ಪುಸ್ತಕದ ಹೆಸರು : ಓಹ್ ಕಲ್ಕತ್ತಾ! ಇದು ಹಳೇ ಕಲ್ಕತ್ತಾ!
ಲೇಖಕರು : ಆಗುಂಬೆ ಎಸ್. ನಟರಾಜ್
ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ)ಬೆಂಗಳೂರು.
ಮೊದಲ ಮುದ್ರಣ : 2020 ಅಗಷ್ಟ್
ಮುಖ ಪುಟ : ದೀಪಕ್ ಬಾಬು
ಪುಟಗಳು : 164, ಬೆಲೆ : 150/-
ಮುದ್ರಕರು : ಹೆಗಡೆ ಪ್ರಕಾಶನ ಬೆಂಗಳೂರು ಉತ್ತರ
ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಕೆನರಾ ಬ್ಯಾಂಕಿನಿಂದ ನಿವೃತ್ತರು 82ನೇ ವಯಸ್ಸಿನಲ್ಲಿ ವರ್ಷಗಳ ಹಿಂದೆ ಕಲ್ಕತ್ತಾ ಭೆಟ್ಟಿನೀಡಿ ಹಾಗೂ ಇತರ ಪುಸ್ತಕ ಸಹಾಯದಿಂದ ಭಾರತದ ಪ್ರಥಮ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ನ ಜೀವನ ಚರಿತ್ರೆ ಮತ್ತು ಕಲ್ಕತ್ತಾ ನಗರದಲ್ಲಿ ಅವನು ತನ್ನ ಜೀವನ ಸಾಗಿಸಿದ್ದರ ಬಗ್ಗೆ ಅರಿಯಲು ಬಸ್ಟೀಡ್ ಅವರು ಲಿಖಿಸಿದ Echoes from old culcutta ಓದಿ ಅದರ ಆಧಾರ ದಿಂದ ರಚಿಸಿದ್ದಾರೆ.
ಲೇಖಕರ ನುಡಿ.
ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಆಗುಂಬೆ ನಟರಾಜರು ಮಾಡಿಕೊಂಡು ಬಂದಿದ್ದಾರೆ. ಭಾರತವನ್ನು ಇಂಗ್ಲೀಷ್ ಈಸ್ಟ್ ಕಂಪನಿಯ ಪ್ರಥಮ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ ಮತ್ತು ಇತರರು ಉಲ್ಲೇಖಸಿದ ಆಧಾರದಿಂದ ಈ ಕೃತಿಯನ್ನು ರಚಿಸಿದ್ದಾರೆ.
ಈಗಾಗಲೇ 36 ಕೃತಿಗಳನ್ನು ರಚಿಸಿದ ನಟರಾಜರ ‘ಕೋಶ ಓದು, ದೇಶ ಸುತ್ತು’ ಎಂಬ ಗಾದೆಯನ್ನು ಅನುಷ್ಠಾನಕ್ಕೆ ತಂದು ದೇಶ-ವಿದೇಶಗಳ ಪರ್ಯಟನೆ ಮಾಡಿ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಭಾರತೀಯರಲ್ಲಿ ಅದರಲ್ಲೂ ಕನ್ನಡಿಗರಲ್ಲಿ ಇತಿಹಾಸ ಪ್ರಜ್ಞೆ ಬೆಳಸುವ ನಿಟ್ಟಿನಲ್ಲಿ ಅವರು ಇತಿಹಾಸದ ಬಗ್ಗೆ ಕೃತಿಗಳನ್ನು ರಚಿಸಿ ಹಂಚುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಪ್ರಕಾಶಕರು ಕಲ್ಕತ್ತ ನಗರದ ಉಗಮ ಮೂರು ಹಳ್ಳಿಗಳಿಂದ ಆಯಿತೆಂದು ಅಭಿಪ್ರಾಯಪಡುತ್ತಾರೆ. ಕಾಲಿಕಟ್, ಗೋಬಿಂದಪುರ ಮತ್ತು ಸಸಾನುರೆ ಈ ಹಳ್ಳಿಗಳು ಮತ್ತು ಇತರ ನೆರೆ ಹೊರೆಯ ಪ್ರದೇಶಗಳು ಮೊಘಲ್ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದು, ಅದರ ಅಧೀನ ಪ್ರಭುವಾಗಿ ಮುರ್ಶಿದಾಬಾದ್ ಸುಲ್ತಾನರು ಆಳುತ್ತಿದ್ದರು. ಸಾಮ್ರಾಟರ ಪರವಾಗಿ ಜಮೀನಿನ ಕರ ವಸೂಲಿ ಮಾಡಲು ಜಮೀನ್ದಾರರು ದೇಣಿಗೆ ನೀಡುವ ಪದ್ಧತಿ ಇತ್ತು ಹೀಗಾಗಿ ಈ ಜಮೀನ್ದಾರರು, ಪುಡಿರಾಜರಾಗಿ ಆಳುತ್ತಿದ್ದರು.
ಇಂಗ್ಲೀಷರು ಭಾರತಕ್ಕೆ ಬಂದು ಸೂರತ್ ನಗರದಲ್ಲಿ ತನ್ನ ಕಾರ್ಖಾನೆ ಮತ್ತು ಗೊಡೌನಗಳನ್ನು ಸ್ಥಾಪಿಸಿದರು. ಅದಕ್ಕಾಗಿ ದೆಹಲಿಯಲ್ಲಿ ಆಳುತ್ತಿದ್ದ ಮೊಘಲ್ ಜಹಂಗೀರನ ಅಪ್ಪಣೆ ಪಡೆಯಬೇಕಾಯಿತು 1612 ರಲ್ಲಿ ಯಾವಾಗ ಇಂಗ್ಲೀಷ ನೌಕಾ ಪಡೆಗಳು ಸೂರತ್ ಬಂದರಿನಲ್ಲಿ ಕಾಯುತ್ತಿದ್ದ ಪೋರ್ಚುಗೀಸರ ಹಡಗುಗಳನ್ನು ನಾಶಪಡಿಸಿದವೋ ಆಗ ಜಹಾಂಗೀರನಿಗೆ ಇಂಗ್ಲೀಷ ನೌಕಾ ಸಾಮರ್ಥ್ಯದ ಬಗ್ಗೆ ಗೌರವ ಉಂಟಾಯಿತು.
ಪೋರ್ಚುಗೀಸರು ಅರೇಬಿಯಾ ಸಮುದ್ರದಲ್ಲಿ ತಮ್ಮ ನೌಕಾ ಪಡೆ ಇರಿಸಿ ಭಾರತದಿಂದ ಮೆಕ್ಕಾ ಯಾತ್ರೆ ಮಾಡುತ್ತಿದ್ದ ಹಡಗುಗಳ ಮೇಲೆ ಹದ್ದಿನ ಕಣ್ಣು ಇರಿಸಿ ತೊಂದರೆ ತಕರಾರು ಮಾಡುತ್ತಿದ್ದನ್ನು ಸಹಿಸದ ಮೊಘಲರಿಗೆ ಬಲಿಷ್ಠ ಮಿತ್ರನೊಬ್ಬನ ಆಸರೆ ಬೇಕಾಗಿತ್ತು.
1618 ರಲ್ಲಿ ಇಂಗ್ಲೀಷರು ಒಪ್ಪಂದ ಮಾಡಿಕೊಂಡರು ಆ ಒಪ್ಪಂದದ ಪ್ರಕಾರ ಸೂರತನಲ್ಲಿ ಠಾಣೆ ಮತ್ತು ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಲಾಯಿತು. ಇಂಗ್ಲೀಷರು ತಮ್ಮೊಂದಿಗೆ ಒಂದು ಕೈಯಲ್ಲಿ ಬೈಬಲ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಗನ್ ಹಿಡಿದುಕೊಂಡು ಭಾರತದ ನೆಲದಲ್ಲಿ ಅದನ್ನು ಸ್ಥಾಪಿಸಿದರು. ಅಲ್ಲಿಂದ ಇಂಗ್ಲೀಷ ಈಸ್ಟ ಇಂಡಿಯಾ ಕಂಪನಿಯು ಭಾರತದಲ್ಲಿ ವ್ಯಾಪಾರದೊಂದಿಗೆ ರಾಜಕೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ವಲಯಗಳಲ್ಲಿ ತಮ್ಮ ಕೈಚಳಕ ತೋರಿಸಲು ಪ್ರಾರಂಭಿಸಿದರು.
ಇಂಗ್ಲೀಷ ಕಂಪನಿಗೆ 1717 ರಲ್ಲಿ ದೊರಕಿದ ಮೊಘಲರ ಆಡಳಿತ ಅನುಸಾರ ಕಲ್ಕತ್ತಾದಲ್ಲಿ ಕಾರ್ಖಾನೆ ಮತ್ತು ದಕ್ಷಿಣದಲ್ಲಿ ಕೋಟೆ ನಿರ್ಮಿಸಿದ್ದರಿಂದ ಅವರು ತಮ್ಮ ರಕ್ಷಣೆ ಮತ್ತು ಬಲವಾದ ಠಾಣೆಯನ್ನು ಸ್ಥಾಪಿಸಿ ತಮ್ಮ ವ್ಯಾಪಾರ ವೃದ್ಧಿಗೆ ಅನೂಕೂಲ ಮಾಡಿ ಕೊಂಡರು. ಬಂಗಾಳ, ಹತ್ತಿ ರೇಷ್ಮೆ ಮತ್ತು ಪೆಟ್ಲು ಉಪ್ಪುಗಳಿಗೆ ಪ್ರಸಿದ್ಧ ಪಡೆದಿದ್ದು ಅವುಗಳ ವ್ಯಾಪಾರಕ್ಕೆ ಪಾಶ್ಚಾತ್ಯ ದೇಶಗಳು ಮುಗಿಬಿದ್ದಿದ್ದವು.ಈ ಪದಾರ್ಥಗಳ ವ್ಯಾಪಾರದಿಂದ ಮೊಘಲರಿಗೆ ಅಪಾರ ಲಾಭ ತಂದು ಕೊಟ್ಟಿದ್ದರೆ, ಆ ಲಾಭದಲ್ಲಿ ಇಂಗ್ಲೀಷ ಕಂಪನಿ ಪಾಲು ಪಡೆದುಕೊಂಡಿದ್ದನ್ನು ಸಹಿಸದ ಸರಕಾರ ಅನೇಕ ಅಡೆತಡೆಒದಗಿಸಿತು.
ಇಂಗ್ಲೀಷ ಕಂಪನಿ ಮಾತ್ರ ಕಲ್ಕತ್ತಾದಲ್ಲಿ ಒಂದು ಬೃಹತ್ ಕೊಟೆ ನಿರ್ಮಿಸಿದಲ್ಲದೆ ಕೋಟೆಯೊಳಗೆ ಒಂದು ಕಾಲೋನಿ ನಿರ್ಮಿಸಿ ವ್ಯಾಪಾರಸ್ಥರಿಗೆ ಕಂಪನಿ ಅಧಿಕಾರಿಗಳಿಗೆ ಗೃಹಗಳನ್ನು ನಿರ್ಮಿಸಿ ಅದರ ರಕ್ಷಣೆಯನ್ನು ಒದಗಿಸಲು ಸೈನ್ಯ ಪಡೆಯನ್ನು ಇರಿಸಿದ್ದರು.
ಕೋಟೆ ಕಟ್ಟಿ ಸೈನ್ಯವಿರಿಸಿಕೊಳ್ಳವುದನ್ನು ಸಹಿಸಲಿಲ್ಲ ಅವನು ತನ್ನ ಸೈನ್ಯ ತೆಗೆದುಕೊಂಡು ಕಲ್ಕತ್ತಾಗೆ ಧಾವಿಸಿದ. ಸೈನ್ಯದ ಮುಂದೆ ಇಂಗ್ಲೀಷರು ಪಲಾಯನಗೊಂಡರು ನವಾಬ ಸಿರಾಜ್-ಉದ್-ದೌಲನ ಸೈನ್ಯ ಕೋಟೆಗೋಡೆಯನ್ನು ಭೇದಿಸಿ ಒಳನುಗ್ಗಿ ಕಾದಾಡಲಾರಂಭಿಸಿದವು. ಕ್ಯಾಪ್ಟನ್ ಹಾಲವೆಲ್ ಎಂಬಾತ ಪಲಾಯನಗೊಳ್ಳದೆ ನವಾಬ ಸೈನ್ಯವನ್ನು ಎದುರಿಸಿದ 170 ಸೈನಿಕರಲ್ಲಿ 25 ಜನ ಸಾವನ್ನಪ್ಪಿದರೆ 50 ಮಂದಿ ಗಾಯಾಗೊಂಡರು ಹಾಲವೆಲ್ ಶರಣಾಗಿ ನವಾಬನ ಮುಂದೆ ನಿಂತ ಸೆರೆಹಿಡಿಯಲಾದ 146 ಮಂದಿಯನ್ನು ಇಂಗ್ಲೀಷರು ನಿರ್ಮಿಸಿದ ಕೋಟೆಯ ಒಂದು ಬೃಹತ್ ಕೋಣೆಯಲ್ಲಿ ಬಂಧಿಸಿಟ್ಟರು. ಇದನ್ನೇ ಇತಿಹಾಸಕಾರರು Black hole of culcutta ಎಂದು ಕರೆದು ಪ್ರಸಿದ್ಧ ಪಡಿಸಿದ್ದಾರೆ.
18 ನೇ ಶತಮಾನದ ಕಲ್ಕತ್ತಾ ನಗರದಲ್ಲಿ ಇಂಗ್ಲೀಷ ಕಂಪನಿಯ ಅಧಿಪತ್ಯವನ್ನು ಹೊತ್ತ ಮೊದಲಿನ ಗರ್ವನರ್ ಜನರಲ್ ವಾರನ್ ಹೇಸ್ಟಿಂಗ್ಸನು ಸರ್ವಾಧಿಕಾರಿ ಆಡಳಿತ ಮತ್ತು ಪ್ರಪ್ರಥಮ ಮುಖ್ಯ ನ್ಯಾಯಾಧೀಶ ಇಂಸೀಯ ಭ್ರಷ್ಟಾಚಾರ ಮತ್ತು ಅನಾಚಾರಗಳ ವಿರುದ್ಧ ಪ್ರಪ್ರಥಮ ಇಂಗ್ಲೀಷ ವಾರ ಪತ್ರಿಕೆಯನ್ನು ಪ್ರಾರಂಭಿಸಿ ಹೋರಾಟ ಜರುಗಿಸಿದ ಆಗಷ್ಟನ ಹಿರೇ ಒಬ್ಬ ಅಪಮಾನ್ಯ ಇಂಗ್ಲೀಷ ವ್ಯಕ್ತಿಯಾಗಿದ್ದ ಬಲಿಷ್ಠ ರಾಜ್ಯಾಧಿಕಾರಿಗಳು ವಿರುದ್ಧ ಅವರು ಎಸಗುತ್ತಿದ್ದ ಅನ್ಯಾಯ ಕಾರ್ಯಗಳ ಬಗ್ಗೆ ತೀಕ್ಷ್ಣ ಕಿಡಿಗೇಡಿತನ ಅವಮಾನ, ಅವಮಾನಕರ, ಅಸಹ್ಯ, ಮಾನಗೇಡಿ ಸಾಹಿತ್ಯ ರಚಿಸಿ ಸರಕಾರದ ಕಣ್ಣಿಗೆ ತುತ್ತಾದ.
ಕಲ್ಕತ್ತಾ ನಗರದ ಪ್ರಪ್ರಥಮ ವಾರಪತ್ರಿಕೆ ‘ಬೆಂಗಾಲ್ ಗೆಜೆಟ್’ 29-01-1780 ರಂದು ಪ್ರಾರಂಭಗೊಂಡು 1782 ರಲ್ಲಿ ಅಚುತ್ಯವಾಯಿತು.
ಅಧ್ಯಾಯ 1 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ರಾಬರ್ಟ ಕ್ಲೈವ್ ಕುರಿತು 2 ರಲ್ಲಿ ವಾರನ್ ಹೇಸ್ಟಿಂಗ್ಸ್ ಮತ್ತು ಫಿಲಿಪ್ ಫ್ರಾನ್ಸಿನ್ ಮೂರರಲ್ಲಿ ನಂದಕುಮಾರ 4 ರಲ್ಲಿ ವಾರೆನ್ ಹೇಸ್ಟಿಂಗ್ – ಫ್ರಾನ್ಸಿಸ್ ರ ಕದನ 5 ರಲ್ಲಿ ಮ್ಯಾಡ್ ಗ್ರಾಂಡ್ ಆರಲ್ಲಿ ಬಂಗಾಳ ಗೆಜೆಟ್ ಕುರಿತು ಜನವರಿ 29 ನೇ ತಾರೀಖು ಇಸವಿ 1780 ರಂದು ಏಶಿಯಾ ಖಂಡದ ಪ್ರಥಮ ಇಂಗ್ಲೀಷ ಪತ್ರಿಕೆ ಕಲ್ಕತ್ತಾ ನಗರದಲ್ಲಿ ಪ್ರಕಟಗೊಂಡಿತು. ಈ ಪತ್ರಿಕೆಯ ಸಂಸ್ಥಾಪಕ ಹೆಸರು ಜೇಮ್ಸ್ ಆಗಸ್ಟ್ ಹಿರೆ ಹೆಸರು “ಬೆಂಗಾಳ್ ಗೆಜೆಟ್” ಎರಡೆ ವರ್ಷಕ್ಕೆ ನಿಂತಿತು ಅಧ್ಯಾಯ 7 ರಲ್ಲಿ ರಿಚರ್ಡ ಬಾರ್ ವೆಲ್ ತನ್ನ ಬಂಗಲೋವನ್ನು ಕಲ್ಕತ್ತಾದಲ್ಲಿ ನಿರ್ಮಿಸಿ ಅದರಲ್ಲಿ ವಾಸಿಸಿದ ಅದನ್ನು ರೈಟರ್ಸ್ ಬಿಲ್ಡಿಂಗ್ ಎಂದು ಕರೆದ 1780 ರಲ್ಲಿ ಅತ ನಿವೃತ್ತಗೊಂಡ ಸ್ವದೇಶಕ್ಕೆ ವಾಪಾಸಾಗುವ ಮುನ್ನ ಆ ಮನೆಯನ್ನು 31720 ರೂಪಾಯಿಗಳಿಗೆ ಸರಕಾರಕ್ಕೆ ಬಾಡಿಗೆಗೆ ನೀಡಿದ. ಈಗ ಅದು ಬಂಗಾಳ ಸರಕಾರದ ಆಡಳಿತ ಕಛೇರಿಯಾಗಿ ನಿಂತಿದೆ. ಬಾರವೆಲ್ 63 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 1804 ರಲ್ಲಿ ಪ್ರಾಣ ತ್ಯಜಿಸಿದ.
ನಾನು ಆಸಕ್ತಿ ಮತ್ತು ಉತ್ಸಾಹದಿಂದ ಪುಸ್ತಕವನ್ನು ಓದಿದ್ದೇನೆ ಹೆಚ್ಚು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಕಲ್ಕತ್ತಾವನ್ನು ತಿಳಿದಿದೆ ಮತ್ತು ಕಡಿಮೆ ಬಹಿರಂಗಪಡಿಸಿದೆ ದುಃಖದ ನಗರದ ಬಗ್ಗೆ ಮತ್ತು ಭಾರತೀಯರಿಗೆ ಕಣ್ಣಿನ ನೋಯುತ್ತಿರುವ ಬಗ್ಗೆ ಪ್ರಸಿದ್ಧ ಇತಿಹಾಸಕಾರ ಮತ್ತು ಕನ್ನಡ ಲೇಖಕರ ಬರಹಗಳನ್ನು ಸಂಶೋಧಿಸಿದ್ದಾರೆ ಅಗುಂಬೆ ನಟರಾಜ್. ಕೊಳಕು ರಾಜಕೀಯದೊಂದಿಗೆ ಕೊಳಕು ನಗರದ ಹಲವಾರು ಅಂಶಗಳು ಅನೇಕರಿಗೆ ತಿಳಿದಿಲ್ಲದವರು ನಟರಾಜ್ ಅವರು ಅಧಿಕೃತವಾಗಿ ಮಾಡಿದ್ದಾರೆ.
ಓದುಗ ಸ್ನೇಹಿ ವಿಧಾನವನ್ನು ಅರ್ಥಮಾಡಿಕೊಳ್ಳಿ. ಚಕಿತಗೊಳಿಸುವ ಸಂಗತಿಗಳಿಂದ ಪ್ರಾರಂಭವಾಗುತ್ತದೆ ಕಾರ್ಯಾಚರಣೆಯ ಕಪ್ಪು ಕುಳಿ (ಕಪ್ಪು) ಮೂಲಕ ಬ್ರಿಟಿಷರ ಸಂಪೂರ್ಣ ಕ್ರೌರ್ಯ ಕಲ್ಕತ್ತಾದ ರಂಧ್ರ .2000 ನಂತರವೂ ಕ್ಷಮಿಸಿ ಕಲ್ಕತ್ತಾದ ಕಥೆಯನ್ನು ಓದುವುದು ವರ್ಷಗಳು ರಕ್ತ ಕುದಿಯುತ್ತವೆ !!. ಬ್ರಿಟಿಷರು ಉದ್ದೇಶಪೂರ್ವಕ ಕಿಡಿಗೇಡಿತನ, ಅವಮಾನಿಸಲು ಮತ್ತು ಕಲ್ಕತ್ತಾದ ಭಾರತೀಯರನ್ನು ಹತ್ಯೆ ನಾಟಕೀಯವಾಗಿ ಚಿತ್ರಿಸಲಾಗಿದೆ ನಟರಾಜ್ ಪುಟದ ನಂತರ ವಾಸ್ತವಿಕ ರೀತಿಯಲ್ಲಿ ಪುಟ, ಅಧ್ಯಾಯದ ನಂತರ ಅಧ್ಯಾಯ ಓದುಗರ ಹಿಡಿತದ ಗಮನವನ್ನು ಹಿಡಿದಿಟ್ಟುಕೊಳ್ಳುವುದು. ಖುದ್ದು ತಿಳಿಯಲು ಸೋನಾರ್ ಕಲ್ಕತ್ತಾದ ದುಃಖಕರ ಇತಿಹಾಸದ ವಿವರವನ್ನು ಒಬ್ಬರು ಓದಬೇಕು ಆಳವಾದ ಗಮನ ಮತ್ತು ಆಸಕ್ತಿಯಿಂದ ಪೂರ್ಣವಾಗಿ ಪುಸ್ತಕ ಓದಬೇಕು.
ಈ ಪುಸ್ತಕವನ್ನು ಬರೆಯಲು ಅಸಂಖ್ಯಾತ ಮತ್ತು ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದಾರೆ. ಲೇನ್ಗಳಿಂದ ಕೊಳಕು ಮೂಲಕ ಸೈಕಲ್ ರಿಕ್ಷಾ ಮತ್ತು ಆಟೋ ರಿಕ್ಷಾದಲ್ಲಿ ಹತಾಶೆ ಕಲ್ಕತ್ತಾ ಮುಂದುವರಿದ ವಯಸ್ಸಿನಲ್ಲಿ ಅವರ ಸ್ಥಿರತೆ ಮತ್ತು ಶಕ್ತಿಯ ಮಟ್ಟವನ್ನು ನಾವು ಮೆಚ್ಚುತ್ತೇವೆ. ಡಾ. ಎಚ್.ಕೆ ಲಕ್ಷಣರಾವ್.
ಇಂತಹ ಇಳಿವಯಸ್ಸಿನಲ್ಲಿ ಮತ್ತೊಂದು ಪುಸ್ತಕ ಬರೆಯವಲ್ಲಿ ನಿರತರಾಗಿದ್ದಾರೆ. ದೇವರು ಇವರಿಗೆ ಆರೋಗ್ಯ ನೀಡಲಿ ಇಂತಹ ಪುಸ್ತಕಗಳನ್ನು ವಿಶ್ವವಿದ್ಯಾಲಯಗಳು ಪಠ್ಯ ಪುಸ್ತಕಗಳಾಗಿ ಆಯ್ಕೆ ಮಾಡಲಿ ಎಂದು ಆಶಿಸಿವೆ. ಅವರಿಗೆ ಈ ಕೃತಿ ಕುರಿತು ಸಮಸ್ತ ಕನ್ನಡ ಓದುಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ
ಇವರ ಚರವಾಣಿ 9481423004.
ಶ್ರೀ ಎಂ.ವೈ. ಮೆಣಸಿನಕಾಯಿ
ಬೆಳಗಾವಿ.
9449209570