ಆತ್ಮೀಯರು , ಹಿರಿಯರು ಸಾಹಿತಿಗಳೂ ಆಗಿರುವ ಶ್ರೀಮತಿ ಡಾ. ಸರೋಜಿನಿ ಭದ್ರಾಪೂರ ಅವರು ತಮ್ಮ ಇಳಿ ವಯಸ್ಸಿನಲ್ಲೂ ಬಹಳ ಉತ್ಸುಕತೆಯಿಂದ ನನ್ನ ಎರಡು ಕೃತಿಗಳನ್ನು ಓದಿ ಈ ಕೃತಿಗಳ ಅವಲೋಕನವನ್ನು ಮಾಡಿರುವುದು ತುಂಬಾ ಸಂತಸದ ವಿಷಯ.
ಅವರ ಓದುವ ಹವ್ಯಾಸ ಮತ್ತು ಬರವಣಿಗೆಯ ಆಸಕ್ತಿ ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ ಕಾರಣ ಈ ವಯಸ್ಸಿನಲ್ಲಿ ಈಗಿನ ಜನ ಶಿವಶಿವಾ ಎಂದು ಕುಳಿತಲ್ಲೇ ಕುಳಿತು ಕಾಲ ಕಳೆಯುವುದು ಸಾಮಾನ್ಯ.
ಆದರೆ ಇವರು ಎಲ್ಲವನ್ನೂ ಮೀರಿ ಓದು,ಬರಹ, ಜೊತೆಗೆ ಕನ್ನಡದ ಹಲವಾರು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇಂತಹ ಮೃದು ಮನಸ್ಸಿನ ಅಮ್ಮ ನಮ್ಮ ಸರೋಜಿನಿ ಅಮ್ಮ.
ಇವರ ಉತ್ಸಾಹ ಮನಸ್ಸು ಸದಾ ಹೀಗೇ ಇರಲಿ ಎಂದು ಆಶಿಸುತ್ತಾ ಹೃತ್ಪೂರ್ವಕ ವಂದನೆಗಳು ಈ ಮೂಲಕ ಸಲ್ಲಿಸುವೆ..🙏🏻🙏🏻💐💐🙏🏻🙏🏻
ಇವರ ಕೃತಿ ಅವಲೋಕ ಈ ಕೆಳಗಿನಂತಿದೆ.
ಪುಸ್ತಕ ಪರಿಚಯ ; ಓದುಗರೊಡಲಿನ ಪುಸ್ತಕ
ಕೃತಿಗಳು: “ಮನ ಮಂಥನ ಸಿರಿ ”
ಭಾಗ 1.’ಹೊನ್ನುಡಿಗಳಹೂರಣ ಭಾಗ 2.
‘ಧಾರ್ಮಿಕ ಹಿತ ಚಿಂತನೆಗಳು.’
ಲೇಖಕರು: ಶ್ರೀ.ಮಹೇಂದ್ರ ಕುರ್ಡಿ. ಹಟ್ಟಿ ಚಿನ್ನದ ಗಣಿ.
ಮೊ.ನಂ. 9483591141.
ಶ್ರೀ. ಮಹೇಂದ್ರ ಕುರ್ಡಿ ಸರ್ ಹಾಗೂ ನನ್ನ ಪರಿಚಯ ಮತ್ತು ಭೇಟಿಯಾದದ್ದು ಶಿಗ್ಗಾವದಲ್ಲಿ ನಡೆದ ಬೆಳಕು ಸಂಸ್ಥೆಯ ಒಂದು ಕಾರ್ಯಕ್ರಮದಲ್ಲಿ ಯೋಗಾ ಯೋಗವೆಂದೇ ನಾನು ತಿಳಿದಿದ್ದೇನೆ. ಕಾರ್ಯಕ್ರಮದ ವೇದಿಕೆ ದೂರವಿರುವದರಿಂದ ಅವರು ತಮ್ಮ ಕಾರಿನಲ್ಲಿ ನಾಲ್ಕೈದು ಜನರನ್ನು ಕರೆದುಕೊಂಡು ಬಂದರು.
ಅದರಲ್ಲಿ ನಾನೂ ಒಬ್ಬಳಾಗಿದ್ದೆ. ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತ ಬಂದೆವು. ಅವರ ಮಾತುಕತೆಯಲ್ಲಿಯ ವಿನಯತೆ, ಹಿರಿಯರಲ್ಲಿ ಗೌರವ, ಸರಳತೆ, ಶಾಂತ ಸ್ವಭಾವ ನನಗೆ ತುಂಬಾ ಮೆಚ್ಚುಗೆಯಾಯಿತು. ಸಾಹಿತ್ಯದ ಬಗ್ಗೆ ಕೆಲವೊಂದು ಸಲ ವಾಟ್ಟ್ಸಪನಲ್ಲಿಯೂ ಚರ್ಚಿಸುತ್ತಿದೆವು ಹೀಗೆಯೇ ನಮ್ಮಲ್ಲಿ ಸಾಹಿತ್ಯ ಸಂಬಂಧದ ಜೊತೆಗೆಸಹೋದರ ಸಂಬಂಧವೂ ಬೆಳೆಯಿತು.
ಸಾಹಿತ್ಯದ ನಂಟೇ ಹಾಗಲ್ಲವೇ! ಅವರು ತಮ್ಮ ಕೃತಿಗಳಾದ ‘ಮನ ಮoಥನ ಸಿರಿ’ ಗಳನ್ನು ನಾನು ಓದಿದಾಗ ಅವುಗಳ ಬಗ್ಗೆ ನನಗೆ ನಿಸಿದ ಒಂದೆರಡು ಮಾತುಗ ಳನ್ನು ಬರೆಯಬೇಕೆನಿಸಿದ್ದಕ್ಕಾಗಿ ಬರೆದಿದ್ದೇನೆ. ಇದು ವಿಮರ್ಶೆಯಲ್ಲ, ಕೇವಲ ಕೃತಿಗಳ ಅವ ಲೋಕನ ಮಾತ್ರ.
ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು ಎಲ್ಲಿಂದೆಲ್ಲಿಗೆ ಸಂಬಂಧ
ವಯ್ಯಾ’ ಎನ್ನುವಂತೆ ಅವರ ಶಿಕ್ಷಣ, ವೃತ್ತಿ ಹಾಗೂ ಪ್ರವೃತ್ತಿಗೂ ಹೀಗೆಯೇ ಸoಬಂಧವಾಗಿದೆ.
ಇವರ ಶಿಕ್ಷಣ ಕಾನೂನು ಪದವಿಧರ. ವೃತ್ತಿ ಬಂಗಾರದ ಗಣಿಯಲ್ಲಿ ಕಾರ್ಮಿಕ, ಹಾಗೂ ಪ್ರವೃತ್ತಿ ಸಾಹಿತ್ಯ ರಚನೆ. ಇವುಗಳ ಜೊತೆಗೆ ಶಿಕ್ಷಣ ಪ್ರೇಮಿ ಅಲ್ಲಿಯೇ ‘ವಿನಾಯಕ ಶಿಕ್ಷಣ ಸಂಸ್ಥೆ’ ಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವದರೊಂದಿಗೆ ಉತ್ತಮ ಸಮಾಜ ಸೇವಕ, ಕನ್ನಡ ಸೇವಕನಾಗಿ ಕಾರ್ಯ ನಿರ್ವಹಿಸುತ್ತ ಯುವ ಜನರಿಗೆ ಮಾದರಿಯಾಗಿದ್ದಾರೆ.
ಇಂದು ಎಲ್ಲರೂ ಕಥೆ, ಕವನ, ಕಾದಂಬರಿಗಳನ್ನೇ ಬರೆಯುವದು ಹೆಚ್ಚಾಗಿದೆ. ಕೆಲವರು ಗಜಲ್, ಹಾಯ್ಕುಗಳ ನ್ನು ಬರೆಯಲು ಶುರು ಮಾಡಿ ದ್ದಾರೆ. ಆದರೆ ಕುರ್ಡಿಯವರು ಈ ಎಲ್ಲ ಪ್ರಕಾರಗಳನ್ನು ಬಿಟ್ಟು ‘ಮನ ಮಂಥನ ಸಿರಿ’ ಎಂಬ ಎರಡು ಕೃತಿಗಳನ್ನು ಬರೆದು ಒಂದರಲ್ಲಿ ಸಾಮಾಜಿಕ ಕಾಳಜಿ ಯಿಂದ ಸಮಾಜವನ್ನು ತಿದ್ದುವ ಹೊನ್ನಡಿಗಳ ಹೂರಣವನ್ನು ತುಂಬಿದ್ದರೆ, ಇನ್ನೊಂದರಲ್ಲಿ ಧಾರ್ಮಿಕ ಹಿತ ಚಿಂತನೆಗಳ ಮೌಲ್ಯಯುತವಾದ ಚಿoತ ನಾರ್ಹವಾದ ಸಮಾಜ ತಿದ್ದು
ವಂತಹ ಚಿಂತನಾ ನುಡಿಗಳು ಸಮಾಜದ ಪ್ರತಿಬಿಂಬವನ್ನು ಈ ಬಿಸುವ ಕೈಪಿಡಿಯಂತಾಗಿವೆ. ಇವರ ಈ ವಿಭಿನ್ನವಾದ ಶೈಲಿ ಯನ್ನು ಮೆಚ್ಚಲೇಬೇಕು. ಮೊದ ಲನೆಯದಾಗಿ ಅವರು ಈ ಕೃತಿಗ ಳಿಗೆ ‘ಮನ ಮಂಥನ ಸಿರಿ’ ಎಂದು ಶೀರ್ಷಿಕೆ ಕೊಟ್ಟದ್ದೇ ಆಕರ್ಷಣೀಯವಾಗಿಯೂ,
ಮನೋಜ್ಞವಾಗಿಯೂ ಇದೆ.
ಸಮುದ್ರಮಂಥನದoತೆ ಮನುಷ್ಯ ಕೂಡ ಮನದಲ್ಲಿ ವಿಚಾರಗಳ ಮoಥನ ಮಾಡಿ ದಾಗ ಅವನಲ್ಲಿರುವ ಒಳ್ಳೆಯ,
ಕೆಟ್ಟ ಗುಣಗಳ, ಸ್ವಭಾವಗಳ ಅರಿವಾಗುತ್ತದೆ. ಒಳ್ಳೆಯ ಗುಣಗಳು ಯಾವ ಸಿರಿಗಿಂತಲೂ ಕಡಿಮೆಯಿಲ್ಲ. ಅದಕ್ಕಾಗಿ ಲೇಖಕರು ಬಹುಶಃ ಈ ಹೆಸರನ್ನು ಶೀರ್ಷಿಕೆಯಾಗಿಟ್ಟಿರಬೇಕೆಂಬುದು ನನ್ನ ಅನಿಸಿಕೆ.
ಈ ಕೃತಿಗಳೆರಡು ಶಾರದಾಂಬೆಗೆ ಪೋಣಿಸಿದ ಒಂದು ಮುತ್ತು ಒಂದು ಹವಳದ ಜೋಡಿಯ ಸರದಂತೆ ಅವಳ ಕೊರಳನ್ನು ಸಿಂಗರಿಸಿವೆ.
ಲೇಖಕರು ತಾವು ಅನುಭ ವಿಸಿದ, ಕಂಡುಂಡ ಅನುಭವ ಗಳನ್ನೇ ಮಲ್ಲಿಗೆಯ, ಸಂಪಿಗೆಯ
ಹೂವಿನ ಘಮದಂತೆ ಚಿಂತನೆ ಗಳ ನುಡಿಗಳ ಘಮವನ್ನು ಓದುಗರಿಗೆ ಕೊಟ್ಟಿದ್ದಾರೆ. ಇವೊಂದು ರೀತಿಯಲ್ಲಿ ಸಾಮಾ ಜಿಕ ಹಾಗೂ ಧಾರ್ಮಿಕ ಚಿಂತನೆ ಗಳ ಕೈಪಿಡಿಯಾಗಿವೆ ಎನ್ನುವಂತಿವೆ. ಅವರು ಬರೆದ ಹೊನ್ನಡಿ ಗಳು ಎರಡು, ಮೂರುಸಾಲಿನವುಗಳಾಗಿದ್ದರೂ ಕೂಡ ಅವುಗಳು ಮಡಕೆಯಲ್ಲಿ ಸಮುದ್ರವನ್ನು ತುಂಬಿದಂತೆ (गागर में सागर). ಅಷ್ಟರಲ್ಲಿಯೇ ಅವು ಗಳಲ್ಲಿ ಜ್ಞಾನದ, ಸಾಮಾಜಿಕ ಕಳ
ಕಳಿಯ ಭಂಡಾರವನ್ನೇ ತುಂಬಿ ದ್ದಾರೆ. ಇವರ ಕೆಲವು ಹೊನ್ನಡಿ ಗಳನ್ನು ಓದುವಾಗ ನಮಗೆ ಶರಣರ ವಚನಗಳು, ದಾಸರ ಪದಗಳು, ದಾರ್ಶನಿಕರ ನುಡಿ ಗಳು ಹಾಗೂ ಜಾನಪದ ಶೈಲಿಯಲ್ಲಿ ಯ ಹಾಡುಗಳು ನೆನೆಪಿಗೆ ಬರುತ್ತವೆ. ‘ಆಸೆಗೆ ತಿಂದು ಹಾಸಿಗೆ ಹಿಡಿಯಬೇಡ,
ಮಿತವಾಗಿ ತಿಂದು ಹಿತವಾಗಿ ಬಾಳಿ.’ ‘ಮೇಲು ಕೀಳೆಂಬುದು
ಮನದೊಳಗಲ್ಲದೆ, ಜಗದೊಳಗಿಪ್ಪುದೆ?’ ‘ನಮ್ಮ ಕಾಯಕವನ್ನು
ನಾವು ಗೌರವಿಸಿದರೆ, ನಮ್ಮನ್ನು ಅದೇ ಬದುಕಿಸುವದು ನಮ್ಮ ನ್ನು ಎಂದೆಂದೂ.’ ‘ಲಿಂಗಭೇದವ ನ್ನು ಹೊರತು ಪಡಿಸಿ, ಉಳಿದೆಲ್ಲ
ಭಾವನೆಗಳಿಗೆ ಗಂಡು ಹೆಣ್ಣೆಂಬ
ಭೇಧವಿರದು, ಶರಣನೆಂದರೆ ವ್ಯಕ್ತಿಯಲ್ಲ, ಶರಣನೆಂದರೆ ವಸ್ತು ವಸ್ಟುವಲ್ಲ ಶರಣನೆಂದರೆ ಮಹಾನ್ ಶಕ್ತಿಯು. ಶರಣ ನೆಂದರೆ ಮಾನವಿಯತೆಯು.
ಶರಣಾಗತಿ ತತ್ವ ಸಾರ ತಾ ಅರಿತು ನಡೆದವನೇ ನಿಜ ಶರಣ ನೋಡಯ್ಯ.ಇಂತಹವುಗಳು ಶರಣರನ್ನು ನೆನೆಪಿಸುತ್ತವೆ. ‘ಆಸೆಯೇ ಜೀವನದ ಮೂಲ, ದುರಾಸೆಯೇ ಜೀವನಕ್ಕೆ ಶೂಲ’ ‘ಪಾಪಗಳ ಮಾಡಿ ಪ್ರಾಯಶ್ಚಿತ್ತ ಪಡುವದಂಕಿಂತ ಪಾಪಗಳ ಮಾಡದೇ ಇರುವದು ಒಳಿತು., ‘ಅಜ್ಞಾನಿಯ ಕೂಗು ಅರಿವಿನೆಡೆ ಇದ್ದರೆ, ಯೋಗಿ ತಾನಾಗ ಬಹುದು.’ ‘ಸಾವಿನ ಆಚೆಗೂ ಬದುಕಿದೆ, ಅದು ಸಾಧಕರ ಸೊತ್ತಲ್ಲಡಗಿದೆ.’ ‘ಆಸೆಗಳು ಸಹಜ, ಆವುಗಳನ್ನು ಹತ್ತಿಕ್ಕಿ ನಡೆಯುವವನೇ ನಿಜವಾದ ಮಾನವ” ‘ಕುಲದ ನೆಲೆಯನ್ನು ಆರಿಯದ ಜನರು ನಿತ್ಯ ಬಡ ದಾಡುತಿಹರು. ಕುಲದ ನೆಲೆ ಮಾನವ ಎನ್ನುವದನ್ನು ಮರೆ ತಿಹರು.’, ಕೊಡುವ ಮನಸ್ಸಿದ್ದರೆ ಕೊಟ್ಟುಬಿಡು, ವಸ್ತು ಕೆಟ್ಟು ಹೋಗುವ ಮುನ್ನ. ಕೆಟ್ಟ.ಮೇಲೆ ಕೊರಗದಿರು ಕೊಡಲಿಲ್ಲವೆಂದು ನೆರವು ಪಡೆದವರು ಹಾರೈಸು ವರು ನಿನ್ನ ಬದುಕಿಗೆ.
ಇವುಗಳು ದಾರ್ಶನಿಕರನ್ನು ಸ್ಮರಿಸುತ್ತವೆ. ಇನ್ನುಳಿದ ಸಾಮಾಜಿಕ ಹೊನ್ನುಡಿಗಳಂತೂ ಸಾಮಾಜಿಕ ವಾಸ್ತವಿಕತೆಯನ್ನು ಕನ್ನಡಿ ಯಂತೆ ಬಿಂಬಿಸಿವೆ. ಅದರಲ್ಲಿ ನನಗೆ ಇಷ್ಟವಾದ ಕೆಲವುಗಳನ್ನು ಓದುಗರೊಡನೆ ಹoಚಿಕೊಳ್ಳಲು ಇಷ್ಟ ಪಡುತ್ತೇನೆ. ‘ಒಂದು ದೀಪ ಹಲವು ಮನೆ-ಮನಗಳ ಕತ್ತಲೆ ಯ ಕಳೆಯ ಬಹುದು, ಆದರೆ
ತನ್ನ ಕತ್ತಲೆಯನ್ನು ಕಳೆಯಲು ಇನ್ನೊಂದು ದೀಪದ ಸಹಾಯ ಬೇಕೇ ಬೇಕು,’ ಮನುಷ್ಯನ ಜೀವನದಲ್ಲಿ ಬದುಕಿನ ಜಂಜಾಟ
ಸಂಸಾರದ ಬಂಧನ ಇವುಗಳ ನ್ನು ಎದುರಿಸಿ ಬಾಳನ್ನು ಗೆಲ್ಲು ವದೇ ಜೀವನದ ಸಾರ್ಥಕತೆ ಇದೆ.
ಇದಕ್ಕಾಗಿ ಮನುಷ್ಯ ತನ್ನ ಸಹಾಯಕ್ಕಾಗಿ ಸಮಾಜದಲ್ಲಿ ಹೊಂದಿಕೊಂಡಿರಬೇಕು ಎಂದು ಅರ್ಥೈಸ ಬಹುದು. ಅಥವಾ ಈ ಸಮಸ್ಯೆಗಳಿಗೆ, ಸಂಕಟಗಳಿಗೆ ಉತ್ತರಗಳು ಸಿಗುವದು ಸಾಧ್ಯ ವೇ ಎನ್ನುವದು ಕೂಡ ‘ದೀಪದ ಕೆಳಗೆ ಕತ್ತಲು’ ಎಂದೂ ಅರ್ಥೈಸ ಬಹುದಾ ಎಂಬುದು ನನ್ನ ಪ್ರಶ್ನೆ ಯಾಗಿದೆ. ‘ಕಂದನ ತೊದಲು ನುಡಿಯೇ ಕನ್ನಡದ ಮುನ್ನು ಡಿಯು’ ಈ ಒಂದೇ ವಾಕ್ಯದಲ್ಲಿ
ಈ ಕೃತಿಯ ಶುರುವಾತಿನಲ್ಲಿಯೇ ಹೊಸ ಮನೆಯಲ್ಲಿ ಹಾಲು ಉಕ್ಕಿ ಸಿದಂತೆ ತಮ್ಮ ಕನ್ನಡಾಭಿಮಾನ ವನ್ನು ಉಕ್ಕಿಸಿದ್ದಾರೆ. ‘ಅನಿವಾರ್ಯತೆ ಬದುಕನ್ನು ನಿರ್ಮಿಸು ತ್ತದೆ, ಸಹಾಯಕತೆ ಬದುಕನ್ನು ನಿರ್ನಾಮ ಮಾಡುತ್ತದೆ.’, ‘ಹತ್ತು ದೇವರ ಪೂಜಿಸುವ ಬದಲು ಹೆತ್ತವರ ಪೋಷಿಸು”‘ ಎನ್ನುವಲ್ಲಿ ತಂದೆ ತಾಯಿಗಳ ಬಗ್ಗೆ ಗೌರವ ತೋರಿಸಿದ್ದಾರೆ.’ಹಗೆ ಇಲ್ಲದ ಮನವಿಲ್ಲ, ಹೊಗೆ ಇಲ್ಲದ ಮನೆಯಿಲ್ಲಾ’ ಎಂಬ ಸಾರ್ವತ್ರಿಕ ಸತ್ಯವನ್ನು ನಯವಾಗಿ ಹೇಳಿದ್ದಾರೆ.’ ನಮ್ಮ ಹುಟ್ಟಿಗಾಗಿ ಮಾತೃಭಾಷೆ, ಬದುಕಿಗಾಗಿ ಅನ್ಯ ಭಾಷೆ’ ಎನ್ನುವಲ್ಲಿ ಜೀವನ ಗಾಡಿ ನಡೆಸಲು ಅನ್ಯ ಭಾಷೆಯ ಅನಿ ವಾರ್ಯತೆ ಇದೆ. ಅದಕ್ಕಾಗಿ ಮಾತೃಭಾಷೆಯನ್ನು ಆದರಿಸಿ,
ಅನ್ಯ ಬಾಷೆಯನ್ನು ಗೌರವಿಸಿ ಎಂದು ಅವರು ಹೇಳಿರುವದು
ಇಂದಿನ ವಾಸ್ತವಿಕತೆಯ ಚಿತ್ರಣ ವಾಗಿದೆ.
ಒಬ್ಬ ಯಶಸ್ವಿ ಗಂಡಸಿನ ಹಿoದೆ ಹೆಣ್ಣು ಇರುತ್ತಾಳೆ ಅನ್ನೋದೇ ನಿಜ ಇದ್ರೆ, ಒಬ್ಬ ಗಂಡಸಿನ ಅವನತಿಯ ಹಿಂದೆಯೂ ಹೆಣ್ಣು ಇರುತ್ತಾಳೆ ಎನ್ನುವ ದನ್ನೂ ಎಲ್ಲರೂ ಒಪ್ಪಿಕೊಳ್ಳಲೇ ಬೇಕು’ ಈ ಮಾತಿನ ಬಗ್ಗೆ ಧಿರ್ಗಾಲೋಚನೆ ಮಾಡಿ, ಎರಡನ್ನೂ ತೂಗಿ ನೋಡಿದಾಗ ಈ ಮಾತಿ ನಲ್ಲಿ ವಾಸ್ತವಿಕತೆ, ಹಾಗೂ ಸತ್ಯತೆ ಇದೆ ಎನ್ನುವದನ್ನು ಒಪ್ಪಿ ಕೊಳ್ಳಲೇ ಬೇಕಲ್ಲವೇ?. ಹೀಗೆ ಇವರು ಬರೆದ ಒಂದೊಂದು ನುಡಿಮುತ್ತುಗಳೂ ಸಭಾಷಿತ ಗಳಂತಿವೆ.
“ಮನ ಮಂಥನ ಸಿರಿ” ಭಾಗ 2ರಲ್ಲಿ ಧಾರ್ಮಿಕ ಚಿಂತನೆಗಳನ್ನು ನೀತಿಯ ರೂಪದಲ್ಲಿ ಹೇಳುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಮನುಷ್ಯನು ಭೂಮಿಯ ಮೇಲೆ ಹುಟ್ಟಿಕೊಂಡ ಮೇಲೆಯೇ ಮನುಷ್ಯನಿಂದಲೇ ಧರ್ಮಗಳು ಹುಟ್ಟಿವೆಯೆಂಬುದಂತೂ ಸರ್ವ
ಕಾಲಿಕ ಸತ್ಯ. ಪ್ರತಿ ಜೀವಿಯ ನಡೆ, ಆಚರಣೆ ಅದು ಧರ್ಮ.
ಆ ನಡೆಯಿಂದ ಇತರ ಜೀವಿಗಳಿಗೆ ನೋವಾಗುತ್ತದೆ ಅಂದರೆ ಅದು ಅಧರ್ಮ.ಇದು ಕುರ್ಡಿ ಯವರ ಧರ್ಮ, ಅಧರ್ಮಗಳ ನಂಬಿಕೆ ಹಾಗೂ ಚಿಂತನೆ. ಧರ್ಮ, ಜಾತಿ, ದೇವರು, ಧರ್ಮ ಗ್ರಂಥ, ಬದುಕು ಈ ಎಲ್ಲ ವಿಷಯಗಳ ಬಗ್ಗೆ ಅಧ್ಯಯನ, ಲೋಕಾನುಭವ, ಇವೆಲ್ಲವು ಗಳನ್ನು ಕಂಡು ಇವೆಲ್ಲವುಗಳೂ ಮಾನವ ನಿರ್ಮಿತವಾದವುಗಳು ಎಂದ ಮೇಲೆ ಮನುಷ್ಯನ ಒಳಿತಿಗೆ ಸಮ್ಮತವಿರದ ನಿಯಮ, ಕಟ್ಟಳೆಗಳು ಯಾಕೆ ಬೇಕು? ಎಂಬುದನ್ನು ತಮ್ಮ ಸಾಹಿತ್ಯ ಪ್ರತಿಭೆಯಿಂದ ಎಲ್ಲರ ಮನ ತಟ್ಟುವ ಹಾಗೆ ರಚಿಸಿ, ಅವುಗಳನ್ನು ಖಂಡಿಸಿ ಪ್ರಶ್ನಿಸಿ ದ್ದಾರೆ. ಲೇಖಕರು ತಮ್ಮ ಮನದ ಮಾತು ಹೇಳುವಲ್ಲಿ ಮೊದಲೇ ‘ಮಾನವೀ ಯ ಮೌಲ್ಯಗಳ ಅನಾವರಣ, ಈ ಧಾರ್ಮಿಕ ಚಿಂತನೆಗಳ ಸಿಂಚನ’ ಎಂದು ಹೇಳಿದ್ದಾರೆ.
‘ಮಾನವರು ಮಾನವರಿಗೆ ತೋರಿಸುವ ಔದಾರ್ಯಕತೆಯ
ಜೊತೆಗೆ ಇತರ ಎಲ್ಲಾ ಜೀವಿಗ ಳಿಗೂ ತೋರುವ ಔದಾರ್ಯವೇ ಮಾನವೀಯತೆ’ಎನ್ನಿಸುತ್ತದೆ.
ಎಂದು ಮಾನವೀಯತೆಯ ಬಗ್ಗೆ ಅತೀ ಸರಳ ಹಾಗೂ ಸುಂದರ ವಾಗಿ ಹೇಳಿದ್ದಾರೆ. ಮಾನವರಿಗೆ ಬೆಲೆ ಇಲ್ಲದ, ನೆಲೆ ಇಲ್ಲದ ಧರ್ಮವೇತಕಯ್ಯಾ, ‘ಉರುವಲು ಇಲ್ಲದೆ ಬೆಂಕಿಗೆ ನೆಲೆ ಇಲ್ಲ, ಮಾನವೀಯತೆ ಇಲ್ಲದ ಧರ್ಮಕ್ಕೆ ಬೆಲೆ ಇಲ್ಲ.’ ಎಂದು ಮಾನವೀಯತೆಗೆ ಬೆಲೆಕೊಟ್ಟು ಸೂಕ್ಷ್ಮವಾಗಿ ಧರ್ಮ ವನ್ನು ಖಂಡಿಸಿದ್ದಾರೆ..
‘ಧರ್ಮ ಎನ್ನುವದು ಜೀವನದ ಒಂದು ಭಾಗವಾಗಿರಬೇಕೇ ಹೊರತು ಧರ್ಮವೇ ಜೀವನವಾಗ ಬಾರದು’, ‘ಶ್ರೇಷ್ಠತೆ, ಕನಿಷ್ಟತೆ ಎನ್ನುವದು ಜಾತಿಯಲ್ಲಿಲ್ಲ, ಅದು ನಮ್ಮ ವ್ಯಕ್ತಿತ್ವದಲ್ಲಿದೆ’,
‘ಅಧ್ಯಾತ್ಮ ಎನ್ನುವದು, ದೇವರ ಪೂಜೆ, ಪ್ರಾರ್ಥನೆ ಅಲ್ಲ, ಅದು
ಮಾನವೀಯ ಮೌಲ್ಯಗಳ ನೈಜ ಅರಿವು’, ‘ಭಿಕ್ಷೆ ಬೇಡುವಾ ಜನರ
ಮಾತಿನಲ್ಲಿ ಅಡಗಿದೆ ನಿಜವಾದ ಧರ್ಮದ ಅರ್ಥ. ಹೇಗೆ ಆoತಿ
ರಾ, ಅವರು ನಿತ್ಯವೂ ಕೇಳು ವರು ಜನಗಳ ಮುಂದೆ “ಅಯ್ಯಾಧರ್ಮ ಮಾಡಿ’ ಅಮ್ಮಾ…….. ಧರ್ಮ ಮಾಡಿ’ ಎಂದು.
ಅಂದರೆ ಇದರ ಅರ್ಥ ನಿಮ್ಮ ಜೀವನದ ಜೊತೆ ನಮ ಗೂ ಸ್ವಲ್ಪ ಜೀವನ ಕೊಡಿ ಅಥ ವಾ ನೀವು ಬದುಕಿ ನಮ್ಮನ್ನೂ
ಬದುಕಿಸಿ ಎನ್ನುವದಾಗಿದೆ. ಈ ಅರ್ಥವನ್ನು ಕೇವಲ ಎಂದು ಯಾರೂ ತಿಳಿಯದೆ ಎಲ್ಲರೂ…
ಎಲ್ಲರಿಗಾಗಿ ಎನ್ನುವ ಮಾನವ ತೆಯ ಈ ವಿಚಾರವನ್ನು, ತತ್ವ ವನ್ನು ಮನುಷ್ಯ ಜೀವಿಗಳು ಅರಿತರೆ ಮನುಷ್ಯತ್ವವನ್ನು ಎತ್ತಿ ಹಿಡಿದಂತಾಗುವದು. ಮಾನವ ಧರ್ಮ ಉಳಿಯುವದು’. ಕೆಲಗಳು ಭಿಕ್ಷೆ ಬೇಡಲು ಬಂದವ ರಿಗೆ ಕೊಡುವದು ದೂರದಮಾತು, ಅವರನ್ನು ಬಯ್ದು, ಅವಮಾನ ಮಾಡಿ ಕಳಿಸುತ್ತೇವೆ. ಇದು ಬಹುಶಃ ಎಲ್ಲರಿಗೂ ಗೊತ್ತು. ಆದರೆ ಇದನ್ನು ಓದಿದ ಮೇಲೆ ಈ ‘ಧರ್ಮ’ ಎನ್ನುವ ಭಿಕ್ಷುಕರ ಶಬ್ದಕ್ಕೆ ಇಷ್ಟೊಂದು ಅರ್ಥ ಇದೆಯಾ ಎಂದು ಎಲ್ಲರೂ ಯೋಚಿಸುವಷ್ಟು ಮನೋಜ್ಞ ವಾಗಿ ಬರೆದಿದ್ದಾರೆ.
‘ಮಾನವೀಯತೆ ಎನ್ನುವದು,
ಜೀವಿ ಸತ್ತಾಗ ಸುರಿಸುವ
ಅನು ಕಂಪದ ಕಣ್ಣೀರ ಹನಿಯಲ್ಲ,
ಬದಲಾಗಿ ಅಸಹಾಯಕನಿಗೆ
ನೀಡುವ ಗುಟುಕು, ಹನಿ ನೀರು
ಅದೇ ನಿಜವಾದ ಮಾನವೀ ಯತೆ.’
ಈ ರೀತಿಯಾಗಿ ಈ ಕೃತಿಗಳ ಲ್ಲಿಯ ಎಲ್ಲ ಚಿಂತನೆಗಳು ಮಾನ ವೀಯತೆಯ ಹಿತ ಚಿಂತನೆಗಳ , ಸಾಮಾಜಿಕ ಕಳಕಳಿಯ ಸಿoಚನ ಗಳಾಗಿ ಕಾರಂಜಿಯ ನೀರಿನ ಹನಿಗಳಂತೆ ಹೊರಹೊಮ್ಮಿವೆ. ಶ್ರೀ. ಮಹೇಂದ್ರ ಕುರ್ಡಿಯ ವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲಿ, ಅವರಿಂದ ಇನ್ನೂ ಅನೇಕ ಕೃತಿಗಳು ಹೊರ ಬರಲಿಯೆಂಬುದೇ ನನ್ನ ಸದಾ ಶಯವಾಗಿದೆ. ಡಾ.ಸರೋಜಿನಿ.ಭದ್ರಾಪೂರ. ಮೊ. ನಂ. 9480325033.