ಪ್ರಜಾ ಭೂಷಣ ಪ್ರಶಸ್ತಿ ಸಾಲಕ್ಕಿಗೆ ಸನ್ಮಾನ

Must Read

ಸಿಂದಗಿ: ಪಟ್ಟಣದ ತಾಲೂಕ ಪಂಚಾಯತ ಮಾಜಿ ಅದ್ಯಕ್ಷಿಣಿ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಅವರ ಒಂದು ವರ್ಷದ ಆಡಳಿತ ಗಮನಿಸಿ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ಆಯ್ಕೆಗೊಂಡ ನಿಮಿತ್ತವಾಗಿ ಅವರನ್ನು ಜ್ಯೋತಿ ನಗರದ ತಾಲೂಕಾ ಪಂಚಾಯತ ನಾಮ ನಿರ್ದೇಶಕ ಶಿವುಕುಮಾರ ಬಿರಾದಾರ (ಮನ್ನಾಪೂರ ) ಅವರ ಸದನದಲ್ಲಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಸರಳ ಸಮಾರಂಭದಲ್ಲಿ ನಾದ ಸರಕಾರಿ ಪ್ರೌಢ ಶಾಲೆಯ ದೈಹಿಕ ನಿರ್ದೇಶಕ ಸಂಗನಗೌಡ ಹಚಡದ ಮಾತನಾಡಿ ಅಧಿಕಾರ ಇರುವಾಗ ಜನ ಸಾಮಾನ್ಯರೊಂದಿಗೆ ನೋವು ನಲಿವು ಆಲಿಸಬೇಕು.ಸತತ ಸಮಾಜ ಸೇವೆ ಮಾಡಬೇಕು. ಸರಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸಬೇಕು. ಈ ಪ್ರಕಾರವಾಗಿ ಸೇವೆ ಮಾಡಿದವರಿಗೆ ಕರ್ನಾಟಕ ಪ್ರಜಾ ಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತದೆ ಅದರಲ್ಲಿ ಸಿಂದಗಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಶ್ರೀಮತಿ ಮಹಾನಂದ ಅಮರೇಶ ಸಾಲಕ್ಕಿ ಆಯ್ಕೆಗೊಂಡಿರುವದಕ್ಕೆ ಅನಂತ ಅಭಿನಂದನೆಗಳು ತಿಳಿಸಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ. ಶಿಕ್ಷಕ ಬಸವರಾಜ ಅಗಸರ,.ಸೊಂಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ ಎನ್ ಶಿರಕನಳ್ಳಿ ಸೇರಿದಂತೆ ಹಲವರು ಭಾಗವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group