- ಬೀದರ: ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಬಿಜೆಪಿ ಟಿಕೆಟ್ ನೀಡಿದೆ ಇದರಿಂದ ನನಗೆ ಕಣ್ಣೀರು ತುಂಬಿ ಬಂದಿದೆ ಎಂದು ಬೀದರ್ ಉತ್ತರ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ಈಶ್ವರ್ ಸಿಂಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು
- Advertisement -
ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯ ವ್ಯಕ್ತಿಗಳು ಇಲ್ಲ. ಸಾಮಾನ್ಯ ಶಿಕ್ಷಕರ ಮನೆಯಲ್ಲಿ ಹುಟ್ಟಿದ ನನಗೆ ಬಿಜೆಪಿ ಟಿಕೆಟ್ ನೀಡಿದೆ. ಟಿಕೆಟ್ ಘೋಷಣೆ ಮಾಡಿದಾಗ ಸಾಮಾನ್ಯ ಕಾರ್ಯಕರ್ತನಾದ ನನಗೆ ಆಶ್ಚರ್ಯವಾಗಿತ್ತು ಎಂದ ಅವರು, ನನಗೆ ಟಿಕೆಟ್ ನೀಡದ್ದಕ್ಕೆ ಎಲ್ಲಾ ನನ್ನ ವರಿಷ್ಠರಿಗೆ ಧನ್ಯವಾದಗಳು ಎಂದರು.
ಟಿಕೆಟ್ ವಂಚಿತ ಸೂರ್ಯಕಾಂತ್ ನಾಗಮಾರಪಳ್ಳಿ ಬಂಡಾಯ ವಿಚಾರ ಮಾತನಾಡಿದ ಅವರು, ನಾನು ಕೂಡಾ ಸೂರ್ಯಕಾಂತ್ ಗೆ ಮನವಿ ಮಾಡಿದ್ದೇನೆ.ನೀವು ಚುನಾವಣೆಗೆ ನಿಂತಾಗ ನಾನು ಪ್ರಾಮಾಣಿಕನಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಯಾವಾಗಲೂ ಹತ್ತಿರವಾಗಿ ಇದ್ದವನು ನಾನು. ಈ ಬಾರಿ ಪಕ್ಷ ನನಗೆ ಟಿಕೆಟ್ ನೀಡಿದೆ ಹೀಗಾಗೀ ಈ ಸಲ ನಿಮ್ಮ ಆಶೀರ್ವಾದ ಕೊಡಿ ಎಂದು ಮನವಿ ಮಾಡಿದರು.
ದಿ. 20 ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಬೀದರ್ ನಲ್ಲಿ ಬೀದರ್ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ ಹೇಳಿದರು.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ