spot_img
spot_img

ಶರಣರ ಜೀವನ ಪರಿಚಯ – ಕಥಾಲೇಖನ – ಕಾರ್ಯಾಗಾರ

Must Read

spot_img
- Advertisement -

ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಇದರ ಅಡಿಯಲ್ಲಿ ನವೆಂಬರ್ 9 ಮತ್ತು 10 ರಂದು ಬಸವಕಲ್ಯಾಣದಲ್ಲಿ ನಡೆದ ಎರಡು ದಿನದ ಕಾರ್ಯಾಗಾರದಲ್ಲಿ 12 ನೆಯ ಶತಮಾನದ ಶರಣರ ಜೀವನ ಪರಿಚಯ ಕುರಿತು ಕಥಾಲೇಖನ ಹಾಗೂ ಶರಣರ ವಚನಗಳ ಪರಿಷ್ಕೃತ ಆವೃತ್ತಿಗಳನ್ನು ಒಳಗೊಂಡ ಸಾಹಿತ್ಯವನ್ನು ಸಿದ್ಧಪಡಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಆ ಮೂಲಕ ಕಾರ್ಯನಿರ್ವಹಿಸುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

9 ನೆಯ ತಾರೀಕು ಶನಿವಾರ ಬೆಳಿಗ್ಗೆ ಡಾ. ಬಾಬಾಸಾಹೇಬ ಗಡ್ಡೆ ಸರ್ ಅವರು ಡಾ. ಶಶಿಕಾಂತ ಪಟ್ಟಣ ಸರ್, ಡಾ. ಜಯಶ್ರೀ ಪಟ್ಟಣ ಮೇಡಂ ಮತ್ತು ವೇದಿಕೆಯ ಎಲ್ಲ ಸದಸ್ಯರಿಗೆ ಹೊಸ ಅನುಭವ ಮಂಟಪದ ವೀಕ್ಷಣೆ ಮತ್ತು ವಿವರಣೆಯನ್ನು, ಶರಣರ ತತ್ವಸಿದ್ಧಾಂತದೊಂದಿಗೆ ಮತ್ತು ಹೊಸಕಾರ್ಯತಂತ್ರಜ್ಞತೆಯೊಂದಿಗೆ ಹೇಗೆ ರೂಪುಗೊಳ್ಳುತ್ತಿದೆ ಎನ್ನುವುದನ್ನು ಅತ್ಯಂತ ಸಮರ್ಪಕವಾಗಿ, ಕೂಲಂಕುಷವಾಗಿ, ಆಸ್ಥೆಯಿಂದ ಹಂಚಿಕೊಂಡರು.

ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಡಾ. ಶಶಿಕಾಂತ ಪಟ್ಟಣ ಅವರು ಶರಣರ ಚರಿತ್ರೆ ರಚನೆ ಕುರಿತು ನಮ್ಮೊಂದಿಗೆ ವಿವರವಾಗಿ ಮತ್ತು ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ ಹೇಳಿದರು. ನಂತರ ಡಾ ಬಾಬಾ ಸಾಹೇಬ ಗಡ್ಡೆ ಅವರು ನಮ್ಮೆಲ್ಲರೊಂದಿಗೆ ಶರಣರ ಕುರಿತು ಸಾಮೂಹಿಕ ಚರ್ಚೆ ಮತ್ತು ಮಾರ್ಗದರ್ಶನವನ್ನು ಪ್ರತಿಯೊಂದು ಸಣ್ಣ ಪುಟ್ಟ ವಿವರಣೆಯೊಂದಿಗೆ ಅರ್ಥೈಸಿದರು.

- Advertisement -

ನಮ್ಮ ಐವತ್ತು ಜನರ ತಂಡ ನಂತರದಲ್ಲಿ ಒಂದು ಘಂಟೆಯ ಕಾಲ ನಮಗೆಲ್ಲ ಬರೆಯಲು ಕೊಟ್ಟ ಶರಣರ ಬಗೆಗೆ , ಅಲ್ಲೇ ಸ್ಥಳದಲ್ಲೇ ಕುಳಿತು, ಡಾ. ಪಟ್ಟಣ ಅವರು ಒದಗಿಸಿದ ಶರಣರ ಪುಸ್ತಕಗಳ ಸಹಾಯದಿಂದ ಯಾವುದೇ ಪವಾಡಗಳನ್ನು ಸೇರಿಸದೆ, ಕಾಲ್ಪನಿಕ ಸನ್ನಿವೇಶಗಳನ್ನು ಬರೆಯದೆ ನಿಜವಾದ ಅರ್ಥದಲ್ಲಿ ವಚನಗಳ ಸಾರಾoಶ ಏನಿದೆ, ಈಗಿನ ಸಮಯದಲ್ಲಿ ಅದರ ಪ್ರಸ್ತುತತೆ ಎಷ್ಟಿದೆ ಎನ್ನುವುದರ ಬಗೆಗೆ ಲೇಖನಗಳನ್ನು ಬರೆದುಕೊಟ್ಟು ಅದರ ಬಗೆಗೆ ಸಂವಾದ ನಡೆಸಲಾಯಿತು.

ಎರಡನೆಯ ದಿನ ಬೆಳಿಗ್ಗೆ ಶರಣರ ಸ್ಮಾರಕಗಳನ್ನು ವೀಕ್ಷಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಡಾ. ಶಶಿಕಾಂತ ಪಟ್ಟಣ ಸರ್ ಅವರು ವಚನಗಳ ಶುದ್ದೀಕರಣ ಮತ್ತು ಪ್ರಕ್ಷಿಪ್ತ ನಿವಾರಣೆಯ ಅಗತ್ಯತೆ ಕುರಿತು ಎಲ್ಲರಿಗೂ  ಮನದಟ್ಟಾಗುವಂತೆ ವಿವರಿಸಿದರು. ನಂತರ ಶರಣರ ಸಂವಾದ ಮತ್ತು ಸಂಭಾಷಣೆ ಮತ್ತು ವಚನಕಾರರ ಚರಿತ್ರೆ ಪ್ರಾತ್ಯಕ್ಷಿಕೆಯ ಕುರಿತು ಡಾ. ಬಾಬಾಸಾಹೇಬ ಗಡ್ಡೆ ಅವರು ನಮ್ಮ ಜೊತೆಗೆ ಹಂಚಿಕೊಂಡರು. ಕೊನೆಯಲ್ಲಿ ಶಿಭಿರಾರ್ಥಿಗಳು ತಮ್ಮ ತಮ್ಮ ಅಭಿಮತ, ಅಭಿಪ್ರಾಯಗಳನ್ನು
ಹಂಚಿಕೊಂಡರು. ಶರಣೆ ಗೌರಮ್ಮ ನಾಶಿ, ಪ್ರೊ. ಶಾರದಮ್ಮ ಪಾಟೀಲ್, ಡಾ. ದಾನಮ್ಮ ಝಳಕಿ, ಡಾ. ವೀಣಾ ಎಲಿಗಾರ, ಡಾ. ಶರಣಮ್ಮ ಗೊರೆಬಾಳ, ಡಾ. ಸುಧಾ ಕೌಜಗೇರಿ, ಡಾ. ಕಸ್ತೂರಿ ದಳವಾಯಿ, ಡಾ. ಜಯಶ್ರೀ ಹಸಬಿ, ಡಾ. ಗೀತಾ ಡಿಗ್ಗೆ, ಡಾ. ಸಂಗಮೇಶ ಕಲಹಾಳ ಹೀಗೆ ಪ್ರತಿಯೊಬ್ಬರೂ ತಮ್ಮ ಎರಡು ದಿನಗಳ ಕಾರ್ಯಾಗಾರದ ಬಗೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಯೋಜನೆಗಳ ಕಾರ್ಯಸೂಚಿ ಬಗೆಗೆ ಡಾ. ಬಾಬಾಸಾಹೇಬ ಗಡ್ಡೆ ಅವರು ಸಮಾರೋಪದ ನುಡಿಗಳನ್ನಾಡಿದರು. ಡಾ. ಜಯಶ್ರೀ ಪಟ್ಟಣ ಅವರು ಶರಣು ಸಮರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಅತ್ಯಂತ ಜವಾಬ್ದಾರಿಯುತವಾಗಿ, ಯಶಸ್ವಿಯಾಗಿ ಡಾ. ಶಶಿಕಾಂತ ಪಟ್ಟಣ ಸರ್ ಅವರು ನಡೆಸಿಕೊಟ್ಟರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group