇರಿಸಿಕೊಳ್ಳಲಿಲ್ಲ.
ತನ್ನ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಪದ್ಧತಿ ನಮ್ಮದಲ್ಲ.
ಇಲ್ಲಿ ನಾವು ಗಮನಿಸಬೇಕಾದ ವಿಚಾರವೆಂದರೆ, ಸ್ತ್ರೀ ಯನ್ನು ಆಳಾಗಿ ಬಳಸಿಕೊಳ್ಳುವ ರಾಜಕೀಯದಲ್ಲಿ ಪುರುಷ ತಾನೇ
ಹೊಂಡದಲ್ಲಿ ಬಿದ್ದರೂ ಮೇಲೆ ಏಳಲಾಗದೆ ಭೂಮಿಯನ್ನು
ಇನ್ನಷ್ಟು ಕೊಳಕುಮಾಡಿಕೊಂಡು ವ್ಯವಹಾರದ ರಾಜಕೀಯಕ್ಕೆ ಬಲಿಪಶುವಾಗಿರುವುದಾಗಿದೆ.
ಭೂಮಿ ಋಣ ತೀರಿಸಲು ಬಂದ ಜೀವಕ್ಕೆ ಭೂಮಿಯನ್ನು ಆಳುವ ಅಧಿಕಾರ ಕೊಟ್ಟಿರುವುದೆ ಸ್ತ್ರೀ ಶಕ್ತಿ. ಈಗ ಇದೇ ಕಾರಣಕ್ಕೆ ಸ್ತ್ರೀ ಜ್ಞಾನ ಹಿಂದುಳಿದಿದೆ.
ಭೌತಿಕ ಜಗತ್ತಿನಲ್ಲಿದ್ದು ಎಷ್ಟು ಸಂಪಾದನೆ ಮಾಡಿ ಮೈ ಮೇಲೆಳೆದುಕೊಂಡರೂ ಒಳಗಿನ ಜ್ಞಾನವಿಲ್ಲದೆ
ಇದ್ದರೆ ಮತ್ತೆ ಮತ್ತೆ ಭೂಮಿ ಋಣ ಸೇವೆಗೆ ಮರಳಲೇಬೇಕು.
ಸೀತಾರಾಮ ಹೆಸರಿನಲ್ಲಿ ಸೀತೆಯಿಂದ ರಾಮ ಗುರುತಿಸುವ
ಹಾಗಾಯಿತೆನ್ನಬಹುದು. ಸ್ತ್ರೀ ಯಾವಾಗಲೂ ಪುರುಷರ ಹಿಂದೆ ಇದ್ದರೂ, ಅವಳ ಹೆಸರಿನ ಮುಂದೆ ಪುರುಷನ ಹೆಸರಿರುತ್ತದೆ ಕಾರಣ ಇದು ಸ್ತ್ರೀ ಪುರುಷನಿಗೆ ತೋರಿಸುವ ಗೌರವವೆನ್ನಬಹುದು.
ಇಷ್ಟಕ್ಕೂ ಭೂಮಿ ಮೇಲೆ ನಿಂತು ಅವಳ ಶಕ್ತಿ ಸಹಕಾರವಿಲ್ಲದೆ ಜೀವನ ನಡೆಸಲು ಸಾಧ್ಯವೆ?
ಆತ್ಮಾವಲೋಕನಕ್ಕೆ ಸಾಮಾನ್ಯಜ್ಞಾನ ಸಾಕು.
ಪುರಾಣ ಕಥೆ ಬೇಕೆ? ಕಥೆಯೇ ವ್ಯಥೆಯಾಗಿದ್ದರೆ ಚಿಂತೆ ಹೆಚ್ಚಾಗುತ್ತದೆ.
ಹಿಂದಿನ ಸತ್ಯ ಧರ್ಮವೆ ಸರಿಯಾಗಿ ತಿಳಿಯದೆ ಆಚಾರ, ವಿಚಾರದಲ್ಲಿಯೇ ಅಪಭ್ರಂಶ, ಅನಾಚಾರ,ಅತ್ಯಾಚಾರ ಹೆಚ್ಚಾಗಿದ್ದಕ್ಕೆ ಇಂದು ಭ್ರಷ್ಟಾಚಾರ ಬೆಳೆದಿರುವುದೆಂದರೆ ತಪ್ಪಿಲ್ಲ.
ಯಾರನ್ನೂ ಆಳಲು ಹೋಗಬೇಡಿ.ನಿಮ್ಮನ್ನ ನೀವೇ ಆಳಿಕೊಂಡರೆ ಪ್ರಜಾಪ್ರಭುತ್ವಕ್ಕೆ ಅರ್ಥ ಇರುತ್ತದೆ. ಇದಕ್ಕೆ ರಾಜಕೀಯ ಸಹಕಾರ ಬೇಡ. ರಾಜಯೋಗದ ಶಿಕ್ಷಣದ ಅಗತ್ಯವಾಗಿದೆ
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು