ನೆತ್ತಿಗೇರಿದ ಸಿಟ್ಟು ಇಳಿಸೋದು ಹೀಗೆ

Must Read

ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ ಸಂಬಂಧಗಳು ಶಾಶ್ವತವಾಗಿ ಬಿರುಕು ಬಿಟ್ಟು ಹೋಗುತ್ತವೆ. ಅಷ್ಟೊಂದು ಅನಾಹುತಕಾರಿ ಈ ಕೋಪ. ತೀವ್ರ ವೇಗದ ಮತ್ತು ಒತ್ತಡದ ಕಾಲದಲ್ಲಿರುವ ನಮಗೆ ಸದಾ ಮೂಗಿನ ಮೇಲೆ ಸಿಟ್ಟು ಕುಳಿತಿರುತ್ತದೆ. ಇದರಿಂದ ಭಾವಾವೇಶಕ್ಕೆ ಒಳಗಾಗುತ್ತೇವೆ. ಕೋಪ ಸಹಜ ಎನ್ನುವ ಭಾವನೆಯನ್ನು ತಲೆಯಲ್ಲಿ ಸ್ಥಿರವಾಗಿ ಕೂಡ್ರಿಸಿಕೊಂಡು ಇದರಿಂದ ಬಚಾವಾಗಲು ಪ್ರಯತ್ನಿಸುವುದನ್ನು ಬಿಟ್ಟು ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಮಾನಸಿಕ ಶಾಂತಿಯನ್ನು ಹಾಳು ಮಾಡುವ ಕೋಪ ನೆತ್ತಿಗೇರಿದಾಗ ಏನು ಮಾಡಬೇಕು?

ದೂರ ಹೊರಟು ಹೋಗಿ
ಎದುರಿಗಿರುವ ವ್ಯಕ್ತಿಯ ಮೇಲೆ ಸಿಟ್ಟು ಬಂದರೆ ಕೂಡಲೇ ಆ ವ್ಯಕ್ತಿಯಿಂದ ದೂರ ಹೊರಟು ಹೋಗಿ. ಸಿಟ್ಟು ತಹಬಂದಿಗೆ ಬಂದ ಮೇಲೆ, ಹತಾಶಾ ಭಾವ ಕಡಿಮೆಯಾದ ಮೇಲೆ ಮರಳಿ ಬಂದು ನಿಮ್ಮ ವಿಚಾರಗಳನ್ನು ಸ್ಪಷ್ಟವಾಗಿ ತಿಳಿ ಹೇಳಿ.
ಸರಳ ವ್ಯಾಯಾಮ ಮಾಡಿ
ಕುಳಿತ ಜಾಗದಿಂದ ಎದ್ದು ಹೋಗಿ ಒಂದು ಲೋಟ ನೀರು ಕುಡಿಯಿರಿ. ಜೋರಾದ ನಡಿಗೆ ಪ್ರಾರಂಭಿಸಿ.ಸರಳವಾದ ವ್ಯಾಯಾಮಗಳಲ್ಲಿ ತೊಡಗಿಕೊಳ್ಳಿ. ಮಕ್ಕಳನ್ನು ಪಾರ್ಕ್ ಗೆ ಕರೆದುಕೊಂಡು ಹೋಗಿ ಅವರ ಜೊತೆ ಸ್ವಲ್ಪ ಹೊತ್ತು ಆನಂದಮಯವಾಗಿ ಕಳೆಯಿರಿ.
ಯೋಚಿಸಿ ಮಾತನಾಡಿ
ಮಾತನಾಡುವ ಮುನ್ನ ಕೊಂಚ ಯೋಚಿಸಿ. ಅವಸರದಲ್ಲಿ ತಲೆಗೆ ಹೊಳೆದದ್ದನ್ನು ಎದುರಿನವರ ಮುಂದೆ ಜೋರಾಗಿ ಕಿರುಚದಿರಿ. ಸಿಟ್ಟು ಕೆಟ್ಟ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.
ದೀರ್ಘವಾಗಿ ಉಸಿರಾಡಿ
ಸಿಟ್ಟು ಬಂದಾಗ ದೇಹ ಒತ್ತಡದಲ್ಲಿರುತ್ತದೆ ಅದಕ್ಕೆ ದೀರ್ಘವಾಗಿ ೩ ಬಾರಿ ಉಸಿರಾಡಿ ಸಾವಧಾನವಾಗಿ ಕುಳಿತುಕೊಂಡು ಸಿಟ್ಟು ನೆತ್ತಿಗೇರಲು ಕಾರಣವೇನು ಎಂದು ಯೋಚಿಸಿ. ಕುಟುಂಬ ಸದಸ್ಯರ ಮೇಲೆ ಸಿಟ್ಟು ಬಂದರೆ ಪರಿಸ್ಥಿತಿಯನ್ನು ಹಾಸ್ಯದಲ್ಲಿ ತೇಲಿಸಿ ಬಿಡಿ.
ವಾಚ್ ಗಮನಿಸಿ
ಕೈಯಲ್ಲಿರುವ ನಿಮ್ಮ ವಾಚ್‌ನ ಸೆಕೆಂಡ್ ಮುಳ್ಳನ್ನು ಕನಿಷ್ಟ ಎರಡು ನಿಮಿಷಗಳವರೆಗಾದರೂ ಗಮನಿಸಿ. ಅಷ್ಟರೊಳಗಾಗಿ ಕೋಪ ಸ್ವಲ್ಪ ನಿಯಂತ್ರಣದಲ್ಲಿ ಬರುತ್ತದೆ ಆಗ ನೀವು ಯೋಚಿಸಿ ಕ್ರಿಯಾಶೀಲರಾಗಬಹುದು.
ಕ್ಷಮೆ ಪತ್ರ ಬರೆಯಿರಿ
ನೀವು ಯಾವ ವ್ಯಕ್ತಿಯ ಮೇಲೆ ಕೋಪಿಸಿಕೊಂಡಿದ್ದೀರೋ ಅವರಿಗೆ ಒಂದು ಕ್ಷಮೆ ಪತ್ರ ಬರೆಯಲು ಪ್ರಯತ್ನಿಸಿ. ಅದನ್ನು ಪೋಸ್ಟ್ ಮಾಡಲೇ ಬೇಕಂತಿಲ್ಲ. ಇದರಿಂದ ಏರಿದ ರಕ್ತದೊತ್ತಡ ಮತ್ತು ಭಾವೋದ್ವೇಗಗಳು ಕಡಿಮೆಯಾಗುತ್ತವೆ. ವ್ಯಕ್ತಿಯ ಬಗೆಗಿರುವ ತಪ್ಪು ಗ್ರಹಿಕೆಗಳು ಮಾಯವಾಗುತ್ತವೆ.

ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ
೯೪೪೯೨೩೪೧೪೨

1 COMMENT

Comments are closed.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group