ಪಾಲಕರೇ , ನಿಮ್ಮ ಮಗುವನ್ನು ಶಾಲೆಗೆ ಸೇರಿಸಬೇಕೇ ?

Must Read

ಮಕ್ಕಳ ಶಿಕ್ಷಣ ; ಪಾಲಕರ ಗಮನಕ್ಕಾಗಿ…..

ಪಾಲಕರೇ ,ನಿಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣ ಕುರಿತು ನೀವು ತಿಳಿದು ಕೊಳ್ಳಲೇ ಬೇಕಾದ ಕೆಲ ಸತ್ಯ ಸಂಗತಿಗಳು ಇಲ್ಲಿವೆ . ದಯವಿಟ್ಟು ಓದಿ ತಿಳಿದುಕೊಳ್ಳಿ.

  • ಬೆಳೆಯುವ ಮಕ್ಕಳ ಮೆದುಳಿನ ವಿಕಾಸ ಮಾತೃಭಾಷಾ ಶಿಕ್ಷಣದಿಂದ ಮಾತ್ರ ಸಾಧ್ಯ. ಇದು ವೈಜ್ಞಾನಿಕ ಸತ್ಯ ಇದು ನಿಮಗೆ ಸತ್ಯ ಅನಿಸಬೇಕಾದರೆ ಸರಕಾರಿ ಶಾಲೆಯಲ್ಲಿ ಮಾತೃಭಾಷಾ ಶಿಕ್ಷಣ ಪಡೆಯುತ್ತಿರುವ ಹುಡುಗನ ಹಾಗೂ ಆರಂಭದಿಂದಲೂ ಇಂಗ್ಲಿಷ್ ಭಾಷೆಯಲ್ಲೇ ಓದುತ್ತಿರುವ ಹುಡುಗನ ಚಟುವಟಿಕೆಗಳೊಂದಿಗೆ ಹೋಲಿಸಿ ನೋಡಿ.
  • ಇಂಗ್ಲೀಷ ಓದಿ ವಿದೇಶಗಳಲ್ಲಿ ನೌಕರಿ ಹಿಡಿದು ದುಡ್ಡು ಗಳಿಸುವುದೇ ಜೀವನವಲ್ಲ. ಮಾನವೀಯತೆಯಿಂದ ಬದುಕುವುದು ಮುಖ್ಯ. ಆ ಮಾನವೀಯ ಪಾಠ ದೊರೆಯುವುದು ಸರಕಾರಿ ಮಾತೃಭಾಷಾ ಶಾಲೆಗಳಲ್ಲಿ.
  • ಸರಕಾರಿ ಶಾಲೆಗಳಲ್ಲಿ ಇರುವುದು ಸಹಜ ಶಿಕ್ಷಣ.ಇಲ್ಲಿ ಕಂಠಪಾಠದ ಶಿಕ್ಷಣವಿಲ್ಲ. ಇಲ್ಲಿ ಮಕ್ಕಳು ಮಾರ್ಕ್ಸ್ ಮಷಿನ್ ಗಳಾಗದೆ ಬದುಕಿನ ಪಾಠ ಕಲಿಯುತ್ತಾರೆ.
  • ಮಾರ್ಕ್ಸ್ಗಗಳು ಮಕ್ಕಳ ಪ್ರತಿಭೆಯ ಮಾನದಂಡವಲ್ಲ. ಪದವಿಯಲ್ಲಿ ಕೇವಲ 35 ಮಾರ್ಕ್ಸ್ ಪಡೆದು ಪಾಸಾದವರೂ IAS ,KAS, ಬೇಕಾದ ಪರೀಕ್ಷೆಗಳಿಗೆ ಹಾಜರಾಗಿ ಪರೀಕ್ಷೆ ಬರೆದು ಪಾಸಾಗಬಹುದು.
  • ಪಾಲಕರೇ ನೀವು ಅನಾಥಾಶ್ರಮಗಳ ಪಾಲಾಗುವುದು ಬೇಡ ಅಂದರೆ ನಿಮ್ಮ ಮಕ್ಕಳನ್ನು ಮಾತೃಭಾಷಾ ಸರಕಾರಿ ಶಾಲೆಗಳಿಗೆ ಕಳಿಸಿ. ಅವರು ಪರಭಾಷೆ ಕಲಿತು ಪರದೇಶಕ್ಕೆ ಹಾರಿದರೆ ನಿಮಗೆ ಮುಪ್ಪಾವಸ್ಥೆಯಲ್ಲಿ ಅನಾಥಾಶ್ರಮಗಳೇ ಗತಿ. ಇಂದು ಇಂಥ ಹೆತ್ತವರ ಉಧಾಹರಣೆಗಳು ನಮ್ಮ ಮುಂದಿವೆ.
  • ಸರಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡುವ ಶಿಕ್ಷಕರು ಅರ್ಹ ಶಿಕ್ಷಣ ಪಡೆದಿದ್ದು, ಕಲಿಕಾ ತರಬೇತಿ ಪಡೆದವರಿರುತ್ತಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಕಲೆ ಅವರಿಗೆ ಗೊತ್ತಿರುತ್ತದೆ.
  • ಸರಕಾರಿ ಶಾಲೆಗಳಲ್ಲಿರುವ ಗುತ್ತಿಗೆ ಶಿಕ್ಷಕರೂ ಕೂಡ ಅರ್ಹ ಶಿಕ್ಷಣ ಪಡೆದವರೇ ಇರುತ್ತಾರೆ.
  • ಸರಕಾರಿ ಶಾಲೆಯಲ್ಲಿ ನಿಮ್ಮ ಮಗುವಿಗೆ ಯಾವುದೇ ಮಾನಸಿಕ ಹಿಂಸೆ ಇಲ್ಲ. ಮೇಲು ಕೀಳು ಭಾವನೆ ಇಲ್ಲ. ಆಯಾ ದಿನ ಇಂಥಹದೇ ಊಟ ತರಬೇಕೆಂಬ ಕಟ್ಟಪ್ಪಣೆ ಇಲ್ಲ.
  • ಬಿಸಿಯೂಟ ತಿನ್ನಲೇ ಬೇಕೆಂಬ ಒತ್ತಾಯವಿಲ್ಲ. ಮನೆಯಿಂದಲೂ ಬೇಕಾದ ಊಟ ತಂದು ಮಕ್ಕಳೊಂದಿಗೆ ತಿನ್ನ ಬಹುದು ಇಲ್ಲಿ ಮಗು ಆರಂಭದಲ್ಲೇ ಸಮಾನತೆಯ ಪಾಠ ಕಲಿಯುತ್ತದೆ.
  • ನಿಮ್ಮ ತಾಯ್ನುಡಿ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ನಿಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ಕೊಡಿಸಿ.
  • ಖಾಸಗಿ ಶಾಲೆಗಳಿಗೆ ನಿಮ್ಮ ಮಕ್ಕಳಿಗಾಗಿ ಪ್ರತಿವರ್ಷ ಒಂದು ಲಕ್ಷ ಖರ್ಚು ಮಾಡುತ್ತೀರಿ ಅಂದರೆ ನಿಮ್ಮ ಮಗ ಶಿಕ್ಷಣ ಮುಗಿಸುವಷ್ಟರಲ್ಲಿ 20 ರಿಂದ 25 ಲಕ್ಷ ಮಾಡುತ್ತೀರಿ. ಆದರೆ ಸರಕಾರಿ ಶಾಲೆಗಳಲ್ಲಿ ನೀವು ಹಣಕ್ಕಾಗಿ ಜೇಬಿಗೆ ಕೈ ಹಾಕುವ ಕಾರಣವೇ ಇಲ್ಲ.
  • ಸರಕಾರಿ ಶಾಲೆಗಳಿಗೆ ಕೇವಲ ನಿಮ್ಮ ಮಕ್ಕಳನ್ನಷ್ಟೇ ಕರೆದು ತನ್ನಿ. ಶುಲ್ಕ್ ಬೇಡ. ಪುಸ್ತಕ ಬೇಡ. ಬಟ್ಟೆ ಬೇಡ. ಶೂ ಬೇಡ. ನಿಮ್ಮ ಮಕ್ಕಳ ಆರೋಗ್ಯಕ್ಕಾಗಿ ಇಲ್ಲಿ ವಿಟಮಿನ್ ಗುಳಿಗೆಗಳೂ ಸಿಗುತ್ತವೆ.

ಲೇಖಕರು: ನಾರಾಯಣ ತೆಳಗಡಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group